ಹರಿಯಾಣ : 20 ಅಂತಸ್ತಿನ ರಾವಣನನ್ನು ಹರಿಯಾಣದ ಅಂಬಾಲದ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ ಈ ಮೂಲಕ ಗಿನ್ನಿಸ್ ದಾಖಲೆಗೆ ಸೇರಲಿದೆ. 210 ಅಡಿ ಎತ್ತರದ 60 ಕಿ.ಮಿ. ವ್ಯಾಪ್ತಿಯಲ್ಲಿ ಈ ರಾವಣ ಜನಾಕರ್ಷಣೆಗೆ ಪಾತ್ರವಾಗಿದ್ದಾನೆ. ವಿಜಯದಶಮಿಯಂದು ರಾವಣ ದಹನ ನಡೆಯಲಿದೆ. ರಾವಣದಹನವನ್ನು ಕೆಟ್ಟದರ ಮೇಲೆ ಒಳ್ಳೆದರ ವಿಜಯ ಎಂದು ಕರೆಯಲಾಗುತ್ತದೆ.
ಅಕ್ಟೋಬರ್ 16 ರಂದು ಈ ರಾವಣನನ್ನು ನಿಲ್ಲಿಸಲಾಗಿದ್ದು. ರಾವಣ ನಿಲ್ಲಿಸಲು ಕ್ರೇನ್ಗಳನ್ನು ಬಳಸಲಾಗಿತ್ತು. ಸಾವಿರಾರು ಜನರು ಎತ್ತರದ ರಾವಣನನ್ನು ನೋಡಲು ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಗ್ರಾಮದ ಮುಖ್ಯಸ್ಥರಾದ ತೇಜೆಂದರ್ ಚೌಹಾಣ್ ಹೇಳುತ್ತಾರೆ.
ಬರಾರ ಗ್ರಾಮದಲ್ಲಿ ರಾವಣ ರಚನೆ ದಾಖಲೆ ರಚಿಸುತ್ತಿದೆ. ಈ ಮೊದಲು 2007 ರಲ್ಲಿ 151-ಅಡಿ ರಾವಣ ರಚಿಸಿದ್ದು, 2008 ರಲ್ಲಿ ಇಲ್ಲಿ 171 ಅಡಿ ಮತ್ತು 2009 ರಲ್ಲಿ 175ಅಡಿ ಎತ್ತರದಲ್ಲಿ ನಿರ್ಮಿಸಲಾಗಿತ್ತು. ಈ ವರ್ಷ 210 ಅಡಿ ಎತ್ತರದ ರಾವಣನನ್ನು ನಿರ್ಮಿಸಲಾಗಿದೆ. ಈ ರಾವಣ ಸುಮಾರು 3500 ಕೆಜಿ ಭಾರವಿದ್ದು, ರಾವಣ ದಹನದ ಪಟಾಕಿಗಳಿಗೆ 1ಲಕ್ಷ ವೆಚ್ಚಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.