News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 30th December 2025

×
Home About Us Advertise With s Contact Us

ಮುಸ್ಲಿಂ ಲೀಗ್ ಹುಟ್ಟು ಮತ್ತು ಬಾಂಗ್ಲಾ ಹಿಂದೂಗಳನ್ನು ಕಾಡುತ್ತಿರುವ ಹಿಂಸೆ

1906 ರ ಡಿಸೆಂಬರ್ 30 ರ ಚಳಿಗಾಲದ ಮಧ್ಯಾಹ್ನ, ಬ್ರಿಟಿಷ್ ಸಾಮ್ರಾಜ್ಯದ ಬೆಂಬಲವನ್ನು ಹೊಂದಿದ್ದ ವಿಭಜಕ ರಾಜಕೀಯ ಕಲ್ಪನೆಯ ಜನ್ಮಸ್ಥಳವಾಯಿತು ಢಾಕಾ. ಮುಹಮ್ಮದನ್ ಎಜುಕೇಶನ್ಲ್ ಕಾನ್ಫರೆನ್ಸ್ ಒಳಗಡೆ, ಔಪಚಾರಿಕ ಭಾಷಣಗಳ ನಡುವೆ, ಆಲ್-ಇಂಡಿಯಾ ಮುಸ್ಲಿಂ ಲೀಗ್ ಜನನವಾಯಿತು.

“ಹಿಂದೂ ಪ್ರಾಬಲ್ಯ” ದ ವಿರುದ್ಧ ಅಗತ್ಯ ರಕ್ಷಣೆಯಾಗಿ ಮುಸ್ಲಿಂ ಲೀಗ್ ಸಂಘಟನೆಯನ್ನು ರೂಪಿಸಿದ್ದಾಗಿ ಢಾಕಾದ ನವಾಬ್ ಸಲೀಮುಲ್ಲಾ ಘೋಷಿಸಿಕೊಂಡ. ಆಗಾ ಖಾನ್ ಅದರ ನಾಯಕತ್ವವನ್ನು ಒಪ್ಪಿಕೊಂಡ. ಸಭಾಂಗಣದ ಹೊರಗೆ, ಬಂಗಾಳವು ಎಂದಿನಂತೆಯೇ ಇತ್ತು. ಹಿಂದೂಗಳು ಮತ್ತು ಮುಸ್ಲಿಮರು ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಎಂದಿನಂತೆಯೇ ಜೀವನ ನಡೆಸುತ್ತಿದ್ದರು, ಜೀವನೋಪಾಯವನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಸಭಾಂಗಣದ ಒಳಗೆ ಮಾತ್ರ, ಮುಸ್ಲಿಂ ರಾಜಕೀಯ ಭದ್ರತೆಗೆ ಪ್ರತ್ಯೇಕತೆಯ ಮತ್ತು ಶ್ರೇಷ್ಠತೆಯ ಅಗತ್ಯವಿದೆ ಎಂಬ ಹೊಸ ಸಿದ್ಧಾಂತವೊಂದನ್ನು ತೇಲಿಬಿಡಲಾಯಿತು. 1905 ರ ವಿಭಜನೆಯ ನಂತರ ಮುಸ್ಲಿಂ ಬಹುಸಂಖ್ಯಾತ ಪೂರ್ವ ಬಂಗಾಳದ ಹೊಸ ರಾಜಧಾನಿಯಾಗಿ ಢಾಕಾವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಯಿತು. ಈ ವಿಭಜಕ ಪ್ರಯೋಗವು ಹಿಂದೂಗಳ ವಿರುದ್ಧ 120 ವರ್ಷಗಳ ತಾರತಮ್ಯವನ್ನು ಹೇಗೆ ಸೃಷ್ಟಿಸಿತು ಎಂಬುದು ಕೂಡ ಕುತೂಹಲಕಾರಿ ಸಂಗತಿಯೇ ಆಗಿದೆ.

ಹರಿಯಿತು ಮೊದಲ ರಕ್ತ

ಮುಸ್ಲಿಂ ಲೀಗ್ ರಚನೆಯಾದ ಕೇವಲ 2 ತಿಂಗಳ ನಂತರ, ಫೆಬ್ರವರಿ 1907 ರಲ್ಲಿ, ಮೈಮೆನ್ಸಿಂಗ್‌ನಲ್ಲಿ ನಡೆದ ಜಮಾಲ್‌ಪುರ ಜಾತ್ರೆಯ ಸಮಯದಲ್ಲಿ, ಹಿಂದೂ ಸ್ವದೇಶಿ ಸ್ವಯಂಸೇವಕರು ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸುವಂತೆ ವ್ಯಾಪಾರಿಗಳಿಗೆ ಒತ್ತಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ಬರಿ ಮಾತುಗಳಲ್ಲಿ ಘರ್ಷಣೆ ಭುಗಿಲೆದ್ದವು, ನಂತರ ಅದು ಹಿಂಸಾಚಾರಕ್ಕೆ ತಿರುಗಿತು, ಆದರೆ ಅದು ಸ್ವಯಂಪ್ರೇರಿತ ಹಿಂಸಾಚಾರವಾಗಿರಲಿಲ್ಲ ಅಥವಾ ಸ್ಥಳೀಯ ಮಟ್ಟದ ಹಿಂಸಾಚಾರವೂ ಆಗಿರಲಿಲ್ಲ. ಆ ರಾತ್ರಿ, ಜಿಲ್ಲೆಯಾದ್ಯಂತ ಮಸೀದಿಗಳು ನವಾಬ್ ಸಲೀಮುಲ್ಲಾ ಅವರ ಹೆಸರಿನಲ್ಲಿ ನಕಲಿ ಮಾಡಲಾದ “ಲಾಲ್ ಇಷ್ಟಹಾರ್” ಎಂಬ ಕೆಂಪು ಕರಪತ್ರಗಳು  ಹಂಚಿದವು. ಅದರಲ್ಲಿ ಬಹಿರಂಗವಾಗಿ ಹಿಂದೂಗಳ ಮೇಲೆ ದಾಳಿ ಮಾಡಲು ಕರೆ ನೀಡಲಾಗಿತ್ತು, ಲೂಟಿ ಮಾಡಲು ಪ್ರಚೋದಿಸಲಾಗಿತ್ತು. ಹಿಂದೂ ಮಹಿಳೆಯರನ್ನು ಅಪಹರಣವೂ ಮಾಡಲಾಗಿತ್ತು. ಈ ಹಿಂಸಾಚಾರದಲ್ಲಿ ಏಕರೂಪತೆ ಇರುವುದನ್ನು ಬ್ರಿಟಿಷ್‌ ದಾಖಲೆಗಳೇ ಗಮನಿಸಿವೆ. ದೂರದ ಹಳ್ಳಿಗಳಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡ ಒಂದೇ ರೀತಿಯ ಕರಪತ್ರಗಳು, ಮುಂಜಾನೆಯ ಪ್ರಾರ್ಥನೆಯ ನಂತರ ಕೇಳಿ ಬಂದ ಘೋಷಣೆಗಳು ಜನಸಮೂಹವನ್ನು ಹಿಂಸಾಚಾರಕ್ಕಾಗಿ ಒಟ್ಟುಗೂಡಿಸುವ ತಂತ್ರಗಳಾಗಿದ್ದವು.

ಸೂರ್ಯೋದಯಕ್ಕೆ ಮುಂಚಿತವಾಗಿ, ನೆರೆಹೊರೆಗಳಿಂದ ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಪ್ರತ್ಯೇಕಿಸಲಾಯಿತು. ನೀರಿನ ಕೊಳವೆಗಳನ್ನು ತುಂಡರಿಸಲಾಯಿತು, ತಪ್ಪಿಸಿಕೊಳ್ಳುವ ಮಾರ್ಗಗಳನ್ನು ನಿರ್ಬಂಧಿಸಲಾಯಿತು, ಭಯವನ್ನು ಸೃಷ್ಟಿಸಲಾಯಿತು. ಅವ್ಯವಸ್ಥೆ ಸೃಷ್ಟಿಸಿ ಶಸ್ತ್ರಗಳನ್ನು ಹಿಡಿದು ಗುಂಪುಗಳು ಮುನ್ನುಗ್ಗಿದವು. ಜಮಾಲ್ಪುರದಲ್ಲಿ, ಇಪ್ಪತ್ತಕ್ಕೂ ಹೆಚ್ಚು ಹಿಂದೂಗಳನ್ನು ಕೊಲ್ಲಲಾಯಿತು. ನಾರಾಯಣಗಂಜ್‌ನಲ್ಲಿ, ಹಿಂದೂ ಒಡೆತನದ ಕಾರ್ಖಾನೆಗಳನ್ನು ಸುಡಲಾಯಿತು. ಹಳ್ಳಿಗಳನ್ನು ಕ್ರಮಬದ್ಧವಾಗಿ ಲೂಟಿ ಮಾಡಲಾಯಿತು. ಸ್ವದೇಶಿ ಸ್ವಯಂಸೇವಕ ಹಬಿಲ್ ಸಿರ್ಕಾರ್ ಅವರನ್ನು ದೇವಾಲಯದಿಂದ ಎಳೆದುಕೊಂಡು ಹೋಗಿ ಸಾರ್ವಜನಿಕವಾಗಿ ಹತ್ಯೆ ಮಾಡಲಾಯಿತು. ನೂರಕ್ಕೂ ಹೆಚ್ಚು ಹಿಂದೂಗಳು ಕೊಲ್ಲಲ್ಪಟ್ಟರು ಮತ್ತು ಸಾವಿರಾರು ಜನರು ಓಡಿಹೋದರು. ಬ್ರಿಟಿಷ್ ನ್ಯಾಯಾಧೀಶರು ಈ ಗಲಭೆಗಳನ್ನು “ಅಸ್ವಾಭಾವಿಕ ಸಮನ್ವಯ” ದಿಂದ ಕೂಡಿದೆ ಎಂದು ಬಣ್ಣಿಸಿದರು. ಆದರೂ ಹೊಸದಾಗಿ ರೂಪುಗೊಂಡ ಮುಸ್ಲಿಂ ಲೀಗ್ ಯಾವುದೇ ಖಂಡನೆಯನ್ನು ಮಾಡಲಿಲ್ಲ. ನವಾಬ್ ಸಲೀಮುಲ್ಲಾ ವಿಭಜನಾ ರಾಜಕೀಯ ಪ್ರತಿಫಲ ನೀಡುವುದನ್ನು ನೋಡಿ ಸಂಭ್ರಮಾಚರಣೆ ಮಾಡಿದರು. ಸಂಘಟಿತ ಹಿಂಸಾಚಾರದ ಮೂಲಕ ಶಿಕ್ಷೆಯಿಲ್ಲದೆ ರಾಜಕೀಯ ಹಕ್ಕನ್ನು ಜಾರಿಗೊಳಿಸಬಹುದು ಎಂಬುದನ್ನು ಈ ಗಲಭೆ ಸಾಬೀತುಪಡಿಸಿತು.

ಗಲಭೆಗಳ ಪುನರಾವರ್ತನೆ
ಮೈಮೆನ್ಸಿಂಗ್ (ಈಗ ಬಾಂಗ್ಲಾದೇಶ) ನಲ್ಲಿ ಏನಾಯಿತು ಎಂಬುದು ಕೇವಲ ಇತಿಹಾಸವಾಗಿ ಉಳಿಯಲಿಲ್ಲ. ಅದೊಂದು ಮಾದರಿಯೇ ಆಯಿತು. ನಂತರದ ದಶಕಗಳಲ್ಲಿ, ಬಾಂಗ್ಲಾದೇಶದಾದ್ಯಂತ ಗಲಭೆಗಳು ಪದೇ ಪದೇ ಅದೇ ಮಾದರಿಯಲ್ಲಿ ನಡೆದವು. ಧಾರ್ಮಿಕ ಜಾಲಗಳ ಮೂಲಕ ಸಜ್ಜುಗೊಂಡ ಮೂಲಭೂತವಾದಿ ದುಷ್ಕರ್ಮಿಗಳು ಹಿಂದೂ ಮನೆಗಳು ಮತ್ತು ಜೀವನೋಪಾಯಗಳ ಮೇಲೆ ಗುರಿಯಿಟ್ಟ ದಾಳಿಗಳನ್ನು ಮಾಡುತ್ತಲೇ ಬಂದರು. ಇದನ್ನು ರಾಜಕೀಯ ನಾಯಕತ್ವ ಮೌನ ಅಥವಾ ಸಮರ್ಥನೆಯೊಂದಿಗೆ ನೋಡುತ್ತಲೇ ಬಂದಿದೆ. 1946 ರಲ್ಲಿ, ಮುಸ್ಲಿಂ ಲೀಗ್‌ ಕರೆಕೊಟ್ಟ  ‘ಡೈರೆಕ್ಟ್‌ ಆಕ್ಷನ್‌ ಡೇʼ ಕಲ್ಕತ್ತಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳನ್ನು ಹತ್ಯಾಕಾಂಡಗಳಾಗಿ ಪರಿವರ್ತಿಸಿತು, 4,000 ಕ್ಕೂ ಹೆಚ್ಚು ಹಿಂದೂಗಳನ್ನು ಕೊಂದಿತು. ಗಲಭೆಗಳು ನಂತರ ಕಾಲ್ಗಿಚ್ಚಿನಂತೆ ಹರಡಿ, ಭಯ ಮತ್ತು ಪಲಾಯನಕ್ಕೆ ದಾರಿ ಮಾಡಿಕೊಟ್ಟವು. ಹಿಂಸಾಚಾರವು ಅಲ್ಲಿಂದ ಮುಂದೆ ಎಪಿಸೋಡಿಕ್ ಆಗಿರಲಿಲ್ಲ; ಅದು ನಿರ್ಣಾಯಕವಾಗಿತ್ತು – ಭಯೋತ್ಪಾದನೆಯ ಮೂಲಕ ಡೆಮೋಗ್ರಫಿಯನ್ನು ಮರುರೂಪಿಸುವ ಒಂದು ವಿಧಾನ.

ಅಂದಿನ ಗಲಭೆಗಳಿಂದ 2025 ರವರೆಗೆ
1947 ರ ವಿಭಜನೆಯು ಪೂರ್ವ ಬಂಗಾಳವನ್ನು ಪೂರ್ವ ಪಾಕಿಸ್ಥಾನವಾಗಿ ಪರಿವರ್ತಿಸಿತು, ಆದರೆ ಗಲಭೆಗಳು ಕೊನೆಗೊಳ್ಳಲಿಲ್ಲ – ಅವು ಕಾನೂನು ಮತ್ತು ರಾಜಕೀಯ ರಕ್ಷಣೆಯನ್ನು ಪಡೆದುಕೊಂಡವು. ಒಂದು ಕಾಲದಲ್ಲಿ ಜನಸಂಖ್ಯೆಯ 33% ರಷ್ಟಿದ್ದ ಹಿಂದೂಗಳು ಹತ್ಯೆ, ಭೂಸ್ವಾಧೀನ ಮತ್ತು ಬಲವಂತದ ವಲಸೆಯ ಮೂಲಕ ವೇಗವಾಗಿ ಕ್ಷೀಣಿಸಿದರು. 1965 ರ ಆಸ್ತಿ ಕಾಯ್ದೆಯು ಹಿಂದೂ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕಾನೂನುಬದ್ಧಗೊಳಿಸಿತು. 1971 ರಲ್ಲಿ, ಬಾಂಗ್ಲಾದೇಶದ ನರಮೇಧದ ಸಮಯದಲ್ಲಿ, ಮುಸ್ಲಿಂ ಲೀಗ್ ರಾಜಕೀಯದ ಸೈದ್ಧಾಂತಿಕ ಉತ್ತರಾಧಿಕಾರಿಗಳಾದ ಜಮಾತ್-ಎ-ಇಸ್ಲಾಮಿಯಂತಹ ಇಸ್ಲಾಮಿಸ್ಟ್ ಗುಂಪುಗಳು ಪಾಕಿಸ್ತಾನ ಸೈನ್ಯಕ್ಕೆ ಸಹಾಯ ಮಾಡಿದವು, ಬಲಿಪಶುಗಳಲ್ಲಿ ಬಹುತೇಕರು ಹಿಂದೂಗಳೇ ಆಗಿದ್ದರು. ಸ್ವಾತಂತ್ರ್ಯ ಪಡೆದ ಬಳಿಕವೂ ಬಂಗಾಳದಲ್ಲಿ ಹಿಂದೂಗಳ ಪರಿಸ್ಥಿತಿ ಬದಲಾಗಲಿಲ್ಲ. 2024 ರ, ರಾಜಕೀಯ ಕ್ರಾಂತಿಯ ನಂತರ, ಜಮಾತ್-ಬಿಎನ್‌ಪಿ ಜಾಲಗಳು 2,000 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದವು – ದೇವಾಲಯಗಳು ನಾಶವಾದವು, ಹಿಂದೂ ಮನೆಗಳನ್ನು ಗುರುತಿಸಿ ದಾಳಿ ಮಾಡಲಾಯಿತು, ಕುಟುಂಬಗಳ ಮೇಲೆ ಹಲ್ಲೆ ನಡೆಸಲಾಯಿತು, ಅನೇಕ ಹಿಂದೂಗಳು ಕೊಲ್ಲಲ್ಪಟ್ಟರು. ಈಗ ಅಲ್ಲಿ ಉಳಿದ ಹಿಂದೂಗಳ ಜನಸಂಖ್ಯೆ 7.9% ಎಂಬುದು ಜನಗಣತಿಯೇ ಹೇಳುತ್ತಿದೆ.

ಕೊನೆಯಾಗದ ಹಿಂಸಾಚಾರದ ಸರಣಿ

ಬಾಂಗ್ಲಾದ ಹಿಂಸಾಚಾರ ಕಥೆಗೆ ಕೊನೆ ಎಂಬುದೇ ಇಲ್ಲ. ಢಾಕಾ 1906 ರಲ್ಲಿ ಈ ಕಲ್ಪನೆಯನ್ನು ಹುಟ್ಟು ಹಾಕಿತ್ತು. 1907 ರಲ್ಲಿ ಮೈಮೆನ್ಸಿಂಗ್ ಈ ಕಲ್ಪನೆಯನ್ನು ರಕ್ತದ ಮೂಲಕ ವಾಸ್ತವಕ್ಕೆ ತರಲಾಯಿತು. ನಂತರದ ಪ್ರತಿಯೊಂದು ಗಲಭೆಯೂ ಇದನ್ನು ಪುನಾರ್ವತಿಸುತ್ತಾ ಬಂದಿತು. ರಾಜಕೀಯ ರಕ್ಷಣೆಗಾಗಿನ ಹಕ್ಕು ಎಂಬಂತೆ  ಪ್ರಾರಂಭವಾದದ್ದು ಬಹಿಷ್ಕಾರದ ವ್ಯವಸ್ಥೆಯಾಗಿ ವಿಕಸನಗೊಂಡಿತು, ಅಲ್ಲಿ ಹಿಂದೂ ಜೀವನವು ದುರಂತವಾಗಿ ಪರಿವರ್ತನೆಯಾಯಿತು. 120 ವರ್ಷಗಳ ನಂತರವೂ ಬಾಂಗ್ಲಾದೇಶದ ಹಿಂದೂಗಳು ಹಿಂಸೆಯ ಬಲಿಪಶುಗಳಾಗುತ್ತಿದ್ದಾರೆ. ಅಂದರೆ  ಸಭಾಂಗಣದೊಳಗೆ ಸೌಜನ್ಯದಿಂದ ಜನಿಸಿದ ವಿಭಜಕ ಸೂತ್ರವೊಂದು ಪೀಳಿಗೆಯಿಂದ ಪೀಳಿಗೆಗೆ ಹಿಂಸೆಯ ಮೂಲಕ ಮುಂದುವರೆದ ಪರಂಪರೆಯಾಗಿ ರೂಪುಗೊಂಡಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top