ಮಂಗಳೂರು : ಅಹಿಂದದ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ., ಎಸ್.ಟಿ., ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದಂತಹ ಜನರಿಗೆ ಯಾವುದೇ ರೀತಿಯ ಪ್ರೋತ್ಸಾಹವಾಗಲಿ, ಉತ್ತೇಜನವಾಗಲಿ ಕೊಡುತ್ತಿರುವಂತೆ ಕಾಣುತ್ತಿಲ್ಲ. ರಾಜ್ಯದ ಬಜೆಟ್ನಲ್ಲಿ ನೀಡಿರುವ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ.
ಜೊತೆಗೆ ಕೇಂದ್ರ ಸರಕಾರದ ಈ ವರ್ಗದ ಉನ್ನತಿಗೆ ಇರುವಂತ ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರಾಶಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬಿ.ಜೆ.ಪಿಯ ರಾಜ್ಯದ ಹಿಂದುಳಿದ ವರ್ಗ, ಎಸ್.ಸಿ., ಎಸ್.ಟಿ., ವರ್ಗಕ್ಕೆ ಸೇರಿದ ಪ್ರಮುಖರ ಚಿಂತನಾ ಸಭೆಯು ನ.2 ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಲಿದ್ದು ಈ ಸಭೆಗೆ ರಾಜ್ಯದ ಉಪಾಧ್ಯಕ್ಷರಾದ ಶ್ರೀ ವಿ. ಸುನೀಲ್ ಕುಮಾರ್ರವರು, ಹಿಂದುಳಿದ ವರ್ಗ ಮೋರ್ಚಾದ ರಾಜ್ಯಾಧ್ಯಕ್ಷರಾದ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ರವರು, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಶ್ರೀರಾಮುಲು, ರೇವು ನಾಯಕ್ ಬೆಳಮಗಿ ಹಾಗೂ ಗೋವಿಂದ ಕಾರಜೋಳರವರು, ವಿಧಾನ ಪರಿಷತ್ತಿನ ಸದಸ್ಯರಾದ ಡಿ.ಎಸ್.ವೀರಯ್ಯ, ರಾಜ್ಯದ ಕಾರ್ಯದರ್ಶಿಗಳಾದ ರೇಖಾ ಹುಲಿಯಪ್ಪ ಗೌಡ ಹಾಗೂ ರಾಜ್ಯದ ಇತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಪ್ಟಿಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಈ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಸರಕಾರಗಳು ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳು, ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯಗಳು ಹಾಗೂ ಪಕ್ಷದೊಳಗೆ ಈ ವರ್ಗದ ನೇತ್ರತ್ವದ ವಿಕಾಸ ಮಾಡುವ ಪ್ರಯತ್ನಗಳ ಕುರಿತು ಚರ್ಚೆ ಹಾಗೂ ನಿರ್ಣಯಗಳು ನಡೆಯಲಿದೆ.
ಈ ಸಭೆಗೆ ಹಿಂದುಳಿದ ವರ್ಗ, ಎಸ್.ಸಿ., ಎಸ್.ಟಿ ಮೋರ್ಚಾಗಳ ಮಂಡಲದ ಮೇಲ್ಪಟ್ಟ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪಧಾಧಿಕಾರಿಗಳು ಹಾಗೂ ಮೇಲ್ಪಟ್ಟವರು, ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ, ಮಹಾನಗರಪಾಲಿಕೆ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಹಾಗೂ ಈ ವರ್ಗಗಕ್ಕೆ ಸೇರಿದ ಚುನಾಯಿತ ಪ್ರತಿನಿಧಿಗಳು, ಮಾಜಿ ಹಾಗೂ ಹಾಲಿ ಶಾಸಕರು ಉಪಸ್ಥಿತರಿರುತ್ತಾರೆ.
ಸತೀಶ್ ಕುಂಪಲ, ರುಕ್ಮಯ್ಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ವಿಕಾಸ್ ಪುತ್ತೂರು, ಉಮಾನಾಥ ಕೋಟ್ಯಾನ್, ಮೋಹನ್ ರಾಜ್ ಕೋಟೆಕಾರ್, ಮಂಜುನಾಥ ನಾಯ್ಕ್, ಕೃಷ್ಣಪ್ಪ ಪೂಜಾರಿ, ಭಾಗೀರಥಿ, ಕಸ್ತೂರಿ ಪಂಜ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.