
1893 ರಲ್ಲಿ, ಅಮೆರಿಕ ನೆಲದಲ್ಲಿ ಬಿರುಗಾಳಿಯೊಂದು ಎದ್ದಿತು, ಈ ಬಿರುಗಾಳಿ ಸನಾತನ ಧರ್ಮದ ಬೆಳಕು ಮತ್ತು ಕ್ರಿಶ್ಚಿಯನ್ ಮತ ಪ್ರಚಾರದ ನಡುವಿನ ಸಂಘರ್ಷವನ್ನು ಶಾಶ್ವತವಾಗಿ ಇತಿಹಾಸದ ಪುಟದಲ್ಲಿ ದಾಖಲಿಸಿ ಬಿಟ್ಟಿತು. ಪಂಡಿತ ರಮಾಬಾಯಿಯವರ ಕ್ರಿಶ್ಚಿಯನ್ ಪ್ರಭಾವದ ವಿರುದ್ಧ ಸ್ವಾಮಿ ವಿವೇಕಾನಂದರ ತೀವ್ರ ವಿರೋಧದ ಬಿರುಗಾಳಿ ಇದಾಗಿತ್ತು. ಏಪ್ರಿಲ್ 23, 1858 ರಂದು ಜನಿಸಿದ ರಮಾಬಾಯಿ ಏಪ್ರಿಲ್ 5, 1922 ರಂದು ಮುಂಬೈನಲ್ಲಿ ನಿಧನರಾದರು. ಒಂದು ಕಾಲದಲ್ಲಿ ಹಿಂದೂ ಸಮಾಜದ ಘನತೆಯ ಸಂಕೇತವಾಗಿದ್ದ ಭಾರತೀಯ ವಿದ್ವಾಂಸೆಯೊಬ್ಬಳು ಕ್ರಿಶ್ಚಿಯನ್ ಮತಕ್ಕೆ ಬಲಿಯಾಗಿ, ಅಮೆರಿಕಾದ ವೇದಿಕೆಗಳಲ್ಲಿ ತನ್ನ ದೇಶದ ಮಹಾನ್ ಸಂತನ ವಿರುದ್ಧವೇ ಪಿತೂರಿ ನಡೆಸಲು ಹೇಗೆ ಪ್ರಾರಂಭಿಸಿದಳು ಎಂಬುದನ್ನು ಈ ಲೇಖನ ವಿವರಿಸುತ್ತದೆ. ಈ ಕಥೆಯು ಹಣ ಮತ್ತು ಖ್ಯಾತಿ ಪಡೆಯುವ ದುರಾಸೆಯು ಸತ್ಯವನ್ನು ಹೇಗೆ ಮರೆಮಾಚುತ್ತದೆ ಎಂಬುದರ ದ್ಯೋತಕವಾಗಿದೆ, ಅಮೆರಿಕಾದಲ್ಲಿ ರಮಾಬಾಯಿ ಸಂಘವು ವಿವೇಕಾನಂದರ ಧ್ವನಿಯನ್ನು ನಿಗ್ರಹಿಸಲು ಹೇಗೆ ಪ್ರಯತ್ನಿಸಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ..
1893ರಲ್ಲಿ ಶಿಕಾಗೋದ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ಸನಾತನ ಭಾರತೀಯ ಸಮಾಜದ ಮಹಿಮೆಯನ್ನು ಇಡೀ ಜಗತ್ತಿನ ಮುಂದೆ ವಿವರಿಸಿದರು. ಆದರೆ ಪಂಡಿತಾ ರಮಾಬಾಯಿಯ ಸೂಚನೆಯ ಮೇರೆಗೆ ಅವರಿಂದ ಸ್ಥಾಪಿತವಾದ ರಮಾಬಾಯಿ ಕೇಂದ್ರಗಳು ಸ್ವಾಮಿ ವಿವೇಕಾನಂದರ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವು.
ವಾಸ್ತವವಾಗಿ, ಪಂಡಿತಾ ರಮಾಬಾಯಿ ಮಾರ್ಚ್ 1886 ರಿಂದ ನವೆಂಬರ್ 1888 ರವರೆಗೆ ಅಮೆರಿಕದಲ್ಲಿಯೇ ಇದ್ದರು. ಈ ಸಮಯದಲ್ಲಿ, ಅವರು ಹಿಂದೂ ಮಹಿಳೆಯರು ಮತ್ತು ಹುಡುಗಿಯರ ಕಷ್ಟಗಳು ಮತ್ತು ಸನಾತನ ಧರ್ಮದ ದುಷ್ಪರಿಣಾಮಗಳ ಕುರಿತು ವಿವಿಧ ಸ್ಥಳಗಳಲ್ಲಿ ಉಪನ್ಯಾಸ ನೀಡಿದರು (ಕೆಲವು ನಿಜವಾದವು, ಕೆಲವು ಕಟ್ಟುಕಥೆ). 1887 ರಲ್ಲಿ, ಅವರು “ದಿ ಹೈ-ಕೇಸ್ಟ್ ಹಿಂದೂ ವುಮನ್” ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕದಲ್ಲಿ ವಿವರಿಸಲಾದ ನೋವಿನ ಕಥೆಗಳು ಅಮೇರಿಕನ್ ಜನರ ಹೃದಯವನ್ನು ಮಿಡಿಯುವಂತೆ ಮಾಡಿದವು. ಒಂದು ವರ್ಷದೊಳಗೆ, ರಮಾಬಾಯಿ ಸಂಘವನ್ನು ಬೋಸ್ಟನ್ನಲ್ಲಿ ರಚಿಸಲಾಯಿತು ಮತ್ತು ಅದರ ಅಡಿಯಲ್ಲಿ, 63 ಸ್ಥಳಗಳಲ್ಲಿ ರಮಾಬಾಯಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಭಾರತದಲ್ಲಿ ತುಳಿತಕ್ಕೊಳಗಾದ ಮಹಿಳೆಯರಿಗಾಗಿ ಶಾಲೆಗಳನ್ನು ತೆರೆಯುವುದು ಅದರ ಗುರಿಯಾಗಿತ್ತು, ಅದಕ್ಕಾಗಿ ದೇಣಿಗೆಗಳನ್ನು ಪಡೆಯಲಾಯಿತು. ಮೊದಲ ವರ್ಷದಲ್ಲಿ, ಅವರು $16,000 ದೇಣಿಗೆಗಳನ್ನು ಪಡೆದರು, ಇದು ಇಂದಿನ ಸರಿಸುಮಾರು 5 ಕೋಟಿ ರೂಪಾಯಿಗಳಿಗೆ ಸಮಾನವಾಗಿದೆ. ಇದು ಕೇವಲ ಆರಂಭವಾಗಿತ್ತು; ದೇಣಿಗೆಗಳು ಬೆಳೆಯುತ್ತಲೇ ಇದ್ದವು. ರಮಾಬಾಯಿ 1883 ರಲ್ಲಿ ಇಂಗ್ಲೆಂಡ್ಗೆ ಹೋಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡರು ಎಂಬುದು ಇಲ್ಲಿ ಗಮನಾರ್ಹ. ಅಲ್ಲಿಂದ, ಕ್ರಿಶ್ಚಿಯನ್ ಮತದಿಂದ ಪ್ರೇರಿತರಾಗಿ, ಅವರು 1886 ರಲ್ಲಿ ಅಮೆರಿಕಕ್ಕೆ ಬಂದರು. ನಂತರ ರಮಾಬಾಯಿ ಭಾರತಕ್ಕೆ ಮರಳಿದ್ದರೂ, ಅಮೆರಿಕದಲ್ಲಿದ್ದ ಈ ಕೇಂದ್ರಗಳು ಹಿಂದೂ ಮಹಿಳೆಯರ “ದುಃಖ” ವನ್ನು ಪ್ರಚಾರ ಮಾಡುವ ಮೂಲಕ ಅಮೇರಿಕನ್ ಕ್ರಿಶ್ಚಿಯನ್ ಸಮುದಾಯದಿಂದ ಲಕ್ಷಾಂತರ ಡಾಲರ್ ದೇಣಿಗೆ ಸಂಗ್ರಹಿಸುತ್ತಿದ್ದವು.
ಈ ನಡುವೆ ವಿವೇಕಾನಂದರ ಭಾಷಣಗಳು ಸನಾತನ ಸಮಾಜದ ಸದ್ಗುಣಗಳನ್ನು – ಮಹಿಳೆಯರ ಘನತೆ, ವಿಧವೆಯರ ರಕ್ಷಣೆ ಮತ್ತು ಸಾಂಸ್ಕೃತಿಕ ಘನತೆಯನ್ನು ಎತ್ತಿ ತೋರಿಸಿದವು. ಈ ಮೂಲಕ ರಮಾಬಾಯಿಯವರು ಹರಡಿದ್ದ “ಹಿಂದೂ ಸಮಾಜವು ಅನಾಗರಿಕ” ಎಂಬ ಚಿತ್ರಣವನ್ನು ಛಿದ್ರಗೊಳಿಸಿದವು. ಕ್ರಿಶ್ಚಿಯನ್ ಮತದ ಪ್ರಭಾವದಡಿಯಲ್ಲಿ ಸಿಲುಕಿದ್ದ ರಮಾಬಾಯಿ ಮತ್ತು ಅವರ ಕೇಂದ್ರಗಳಲ್ಲಿರುವ ಮಹಿಳೆಯರು ವಿವೇಕಾನಂದರ ಬಗ್ಗೆ ಭಯಪಡಲು ಆರಂಭಿಸಿದರು. ನಮ್ಮ ಇದುವರೆಗೆ ಹಿಂದೂ ಧರ್ಮದ ಬಗ್ಗೆ ಹರಡಿದ್ದ ಸಂಗತಿಗಳು ಸಳ್ಳು ಎಂದು ಸಾಬೀತಾದರೆ ದೇಣಿಗೆಗಳು ನಿಲ್ಲುತ್ತವೆ ಮತ್ತು ಅವರ ಸಂಪೂರ್ಣ ಮಿಷನರಿ ವ್ಯವಹಾರವು ಕುಸಿಯುತ್ತದೆ ಎಂಬುದು ಅವರ ಭಯವಾಗಿತ್ತು. ರಮಾಬಾಯಿಯವರು ಕ್ರಿಶ್ಚಿಯನ್ ಮತಕ್ಕೆ ಆದ ಮತಾಂತರವು ಹಿಂದೂ ಸಂಸ್ಕೃತಿಯ ವಿರುದ್ಧದ ಅಸ್ತ್ರವಾಗಿ ಮಾರ್ಪಟ್ಟಿತ್ತು.
ಸ್ವಾಮೀಜಿ ಸನಾತನದ ಸಕಾರಾತ್ಮಕ ಸತ್ಯಗಳನ್ನು ಪ್ರಚಾರ ಮಾಡುತ್ತಿದ್ದನ್ನು ಅರಗಿಸಿಕೊಳ್ಳುವುದು ರಮಾಬಾಯಿ ಮತ್ತು ಹಿಂಬಾಲಕರಿಗೆ ಕಷ್ಟವಾಯಿತು, ರಮಾಬಾಯಿ ಕೇಂದ್ರದ ಮಹಿಳೆಯರು ಎಲ್ಲೆಡೆ ಸಭೆಗಳು ಮತ್ತು ಪತ್ರಿಕಾ ಪ್ರಚಾರಗಳನ್ನು ನಡೆಸಲು ಪ್ರಾರಂಭಿಸಿದರು. ಅವರು ವಿವೇಕಾನಂದರನ್ನು “ಹಿಂದೂ ಮೂಲಭೂತವಾದಿ” ಮತ್ತು “ಮಹಿಳಾ ದಮನಕಾರಿ” ಎಂದು ಖಂಡಿಸಲು ಪ್ರಾರಂಭಿಸಿದರು. ಕ್ರಿಶ್ಚಿಯನ್ ಮತದ ಪ್ರಭಾವ ಎಷ್ಟು ಆಳವಾಗಿತ್ತೆಂದರೆ, ಒಂದು ಕಾಲದಲ್ಲಿ ಭಾರತೀಯರಾಗಿದ್ದ ಈ ಮಹಿಳೆಯರು ಅಮೆರಿಕನ್ ಚರ್ಚ್ಗಳಿಂದ ಬಂದ ದೇಣಿಗೆಗಳಿಗಾಗಿ ತಮ್ಮ ಪೂರ್ವಜರ ಸಂಸ್ಕೃತಿಯ ಬಗ್ಗೆ ತುಚ್ಛವಾಗಿ ಮಾತನಾಡಲಾರಂಭಿಸಿದರು. ಪತ್ರಿಕೆಗಳಿಗೆ ಸ್ವಾಮೀಜಿ ವಿರುದ್ಧ ಪತ್ರಗಳನ್ನು ಕಳುಹಿಸಿದರು, ಲೇಖನಗಳನ್ನು ಬರೆಯಲಾಯಿತು ಮತ್ತು ವಿವೇಕಾನಂದರು ಪಾಶ್ಚಿಮಾತ್ಯ ನಾಗರಿಕತೆಯನ್ನು ಅವಹೇಳನ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ಹರಡಲಾಯಿತು. ರಮಾಬಾಯಿಯವರ ಹಣ ಮತ್ತು ಅವರ ಮಿಷನರಿ ಜಾಲವು ಈ ಅಭಿಯಾನಕ್ಕೆ ಉತ್ತೇಜನ ನೀಡಿತು. ವಿರೋಧವು ಎಷ್ಟು ತೀವ್ರವಾಗಿತ್ತೆಂದರೆ ವಿವೇಕಾನಂದರು ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸಿದರು, ಆದರೆ ಅವರು ಎಂದಿಗೂ ಹಿಂದೆ ಸರಿಯಲಿಲ್ಲ. ಬದಲಾಗಿ, ಅವರು ಇದನ್ನು ಒಂದು ಅವಕಾಶವಾಗಿ ನೋಡಿದರು ಮತ್ತು ಸತ್ಯವನ್ನು ಇನ್ನಷ್ಟು ಬಲವಾಗಿ ಪ್ರಸ್ತುತಪಡಿಸಲು ಸಿದ್ಧರಾದರು. ಸ್ವಾಮೀಜಿಯ ಈ ನಿಲುವುದು ರಮಾಬಾಯಿಯವರ ಕಾರ್ಯಗಳ ಹಿಂದಿನ ನಿಜವಾದ ಸತ್ಯವನ್ನು ಬಹಿರಂಗಪಡಿಸಲಾರಂಭಿಸಿತು, ಸೇವೆಯ ಹೆಸರಿನಲ್ಲಿ ನಡೆಸಲಾಗುತ್ತಿದ್ದ ನಿಧಿಸಂಗ್ರಹಣೆಯನ್ನು ಪ್ರಶ್ನೆ ಮಾಡಿತು.
ಅಮೆರಿಕಾಕ್ಕೆ ಬಂದ ನಂತರ, ವಿವೇಕಾನಂದರು ಬೋಸ್ಟನ್ನ ಲೇಡೀಸ್ ಕ್ಲಬ್ಗೆ ಭೇಟಿ ನೀಡಿದರು. ಈ ಕ್ಲಬ್ ರಮಾಬಾಯಿ ಕೇಂದ್ರದ ಕ್ರಿಶ್ಚಿಯನ್ ಪ್ರಭಾವಿತ ಮಹಿಳೆಯರಿಂದ ತುಂಬಿತ್ತು. ಸ್ವಾಮೀಜಿ ಅವರನ್ನು ಉದ್ದೇಶಿಸಿ ಶಾಂತವಾಗಿ ಮಾತನಾಡಿದರು, ಭಾರತೀಯ ಮಹಿಳೆಯರ ನಿಜವಾದ ಸ್ಥಿತಿಯನ್ನು ವಿವರಿಸಿದರು, ಹತ್ತೊಂಬತ್ತನೇ ಶತಮಾನದಲ್ಲಿ, ಹಿಂದೂ ವಿಧವೆಯರು ಮತ್ತು ಮಹಿಳೆಯರು ಅಮೇರಿಕನ್ ಮಹಿಳೆಯರಿಗಿಂತ ಹೆಚ್ಚಿನ ರಕ್ಷಣೆ ಮತ್ತು ಗೌರವವನ್ನು ಪಡೆಯುತ್ತಿದ್ದರು ಎಂಬುದನ್ನು ವಿವರಿಸಿದರು. ಆದರೆ ಅಲ್ಲಿ ಹಾಜರಿದ್ದ ರಮಾಬಾಯಿ ಕೇಂದ್ರದ ಮಹಿಳೆಯರು ಸತ್ಯವನ್ನು ಸ್ವೀಕರಿಸಲಿಲ್ಲ, ಏಕೆಂದರೆ ಕ್ರಿಶ್ಚಿಯನ್ ಮತವು ಸನಾತನ ಸತ್ಯವನ್ನು ಕೇಳಲು ನಿರಾಕರಿಸಿತ್ತು. ಕ್ಲಬ್ನಿಂದ ಹೊರಬಂದ ತಕ್ಷಣ ಈ ಮಹಿಳೆಯರು ತಮ್ಮ ಅಪಪ್ರಚಾರದ ಅಭಿಯಾನವನ್ನು ತೀವ್ರಗೊಳಿಸಿದರು. ವಿವೇಕಾನಂದರ ವಿರುದ್ಧ ಪತ್ರಿಕಾ ಲೇಖನಗಳು, ಪತ್ರಗಳು ಮತ್ತು ಅವಹೇಳನಗಳು ಮುಂದುವರೆದವು. ರಮಾಬಾಯಿಯ ಪ್ರಭಾವ ಇಲ್ಲಿ ಸ್ಪಷ್ಟವಾಗಿತ್ತು; ಅವರು ಹಿಂದೂ ವೇಷದಲ್ಲಿ ಕ್ರಿಶ್ಚಿಯನ್ ಮಿಷನರಿಯಾಗಿದ್ದರು, ಅವರಿಗೆ ದಾನಕ್ಕಿಂತ ಬೇರೇನೂ ಮುಖ್ಯವಾಗಿರಲಿಲ್ಲ. ವಿವೇಕಾನಂದರು ಈ ಸವಾಲನ್ನು ಸ್ವೀಕರಿಸಿದರು ಮತ್ತು ಮುಂದೆ ಸಾಗಿದರು, ಅಲ್ಲಿ ಅವರ ಮುಂದಿನ ಹೆಜ್ಜೆ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಎಂದೇ ಸಾಬೀತಾಯಿತು.
ಈ ಸತ್ಯ ಮತ್ತು ಅಸತ್ಯತೆಯ ನಡುವಣ ತಿಕ್ಕಾಟದ ಅತ್ಯಂತ ರೋಮಾಂಚಕಾರಿ ಮತ್ತು ಪ್ರಮುಖ ಘಟ್ಟ ಬ್ರೂಕ್ಲಿನ್ನಲ್ಲಿ ನಡೆದಿತ್ತು, ಅಲ್ಲಿ ವಿವೇಕಾನಂದರು ‘ಹಿಂದೂಗಳ ಕೆಲವು ಪದ್ಧತಿಗಳು, ಅವುಗಳ ನಿಜವಾದ ಅರ್ಥವೇನು, ಅದನ್ನು ಹೇಗೆ ತಪ್ಪಾಗಿ ಅರ್ಥೈಸಲಾಗುತ್ತಿದೆ?’ ಎಂಬ ವಿಷಯದ ಕುರಿತು ಐತಿಹಾಸಿಕ ಭಾಷಣ ಮಾಡಿದರು. ಅಲ್ಲಿ ಅವರು ರಮಾಬಾಯಿ ಕೇಂದ್ರಗಳ ಸುಳ್ಳು ಪ್ರಚಾರವನ್ನು ಬಹಿರಂಗಪಡಿಸಿದರು. ಸ್ವಾಮೀಜಿ ಗುಡುಗಿದರು, “ರಮಾಬಾಯಿ ಕೇಂದ್ರವು ನನ್ನ ಬಗ್ಗೆ ಹೆಣೆದ ಸುಳ್ಳುಗಳನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಚಿಕಾಗೋದಲ್ಲಿ ಪ್ರತಿದಿನ ನನ್ನ ವಿರುದ್ಧ ಇಂತಹ ವಿಷಯಗಳನ್ನು ಹೇಳಲಾಗುತ್ತಿದೆ. ಇವರು ಖಂಡಿತವಾಗಿಯೂ ಕ್ರಿಶ್ಚಿಯನ್ನರಲ್ಲಿ ದೊಡ್ಡ ಕ್ರಿಶ್ಚಿಯನ್ನರೇ ಆಗಿದ್ದಾರೆ!” ಹಿಂದೂ ಮಹಿಳೆಯರಿಗೆ ಸಹಾಯ ಮಾಡುವ ಹೆಸರಿನಲ್ಲಿ, ಕ್ರಿಶ್ಚಿಯನ್ ಮಿಷನರಿಗಳು ಮತ್ತು ರಮಾಬಾಯಿ ಕೇಂದ್ರವು ಕೇವಲ ಸುಳ್ಳು ಪ್ರಚಾರವನ್ನು ಹರಡುತ್ತಿವೆ – ಪಾಶ್ಚಿಮಾತ್ಯ ನಾಗರಿಕತೆಯನ್ನು ಶ್ರೇಷ್ಠವೆಂದು ಬಿಂಬಿಸುವ ಮತ್ತು ಭಾರತೀಯರನ್ನು ಅನಾಗರಿಕ ಎಂದು ಬಿಂಬಿಸುವ ಆಟ ಇದು” ಎಂದರು. ಇದು ರಮಾಬಾಯಿಯವರ ಕಾರ್ಯಗಳ ಮೇಲಿನ ನೇರ ದಾಳಿಯಾಗಿತ್ತು. ಕ್ರಿಶ್ಚಿಯನ್ ಮತದ ಪ್ರಭಾವವು ಅವರನ್ನು ಎಷ್ಟು ಕುರುಡರನ್ನಾಗಿ ಮಾಡಿತ್ತು ಎಂದರೆ ಅವರು ಹಿಂದೂ ಸಮಾಜವನ್ನು ಹಣಕ್ಕಾಗಿ ವಿದೇಶಿ ಭೂಮಿಗೆ ಮಾರುತ್ತಿದ್ದರು. ಈ ಭಾಷಣವು ವಿವೇಕಾನಂದರಿಗೆ ಒಂದು ವಿಜಯವಾಗಿತ್ತು, ರಮಾಬಾಯಿಯವರ ಇಡೀ ಸಾಮ್ರಾಜ್ಯವನ್ನು ಅಲುಗಾಡಿಸಿತು.
ಕ್ರಿಶ್ಚಿಯನ್ ಮತದ ಪ್ರಭಾವದ ಅಡಿಯಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದನ್ನು ಈ ಕಥೆ ನಮಗೆ ಕಲಿಸುತ್ತದೆ. ರಮಾಬಾಯಿಯಂತಹ ವಿದ್ವಾಂಸರು ಹಿಂದೂ ಸಮಾಜದ ನ್ಯೂನತೆಗಳನ್ನು ಮಾರಾಟ ಮಾಡುವ ಮೂಲಕ ದೇಣಿಗೆಗಳನ್ನು ಸಂಗ್ರಹಿಸಿದರು, ಆದರೆ ವಿವೇಕಾನಂದರು ಸತ್ಯದ ಬೆಳಕಿನಲ್ಲಿ ಅವರ ನಿಜಮುಖವನ್ನು ಬಹಿರಂಗಪಡಿಸಿದರು. ಇಂದಿಗೂ, ರಮಾಬಾಯಿಯವರ ಮುಕ್ತಿ ಮಿಷನ್ನಂತಹ ಕೇಂದ್ರಗಳು ಸೇವೆಯ ಹೆಸರಿನಲ್ಲಿ ಮತಾಂತರವನ್ನು ಮುಂದುವರೆಸುತ್ತಿವೆ, ಅಲ್ಲಿ ದೇಣಿಗೆಯ ಆಮಿಷವು ಸಂಸ್ಕೃತಿಯನ್ನು ಪುಡಿಮಾಡುತ್ತಿದೆ. ಆದರೆ ವಿವೇಕಾನಂದರ ಕಾರ್ಯವು ಸನಾತನ ಧರ್ಮದ ಘನತೆ ಯಾವಾಗಲೂ ಪ್ರಚಾರ ಮತ್ತು ಹಣದ ಮುಂದೆ ತಲೆಬಾಗುವುದಿಲ್ಲ ಎಂಬುದನ್ನು ನಮಗೆ ನೆನಪಿಸುತ್ತದೆ. ವಿವೇಕಾನಂದರ ಕಥೆ ಇಂದಿನ ಭಾರತದಲ್ಲಿಯೂ ಸಹ ಪ್ರಸ್ತುತವಾಗಿದೆ -ರಮಾಬಾಯಿಯಂತಹ ಜನರು ಈಗಲೂ ನಮ್ಮ ನಡುವೆ ಮರೆಯಲ್ಲಿ ಇದ್ದಾರೆ, ಆದರೆ ಸತ್ಯದ ಧ್ವನಿ ಯಾವಾಗಲೂ ಗೆಲ್ಲುತ್ತದೆ. “ನಮ್ಮ ಬೇರುಗಳನ್ನು ಸದಾ ಬಲವಾಗಿ ಹಿಡಿದುಕೊಳ್ಳೋಣ, ಅಪ ಪ್ರಚಾರದ ಬಗ್ಗೆ ಎಚ್ಚರದಿಂದಿರೋಣ ಮತ್ತು ವಿವೇಕಾನಂದರಂತೆ ಧೈರ್ಯದಿಂದ ಸತ್ಯವನ್ನು ಮಾತನಾಡೋಣ” ಎಂಬುದು ಈ ಲೇಖನದ ಸಂದೇಶ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


