ನವದೆಹಲಿ: ಸಂಸತ್ತಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ಅವರು, ಮುರ್ಮು ಅವರನ್ನು “ದುರ್ಬಲ ವ್ಯಕ್ತಿ” ಎಂದು ಕರೆದಿದ್ದಾರೆ. ಇದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.
66 ವರ್ಷ ವಯಸ್ಸಿನ ಮುರ್ಮು ಅವರು ದೀರ್ಘ ಸಾಂಪ್ರದಾಯಿಕ ಭಾಷಣದ ಕಾರಣದಿಂದ ದಣಿದಿದ್ದಾರೆ ಎಂದು ಸೋನಿಯಾ ಹೇಳಿದ್ದಾರೆ. ಇದನ್ನು ಬಿಜೆಪಿ ಖಂಡಿಸಿದ್ದು, ಇದು ಅವಮಾನಕರ ಹೇಳಿಕೆ ಎಂದಿದೆ. ಅಲ್ಲದೇ ಕ್ಷಮೆಯಾಚನೆ ಮಾಡುವಂತೆ ಸೋನಿಯಾ ಗಾಂಧಿಯನ್ನು ಆಗ್ರಹಿಸಿದೆ.
ಬಜೆಟ್ ಅಧಿವೇಶನದ ಆರಂಭವನ್ನು ಗುರುತಿಸಲು ಮುರ್ಮು ಇಂದು ಬೆಳಿಗ್ಗೆ ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರಪತಿ ಭಾಷಣದ ಬಗ್ಗೆ ಬಳಿಕ ಸುದ್ದಿಗಾರರು ಸೋನಿಯಾ ಗಾಂಧಿ ಬಳಿ ಅಭಿಪ್ರಾಯ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಅವರು, “ರಾಷ್ಟ್ರಪತಿ ಕೊನೆಯವರೆಗೂ ತುಂಬಾ ದಣಿದಿದ್ದರು. ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು, ಪೂವರ್ ಥಿಂಗ್” ಎಂದಿದ್ದಾರೆ.
ಸೋನಿಯಾ ಗಾಂಧಿಯವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಪಕ್ಷದ ಮುಖ್ಯಸ್ಥ ಜೆ.ಪಿ. ನಡ್ಡಾ ಅವರು ಇದು “ಆಳವಾದ ಅಗೌರವ” ಎಂದು ಹೇಳಿದ್ದಾರೆ ಮತ್ತು ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಘನತೆಯ ಬಗ್ಗೆ ವಿರೋಧ ಪಕ್ಷದ ನಿರ್ಲಕ್ಷ್ಯವನ್ನು ಒತ್ತಿಹೇಳುತ್ತದೆ. ಅವರ ದಲಿತ ವಿರೋಧಿ, ಬುಡಕಟ್ಟು ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.