ಮಂಗಳೂರು : ರೋಟರಿ ಕ್ಲಬ್ ವಿಭಾಗ 4ರ ಕ್ರಿಕೇಟ್ ಪಂದ್ಯಾಟ ಮಂಗಳೂರಿನ ಎಲೋಸಿಯಸ್ ಕಾಲೇಜಿನ ಮೈದಾನದಲ್ಲಿ ನಡೆಯಿತು.ಸ್ಫೋಟ್ಸ್ ಪ್ರಮೋಟರ್ಸ್ನ ಮಾಲಕರು ಶ್ರೀದೇವಿ ಕಾಲೇಜಿನ ಮಾಲಕರು ಆದ ಶ್ರೀಯುತ ಸದಾನಂದ ಶೆಟ್ಟಿಯವರು ಪಂದ್ಯಾಟವನ್ನು ಉದ್ಘಾಟಿಸಿದರು.
ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಆಯೋಜಿಸಿದ ಈ ಪಂದ್ಯಾಟವು ಒಳ್ಳೆಯ ರೀತಿಯಿಂದ ನಡೆಯಲಿ ಹಾಗೂ ರೋಟರಿ ಕ್ಲಬ್ಬಿನಲ್ಲಿ ಹಿರಿಯ ಕಿರಿಯ ಸದಸ್ಯರಿದ್ದು ಸಮಾಜದಲ್ಲಿ ಉತ್ತಮ ರೀತಿಯ ಸೇವೆಯನ್ನು ಮಾಡುತ್ತ ಸಮಾಜೋಪಕಾರಿ ಕ್ಲಬ್ ಆಗಿದೆ. ಮುಂದೆಯು ಹೆಚ್ಚಿನ ಸಹಾಯ ಸಹಕಾರ ಈ ಕ್ಲಬಿನಿಂದ ಸಮಾಜಕ್ಕೆ ಸಿಗಲಿ ಎಂದು ಹೇಳುತ್ತಾ ಪಂದ್ಯಾಟಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಎಲೋಸಿಯಸ್ ಕಾಲೇಜಿನ ಪ್ರಿನ್ಸಿಪಾಲ್ ಫಾ| ಸ್ವಿಬರ್ಟ್ ಡಿ.ಸಿಲ್ವ ಹಾಗೂ ರೋಟರಿ ವಿಭಾಗ ನಾಲ್ಕರ ಸಹಾಯಕ ಗನರ್ವರ್ ರೊ|ರಾಮಕೃಷ್ಣ ಕಾಮತ್ ಉಪಸ್ಥಿತರಿದ್ದು. ಪದ್ಯಾಟದ ಯಶಸ್ವಿಗೆ ಹಾರೈಸಿದರು. ಕ್ಲಬ್ ಕಾರ್ಯದರ್ಶಿ ಶ್ರೀಯುತ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಮಂಗಳೂರು, ಸೆಂಟ್ರಲ್ನ ಅಧ್ಯಕ್ಷ ರೊ| ಎಲಿಯಾಸ್ ಸಾಂಟಿಸ್ ಸ್ವಾಗತಿಸಿ ವಿಭಾಗಿಯ ಸೇನಾನಿ ರೊ| ರಾಜಗೋಪಾಲ್ ರೈ ವಂದಿಸಿದರು. ರೊ| ಡಾ.ನಂದಕಿಶೋರ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.