
ಅಯೋಧ್ಯೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಅಯೋಧ್ಯೆಗೆ ಆಗಮಿಸಿ ಪ್ರಾರ್ಥನೆ ನೆರವೇರಿಸಿದ್ದಾರೆ.
ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವದ ಪ್ರತಿಷ್ಠಾ ದ್ವಾದಶಿ ಆಚರಣೆಯಲ್ಲಿ ಭಾಗವಹಿಸಲು ರಾಜನಾಥ್ ಸಿಂಗ್ ಅಯೋಧ್ಯೆಗೆ ಆಗಮಿಸಿದ್ದಾರೆ. ಅವರನ್ನು ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು.
ಜನವರಿ 22, 2024 ರಂದು ‘ಪ್ರಾಣ ಪ್ರತಿಷ್ಠಾ ಸಮಾರಂಭ’ ನೆರವೇರಿಸಿ ರಾಮ ಲಲ್ಲಾ ವಿಗ್ರಹವನ್ನು ಅನಾವರಣಗೊಳಿಸಲಾಗಿತ್ತು
ಪ್ರಾಣ ಪ್ರತಿಷ್ಠಾ ದ್ವಾದಶಿ ಅಂಗವಾಗಿ ಶುಭ ಕೋರಿರುವ ಯೋಗಿ ಆದಿತ್ಯನಾಥ್ ಅವರು, “ಇಂದು, ಭಾರತದ ಪ್ರಜ್ಞೆಯ ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿರುವ ಪವಿತ್ರ ನಗರಿ ಶ್ರೀ ಅಯೋಧ್ಯೆಯಲ್ಲಿ, ಭಗವಾನ್ ಶ್ರೀ ರಾಮ ಲಲಾನ ಹೊಸ ವಿಗ್ರಹದ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವವನ್ನು ಗುರುತಿಸುವ ಪವಿತ್ರ ದಿನವಾಗಿದೆ. ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ಶ್ರೀ ರಾಮ ಲಾಲಾ ಅವರ ಪ್ರತಿಷ್ಠಾಪನೆಯು ಶತಮಾನಗಳ ಹೋರಾಟವು ಅಂತ್ಯಗೊಂಡಿದೆ ಮತ್ತು ನೋವು ವಿಶ್ರಾಂತಿ ಕಂಡುಕೊಂಡಿದೆ ಎಂಬುದನ್ನು ಸಂಕೇತಿಸುತ್ತದೆ” ಎಂದಿದ್ದಾರೆ.
#WATCH | Ayodhya, Uttar Pradesh: Defence Minister Rajnath Singh and CM Yogi Adityanath hoist the flag at the Annapurna Temple on the occasion of the second anniversary of Ram Lalla’s Pran Pratishtha. pic.twitter.com/50ea07M1d9
— ANI (@ANI) December 31, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



