ಮುಂಬಯಿ: ವೈದ್ಯರಿಂದ ಮೃತನಾಗಿದ್ದಾನೆ ಎಂದು ಘೋಷಿಸಲ್ಪಟ್ಟ 45 ವರ್ಷದ ವ್ಯಕ್ತಿಯೊಬ್ಬ ಮರಣೋತ್ತರ ಪರೀಕ್ಷೆಯ ವೇಳೆ ಎಚ್ಚೆತ್ತುಕೊಂಡ ಘಟನೆ ಮುಂಬಯಿಯ ಸಿಯೋನ್ ಆಸ್ಪತ್ರೆಯಲ್ಲಿ ನಡೆದಿದೆ.
ಭಾನುವಾರ ಬೆಳಿಗ್ಗೆ 11.45ರ ವೇಳೆಗೆ ಸುಲೋಚನ ಶೆಟ್ಟಿ ಮಾರ್ಗ್ ಸಮೀಪದ ಎಸ್ಟಿ ಬಸ್ ಡೆಪೋಟ್ ಬಳಿ ವ್ಯಕ್ತಿಯೊಬ್ಬ ಪ್ರಜ್ಞಾಹೀನನಾಗಿ ಬಿದ್ದಿದ್ದ, ತಕ್ಷಣ ಸ್ಥಳೀಯರು ಈ ಬಗ್ಗೆ ಸಿಯೋನ್ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಆಗಮಿಸಿದ ಪೊಲೀಸರು ಸಿಯೋನ್ ಆಸ್ಪತ್ರೆ,(ಇದನ್ನು ಲೋಕಮಾನ್ಯ ತಿಲಕ್ ಜನರಲ್ ಆಸ್ಪತ್ರೆ ಎಂದು ಕರೆಯಲಾಗುತ್ತದೆ) ದಾಖಲು ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿದ್ದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರೋಹನ್ ರೋಹೆಕರ್, ಈತನ ಪಲ್ಸ್ ಚೆಕ್ ಮಾಡಿ ತಕ್ಷಣವೇ ಮೃತನಾಗಿದ್ದಾನೆ ಎಂದು ಘೋಷಿಸಿದ್ದಾರೆ. ಬಳಿಕ ಆತನನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಆದರೆ ಮರಣೋತ್ತರ ಪರೀಕ್ಷೆಗೆ ಇನ್ನೆನು ಎರಡೇ ನಿಮಿಷ ಇದೆ ಎಂದಾಕ್ಷಾಣ ಆ ವ್ಯಕ್ತಿ ಕಣ್ಣು ತೆರೆದಿದ್ದಾನೆ. ಉಸಿರಾಟ ನಡೆಸಿದ್ದಾನೆ.
ವ್ಯಕ್ತಿ ಮೃತ ಎಂದು ಘೋಷಣೆಯಾದ ಎರಡು ಗಂಟೆಗಳ ಬಳಿಕವೇ ಮರಣೋತ್ತರ ಪರೀಕ್ಷೆ ನಡೆಸುವ ನಿಯಮ ಆಸ್ಪತ್ರೆಯಲ್ಲಿದೆ. ಅಷ್ಟರವರೆಗೆ ಹೆಣವನ್ನು ಅಪಘಾತ ವಾರ್ಡ್ನಲ್ಲಿ ಇಡಲಾಗುತ್ತದೆ. ಈ ಎರಡು ಗಂಟೆಯನ್ನು ಕೂಲಿಂಗ್ ಆಫ್ ಪಿರೆಡ್ ಎನ್ನಲಾಗುತ್ತಿದೆ. ಈ ವೇಳೆಯಲ್ಲಿ ವ್ಯಕ್ತಿ ಮತ್ತೆ ಉಸಿರಾಟ ನಡೆಸುತ್ತಾನೆಯೇ ಎಂದು ಪರೀಕ್ಷೆ ನಡೆಸಲಾಗುತ್ತದೆ. ಆದರೆ ಸಿಯಾನ್ ಆಸ್ಪತ್ರೆಯ ವೈದ್ಯರು ಈ ಎರಡು ಗಂಟೆಗಳ ಕಾಲ ಕಾಯದೆ ತಕ್ಷಣವೇ ಹೆಣವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂಬ ಆರೋಪವಿದೆ.
ಇದೀಗ ತನ್ನ ಮುಖ ಮುಚ್ಚಿಕೊಳ್ಳಲು ವೈದ್ಯರು, ಆತ ಮರಣ ಹೊಂದಿದ್ದಾನೆ ಎಂಬ ಬಗ್ಗೆ ತಾವು ಬರೆದ ವರದಿಯನ್ನು ಹರಿದು ಬಿಸಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಬದುಕುವ ಸಾಧ್ಯತೆಯಿದ್ದರೂ ವ್ಯಕ್ತಿಯೊಬ್ಬ ಮೃತನಾಗುತ್ತಿದ್ದ. ಇದೀಗ ಆಸ್ಪತ್ರೆ ಮತ್ತು ವೈದ್ಯರು ಕಠಿಣಕ್ರಮವನ್ನು ಎದುರಿಸುವ ಭೀತಿಯಲ್ಲಿದ್ದಾರೆ.
ಆ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಮತ್ತೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ. ಆತ ಯಾರು ಎಂಬ ಬಗ್ಗೆ ಇನ್ನೂ ಪತ್ತೆಯಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.