
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತದಲ್ಲಿ ಎರಡು ದಿನಗಳ ಒಮಾನ್ ಭೇಟಿಗಾಗಿ ನಿನ್ನೆ ಸಂಜೆ ಮಸ್ಕತ್ಗೆ ಆಗಮಿಸಿದರು. ಜೋರ್ಡಾನ್ ಮತ್ತು ಇಥಿಯೋಪಿಯಾಗೆ ಯಶಸ್ವಿ ಭೇಟಿಗಳನ್ನು ಪೂರ್ಣಗೊಳಿಸಿದ ನಂತರ ಅವರು ಒಮಾನ್ ತಲುಪಿದ್ದಾರೆ.
ಮಸ್ಕತ್ ವಿಮಾನ ನಿಲ್ದಾಣದಲ್ಲಿ, ಮೋದಿ ಅವರನ್ನು ಒಮಾನ್ನ ರಕ್ಷಣಾ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರು ಬರಮಾಡಿಕೊಂಡರು. ವಿವಿಧ ಕ್ಷೇತ್ರಗಳಲ್ಲಿ ಭಾರತ-ಒಮಾನ್ ಸಹಕಾರವನ್ನು ಬಲಪಡಿಸುವ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುವ ಕುರಿತು ಅವರು ಚರ್ಚೆ ನಡೆಸಿದರು.
ಒಮಾನ್ ಮುಖ್ಯಸ್ಥ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿಯವರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಮೋದಿ ಇಂದು ಒಮಾನ್ ಸುಲ್ತಾನ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಭಾರತ ಮತ್ತು ಒಮಾನ್ ಮುಕ್ತ ವ್ಯಾಪಾರ ಒಪ್ಪಂದವಾದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ)ಕ್ಕೆ ಸಹಿ ಹಾಕಲಿವೆ. ಇದಕ್ಕೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಒಮಾನ್ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಪ್ರಚಾರ ಸಚಿವ ಕೈಸ್ ಅಲ್ ಯೂಸೆಫ್ ಅವರು ಓಮನ್ ಸುಲ್ತಾನ್ ಮತ್ತು ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಸಹಿ ಹಾಕಲಿದ್ದಾರೆ.
ಒಮಾನ್ ಭಾರತದೊಂದಿಗೆ ಶಾಶ್ವತ ಸ್ನೇಹ ಮತ್ತು ಆಳವಾದ ಐತಿಹಾಸಿಕ ಸಂಪರ್ಕಗಳ ಭೂಮಿಯಾಗಿದೆ ಎಂದು ಮೋದಿ ಹೇಳಿದರು. ಈ ಭೇಟಿಯು ಸಹಯೋಗದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಎರಡೂ ದೇಶಗಳ ನಡುವಿನ ಪಾಲುದಾರಿಕೆಗೆ ಹೊಸ ಆವೇಗವನ್ನು ಸೇರಿಸಲು ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.
ಮಸ್ಕತ್ನಲ್ಲಿರುವ ಹೋಟೆಲ್ ತಲುಪಿದ ನಂತರ, ಪ್ರಧಾನಿಯವರನ್ನು ಭಾರತೀಯ ಅನಿವಾಸಿ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು, ಇದರಲ್ಲಿ ಮಕ್ಕಳು ಒಮಾನ್ ಸಾಂಪ್ರದಾಯಿಕ ನೃತ್ಯ, ಭಾರತೀಯ ಶಾಸ್ತ್ರೀಯ ನೃತ್ಯಗಳ ಮಿಶ್ರಣ – ಕೂಚಿಪುಡಿ ಮತ್ತು ಕಥಕ್, ರಾಜಸ್ಥಾನದ ಘೂಮರ್, ಕರ್ನಾಟಕದ ಜಾನಪದ ನೃತ್ಯ – ಯಕ್ಷನ ಮತ್ತು ಇತರ ನೃತ್ಯಗಳನ್ನು ಪ್ರಸ್ತುತಪಡಿಸಿದರು.
ತಮ್ಮ ಎರಡು ದಿನಗಳ ಭೇಟಿಯ ಸಮಯದಲ್ಲಿ, ಒಮಾನ್ನ ಸುಲ್ತಾನರನ್ನು ಅವರ ಅರಮನೆಯಲ್ಲಿ ಭೇಟಿಯಾಗುವುದರ ಜೊತೆಗೆ, ಪ್ರಧಾನಿಯವರು ವ್ಯಾಪಾರ ವೇದಿಕೆಯಲ್ಲಿ ಎರಡೂ ದೇಶಗಳ ವ್ಯಾಪಾರ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ವಿದ್ಯಾರ್ಥಿಗಳು ಮತ್ತು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಹನ ನಡೆಸಲಿದ್ದಾರೆ.
ಅಷ್ಟೇ ಅಲ್ಲದೇ ಒಮಾನ್ನಲ್ಲಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ಒತ್ತಡವನ್ನು ನಿವಾರಿಸಲು ಪ್ರಧಾನ ಮಂತ್ರಿಯವರ ‘ಪರೀಕ್ಷಾ ಪೇ ಚರ್ಚಾ’ವನ್ನೂ ಆಲಿಸಲಿದ್ದಾರೆ.
ಭಾರತ ಮತ್ತು ಒಮಾನ್ ತಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ವರ್ಷದಲ್ಲಿ, ದೀರ್ಘಕಾಲದ ಮತ್ತು ಐತಿಹಾಸಿಕ ಪಾಲುದಾರರೊಂದಿಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಈ ಭೇಟಿ ಬಹಳ ಮಹತ್ವದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


