
ಕಾಬೂಲ್: ಅಫ್ಘಾನಿಸ್ಥಾನಕ್ಕೆ ಮತ್ತೊಮ್ಮೆ ಭಾರತ ನೆರವಿನ ಹಸ್ತ ಚಾಚಿದೆ. ಸೋಮವಾರ ಬೆಳಗಿನ ಜಾವ 2:00 ಗಂಟೆಗೆ ಉತ್ತರ ಅಫ್ಘಾನಿಸ್ತಾನದ ಮಜರ್-ಐ-ಶರೀಫ್ ನಗರದ ಬಳಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಭೂಕಂಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಭಾರತ ಆಹಾರ ಸಾಮಗ್ರಿಗಳನ್ನು ತಲುಪಿಸಿದೆ.
ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಭಾರತ ಕಳುಹಿಸಿದ ನೆರವಿನ ಚಿತ್ರಗಳನ್ನು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
“ಅಫ್ಘಾನ್ ಜನರಿಗೆ ಭಾರತ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ, ಭಾರತವು ಭೂಕಂಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸಿದೆ ಭಾರತ ಮೊದಲು ಪ್ರತಿಕ್ರಿಯಿಸಿದೆ” ಎಂದು ಜೈಸ್ವಾಲ್ X ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಫ್ಘಾನಿಸ್ತಾನದ ಸಚಿವ ಅಮೀರ್ ಖಾನ್ ಮುತ್ತಕಿ ಅವರಿಗೆ ಕರೆ ಮಾಡಿ ಬಾಲ್ಖ್, ಸಮಂಗನ್ ಮತ್ತು ಬಾಗ್ಲಾನ್ ಪ್ರಾಂತ್ಯಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಜೀವಹಾನಿಗೆ ಸಂತಾಪ ಸೂಚಿಸಿದರು.
“ಬಾಲ್ಖ್, ಸಮಂಗನ್ ಮತ್ತು ಬಾಗ್ಲಾನ್ ಪ್ರಾಂತ್ಯಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಜೀವಹಾನಿಗೆ ಸಂತಾಪ ಸೂಚಿಸಲು ಇಂದು ಮಧ್ಯಾಹ್ನ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರಿಗೆ ಕರೆ ಮಾಡಿದೆ. ಭೂಕಂಪ ಪೀಡಿತ ಸಮುದಾಯಗಳಿಗೆ ಭಾರತೀಯ ಪರಿಹಾರ ಸಾಮಗ್ರಿಗಳನ್ನು ಇಂದು ಹಸ್ತಾಂತರಿಸಲಾಗುತ್ತಿದೆ. ಶೀಘ್ರದಲ್ಲೇ ಹೆಚ್ಚಿನ ಔಷಧಿಗಳ ಸರಬರಾಜು ತಲುಪಲಿದೆ” ಎಂದು ಜೈಶಂಕರ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
2021 ರಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ದೇಶವನ್ನು ಅಪ್ಪಳಿಸಿದ ಮಾರಕ ಭೂಕಂಪಗಳ ಪಟ್ಟಿಗೆ ಈ ವಿಪತ್ತು ಹೊಸ ಸೇರ್ಪಡೆ. ಕೇವಲ ಎರಡು ತಿಂಗಳ ಹಿಂದೆ, ಪೂರ್ವದಲ್ಲಿ ಸಂಭವಿಸಿದ ಭೂಕಂಪವು 2,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು.
Reaffirming its support to the Afghan people, India delivers food items for the families affected by the earthquake. #Indiafirstresponder https://t.co/s3GNLSfZsJ pic.twitter.com/bZ3XppmTwi
— Randhir Jaiswal (@MEAIndia) November 3, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



