
ನಿವೃತ್ತ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಕುಲದೀಪ್ ಸಿಂಗ್ ಬ್ರಾರ್ ತನ್ನ ಪತ್ನಿಯೊಂದಿಗೆ ಲಂಡನಿನ ಮಾರ್ಬಲ್ ಆರ್ಚ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ತಂಡ ಅವರ ಮೇಲೆ ದಾಳಿ ಮಾಡಿತ್ತು. ಬ್ರಾರ್ PVSM, AVSM ಮತ್ತು ವೀರ ಚಕ್ರದಿಂದ ಅಲಂಕರಿಸಲ್ಪಟ್ಟ ಉನ್ನತ ಅಧಿಕಾರಿಯಾಗಿದ್ದರು. ಅಂತರರಾಷ್ಟ್ರೀಯ ಸಿಖ್ ಯುವ ಒಕ್ಕೂಟ (ISYF) ಗೆ ಸಂಬಂಧಿಸಿದ ಒಬ್ಬ ಅವರ ಕುತ್ತಿಗೆ ಮತ್ತು ದವಡೆಗೆ ಬಲವಾಗಿ ಗುದ್ದಿ 12 ಇಂಚಿನ ಗಾಯ ಮಾಡಿ ಅವರನ್ನು ಕೊಂದೇ ಹಾಕಿದ್ದ. ಬ್ರಾರ್ ಅವರ ಪತ್ನಿಯನ್ನು ಕೆಳಗೆ ದೂಡಿ ಘಾಸಿಗೊಳಿಸಿದ್ದ. ದಾಳಿಕೋರರು ಈ ಯೋಜಿತ ಹೊಂಚುದಾಳಿಯ ನಂತರ ಓಡಿಹೋದರು. ಈ ತಂಡ ಬ್ರಾರ್ ಅವರನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿತ್ತು. ಘಟನೆಯ ನಂತರ ಯುಕೆ ನ್ಯಾಯಾಲಯಗಳು ಮೂವರಿಗೆ ದೀರ್ಘಾವಧಿಯ ಜೈಲು ಶಿಕ್ಷೆ ವಿಧಿಸಿದವು. ಈ ಘಟನೆ ಕೇವಲ ಒಂದು ಬೀದಿ ಅಪರಾಧವಾಗಿರಲಿಲ್ಲ. 1984 ರಲ್ಲಿ ಗೋಲ್ಡನ್ ಟೆಂಪಲ್ನಿಂದ ಉಗ್ರಗಾಮಿಗಳನ್ನು ತೆರವುಗೊಳಿಸಲು ಆಪರೇಷನ್ ಬ್ಲೂ ಸ್ಟಾರ್ ಅನ್ನು ಮುನ್ನಡೆಸಿದ ಬ್ರಾರ್, ಖಲಿಸ್ತಾನ್ ಉಗ್ರಗಾಮಿಗಳ ಪ್ರಮುಖ ಟಾರ್ಗೆಟ್ ಆಗಿದ್ದರು.
ಖಲಿಸ್ತಾನ್ ಗುಂಪುಗಳು ಬ್ರಾರ್ ಅವರ ಹತ್ಯೆಯನ್ನು ಬ್ಲೂ ಸ್ಟಾರ್ಗೆ ಪ್ರತೀಕಾರವಾಗಿ ನೋಡಿದವು, ಈ ಆಪರೇಷನ್ ಅಲ್ಲಿ ಉಗ್ರಗಾಮಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆಯನ್ನು ಸಾಯಿಸಲಾಗಿತ್ತು. ಹೀಗಾಗಿ ಖಲಿಸ್ಥಾನಿ ಶಕ್ತಿಗಳು ಅವರನ್ನು ಹಲವು ವರ್ಷಗಳ ಕಾಲದಿಂದ ಹತ್ಯೆ ಮಾಡಲು ಟಾರ್ಗೆಟ್ ಹಾಕಿಕೊಂಡಿದ್ದರು. ಕೊನೆಗೆ ಲಂಡನ್ನಲ್ಲಿ ಬ್ರಾರ್ ಅವರನ್ನು ಹತ್ಯೆ ಮಾಡಲಾಯಿತು. ಲಂಡನ್ನಲ್ಲಿ ನಡೆದ ಈ ದಾಳಿಯು ISYF ನ ಜಾಗತಿಕ ವ್ಯಾಪ್ತಿಯನ್ನು ತೋರಿಸಿತು, 2001 ರಿಂದ ಯುಕೆಯಲ್ಲಿ ISYF ಭಯೋತ್ಪಾದನಾ ಕಾಯ್ದೆಯಡಿ ನಿಷೇಧಿಸಲ್ಪಟ್ಟಿದ್ದರೂ ಸಹ ಬ್ರಾರ್ ಭಯೋತ್ಪಾದಕರಿಗೆ ಬಲಿಯಾದರು.
ಕೇವಲ 4 ವರ್ಷಗಳ ನಂತರ ಯುಕೆ ISYF ಮೇಲಿನ ನಿಷೇಧವನ್ನೇ ತೆಗೆದುಹಾಕಿತು
ಮಾರ್ಚ್ 2016 ರಲ್ಲಿ, ಸಂಸತ್ತು ISYF ಅನ್ನು ಭಯೋತ್ಪಾದಕ ಪಟ್ಟಿಯಿಂದ ತೆಗೆದುಹಾಕಲು ಮತ ಚಲಾಯಿಸಿತು. ಭಯೋತ್ಪಾದನೆಯ ” ಪುರಾವೆಗಳಿಲ್ಲ” ಎಂದು ಗೃಹ ಕಚೇರಿ ಸಚಿವ ಲಾರ್ಡ್ ಬೇಟ್ಸ್ ಹೇಳಿದರು. ಸರ್ಕಾರವು ಇದನ್ನು ಕಾನೂನುಬದ್ಧ ಕರೆ ಎಂದು ಕರೆದಿತು, ಭಾರತಕ್ಕೆ ತಲೆಬಾಗುವುದಿಲ್ಲ ಎಂದಿತು. ಆದರೆ ISYF ನ ಭೂತಕಾಲವು ರಕ್ತಸಿಕ್ತವಾಗಿತ್ತು: 1980-90 ರ ದಶಕದಲ್ಲಿ ಬಾಂಬ್ ದಾಳಿಗಳು, ಹತ್ಯೆಗಳು ಮತ್ತು ಪಂಜಾಬ್ ಅವ್ಯವಸ್ಥೆಗೆ ಸಂಬಂಧಿಸಿದ ಅನೇಕ ದುಷ್ಕೃತ್ಯಗಳಲ್ಲಿ ಇದು ಭಾಗಿಯಾಗಿತ್ತು. ಭಾರತ ಮತ್ತು ಕೆನಡಾ 2002 ರಲ್ಲಿ ಇದನ್ನು ನಿಷೇಧಿಸಿದ್ದವು.
ಭಾರತದಲ್ಲಿ ISYF ನ ದಾಖಲೆ
ಭಾರತವು ISYF ಅನ್ನು ಭಯೋತ್ಪಾದಕ ಗುಂಪು ಎಂದು ಕರೆಯುತ್ತದೆ. ಇದರ ಸಂಸ್ಥಾಪಕ, ಲಖ್ಬೀರ್ ಸಿಂಗ್ ರೋಡ್ (ಇನ್ನೂ ಬೇಕಾಗಿದ್ದಾನೆ), ಪಾಕಿಸ್ತಾನದ ISI ಮತ್ತು ಲಷ್ಕರ್-ಎ-ತೈಬಾ ಜೊತೆ ಕೆಲಸ ಮಾಡಿದ್ದಾನೆ. ಅವನು ಪಾಕಿಸ್ತಾನದಲ್ಲಿ ಕಚೇರಿಗಳನ್ನು ಹೊಂದಿದ್ದ. ISYF ಹತ್ಯೆಗಳು, IED ಸ್ಫೋಟಗಳು, ಸುಲಿಗೆ ಮತ್ತು ನಾಯಕರ ಮೇಲಿನ ದಾಳಿಗಳಿಗೆ ಆತ ಕಾರಣವೆಂದು ಆರೋಪಿಸಲಾಗಿದೆ. ಇತ್ತೀಚಿನ ಪ್ರಕರಣಗಳ ಪೈಕಿ: 2007 ಲುಧಿಯಾನಲ್ಲಿ ಬಾಂಬ್ ಸ್ಪೋಟ ನಡೆಸಿ ಆರು ಜನರ ಸಾವು; 2022 ಪಠಾಣ್ಕೋಟ್ ಸೇನಾ ನೆಲೆಯ ಬಳಿ ಗ್ರೆನೇಡ್ ದಾಳಿ. ISYF ಗಡಿಯಾಚೆಗಿನ ದಾಳಿಗಳಿಗೆ ಮಾಡ್ಯೂಲ್ಗಳನ್ನು ಸಿದ್ಧಪಡಿಸಿ ತರಬೇತಿ ನೀಡುತ್ತಿದೆ ಎಂದು ಭಾರತೀಯ ಏಜೆನ್ಸಿಗಳು ಹೇಳುತ್ತವೆ.
ಯುಕೆ ದೂತಾವಾಸದ ಮೇಲೂ ದಾಳಿ
ಯುಕೆಯಲ್ಲಿ ಖಲಿಸ್ತಾನ್ ಮೂಲಭೂತವಾದಿಗಳು ಭಾರತವನ್ನು ಗುರಿಯಾಗಿಸಿಕೊಂಡು ಇಂದಿಗೂ ನಿರಂತರ ದಾಳಿ ನಡೆಸುತ್ತಿದ್ದಾರೆ. ಅವರು ಭಾರತೀಯ ಹೈಕಮಿಷನ್ ಮೇಲೆ ದಾಳಿ ಮಾಡಿದ್ದಾರೆ (2023 ರ ಗಲಭೆಗಳು), ತ್ರಿವರ್ಣ ಧ್ವಜವನ್ನು ಹರಿದು ಹಾಕಿದ್ದಾರೆ, ಗಾಂಧಿ ಪ್ರತಿಮೆಗಳನ್ನು ಧ್ವಂಸ ಮಾಡಿದ್ದಾರೆ ಮತ್ತು ಭಾರತದ ಪರ ಇರುವ ಸಿಖ್ಖರ ಮೇಲೂ ಹಲ್ಲೆ ನಡೆಸಿದ್ದಾರೆ. ಭಾರತೀಯ ಸಮಾರಂಭಗಳ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸಿದ್ದಾರೆ. ಈ ಕೃತ್ಯಗಳನ್ನು “ಸ್ವಾತಂತ್ರ್ಯ” ಕ್ಕಾಗಿನ ಹೋರಾಟ ಎಂದು ಅವರು ಮರೆಮಾಚುತ್ತಾರೆ ಆದರೆ ಸ್ವದೇಶದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವುದೇ ಅವರ ಮುಖ್ಯ ಉದ್ದೇಶ. ಯುಕೆ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆ ಮತ್ತು ಹಿಂಸಾಚಾರವನ್ನು ವೈಭವೀಕರಿಸುವ ರ್ಯಾಲಿಗಳನ್ನು ಅನುಮತಿಸಿದಾಗ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗುತ್ತ ಬಂದಿತು.
ಭಾರತ-ಯುಕೆ ಸಂಬಂಧಗಳ ಮೇಲೆ ಒತ್ತಡ
ಯುಕೆ ಐಸಿಸ್ ಮತ್ತು ಐಆರ್ಎ ಅಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಖಲಿಸ್ಥಾನಿ ವಿಷಯಕ್ಕೆ ಬಂದಾಗ ಮೃದು ಧೋರಣೆಯನ್ನು ಅನುಸರಿಸುತ್ತಿದೆ. ಯುಕೆ ಭಾರತ ವಿರೋಧಿಗಳ ಸುರಕ್ಷಿತ ಧಾಮವಾಗಿ ಪರಿವರ್ತನೆಯಾಗುತ್ತಿದೆ ಎಂದು ಭಾರತ ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದರು ಕೂಡ ಯುಕೆ ಮೌನವಾಗಿದೆ. ಬ್ರಾರ್ ಅವರ ಹತ್ಯೆ ವಿಷಯದಲ್ಲೂ ಯುಕೆಯ ಕಾನೂನು ಸರಿಯಾದ ಕ್ರಮ ಜರುಗಿಸಿಲ್ಲ ಎಂಬ ಅಸಮಾಧಾನ ಭಾರತಕ್ಕಿದೆ. ಹೀಗಾಗಿ ಅದು ಪದೇ ಪದೇ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಮನವಿಯನ್ನು ಮಾಡುತ್ತಲೇ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


