ನವದೆಹಲಿ: 3 ದೇಶಗಳ ಪ್ರವಾಸದಲ್ಲಿದ್ದ ಭಾರತದ ಪ್ರಧಾನಿ ಪ್ರವಾಸ ಮುಗಿಸಿ ತವರಿಗೆ ಆಗಮಿಸಿದ್ದಾರೆ. ನೈಜಿರಿಯಾದಿಂದ ಪ್ರಯಾಣ ಆರಂಭಿಸಿದ ಮೋದಿ ಬ್ರೆಜಿಲ್ ಸೇರಿದಂತೆ ಗಯಾನಕ್ಕೆ ಭೇಟಿ ನೀಡಿ ಭಾರತಕ್ಕೆ ಭಾರತಕ್ಕೆ ವಾಪಾಸ್ ಆಗಿದ್ದಾರೆ. ಮೋದಿಯ ಮೂರು ರಾಷ್ಟ್ರಗಳ ಭೇಟಿ ವೇಳೆ ಹಲವು ಮಹತ್ವದ ನಿರ್ಣಯಗಳು ಮತ್ತು ಒಪ್ಪಂದಗಳಾಗಿವೆ.
ಬ್ರೆಜಿಲ್ ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿವರು ಹಲವು ರಾಷ್ಟ್ರಗಳ ನಾಯಕರನ್ನು ಭೇಟಿಯಾಗಿದ್ದಾರೆ. ಭಾರತ ಮತ್ತು ವಿವಿಧ ರಾಷ್ಟ್ರಗಳ ನಡುವಿನ ಬಾಂಧ್ಯವನ್ನು ವೃದ್ದಿಸಲು ಮೋದಿ ಜಾಗತಿಕ ನಾಯರೊಂದಿಗೆ ಸಭೆ ನಡೆಸಿದ್ದಾರೆ.
ಇಟಲಿ, ಇಂಡೋನೇಷ್ಯಾ, ನಾರ್ವೆ, ಪೋರ್ಚುಗಲ್, ಈಜಿಪ್ಟ್ ಮತ್ತು ದ.ಕೊರಿಯಾ ಸಹಿತ ಹಲವು ರಾಷ್ಟ್ರಗಳ ನಾಯಕರನ್ನು ಭೇಟಿಯಾಗಿರುವ ಮೋದಿ, ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸಿ, ಮತ್ತಷ್ಟು ಬಲಪಡಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಐಎಂಎಫ್ ಉಪ ವ್ಯವಸ್ಥಾಪಕಿ ನಿರ್ದೇಶಕಿ ಗೀತಾ ಗೋಪಿನಾಥ್ ಮತ್ತು ಯುರೋಪಿಯನ್ ಒಕ್ಕೂಟದ ಅಧ್ಯಕ್ಷ ಉರ್ಸುಲಾ ವೊನ್ ಡರ್ ಲಿಯೆನ್ರನ್ನು ಕೂಡ ಭೇಟಿಯಾದರು.
ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾಗಿದ್ದ ಪ್ರಧಾನಿ ಮೋದಿ ರಕ್ಷಣೆ, ಭದ್ರತೆ, ವ್ಯಾಪಾರ ಹಾಗೂ ತಂತ್ರಜ್ಞಾನ ರಂಗಗಳಲ್ಲಿ ದ್ವಿಪಕ್ಷೀಯ ಬಾಂಧವ್ಯಗಳನ್ನು ಗಟ್ಟಿಗೊಳಿಸಬಹುದಾದ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದ್ದಾರೆ. ಜಗತ್ತಿನ ಒಳಿತಿಗೆ ಭಾರತ-ಇಟಲಿ ಸ್ನೇಹಬಾಂಧವ್ಯ ಮಹೋನ್ನತ ಕೊಡುಗೆ ನೀಡಲಿದೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗಾಗಲೇ ವಿವಿಧ ರಂಗಗಳಲ್ಲಿ ಹೊಂದಿರುವ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನ ಹೊಂದಿರುವ ಭಾರತ-ಇಂಡೋನೇಷ್ಯಾ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂತೊರನ್ನು ಭೇಟಿಯಾದ ಪ್ರಧಾನಿ ಭದ್ರತೆ ಮತ್ತು ಸ್ವಾಸ್ಥ್ಯ ರಂಗಗಳಲ್ಲಿ ಪರಸ್ಪರ ಸಹಕಾರ ಕೊಂಡಿಯನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದಾರೆ. ಉಭಯ ರಾಷ್ಟ್ರಗಳ ಸ್ನೇಹ ಬಾಂಧವ್ಯಗಳಿಗೆ 75 ವರ್ಷ ತುಂಬಿದ ಪ್ರಯುಕ್ತ ಅಧ್ಯಕ್ಷ ಪ್ರಬೊವೊ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಪ್ರಧಾನಿ ಮೋದಿ ಅವರು ಪೋರ್ಚುಗಲ್ ಪ್ರಧಾನಿ ಲೂಯಿಸ್ ಮೊಂಟೆನೆಗ್ರೆ ಜತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದು, ಪೋರ್ಚುಗಲ್ ಜತೆಗಿನ ದೀರ್ಘಕಾಲೀನ ಬಾಂಧವ್ಯಗಳನ್ನು ಭಾರತ ಅಭಿಮಾನದಿಂದ ಪೋಷಿಸುತ್ತಿದೆ. ನವೀಕರಣಶೀಲ ಇಂಧನ, ಹಸಿರು ಹೈಡೋಜನ್ ರಂಗಗಳಲ್ಲಿ ಸಹಕಾರಕ್ಕೆ ತುಂಬು ಅವಕಾಶಗಳಿವೆ. ಬಲವಾದ ರಕ್ಷಣಾಬಾಂಧವ್ಯಗಳು, ಜನ-ಜನ ಸಂಪರ್ಕ ಮತ್ತಿತರ ವಿಚಾರವಾಗಿಯೂ ನಾವು ಚರ್ಚಿಸಿದೆವು ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಈಜಿಪ್ಟ್ ಅಧ್ಯಕ್ಷ ಅಬೈಲ್ ಫತ್ತಾಹ್ ಎಲ್-ಸಿಸಿ , ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರೊಂದಿಗೆ ಉತ್ತಮ ಸಂವಾದ ನಡೆಸಿರುವ ಮೋದಿ ಯುರೋಪಿಯನ್ ಒಕ್ಕೂಟದ ಕಮಿಶನ್ ಅಧ್ಯಕ್ಷೆ ಉರ್ಸುಲಾ ವೊನ್ ಡರ್ ಲಿಯನ್ ಅವರನ್ನು ಭೇಟಿಯಾಗಿ ಜಾಗತಿಕ ಒಳಿತಿಗಾಗಿ ಭಾರತವು ಯುರೋಪ್ ಒಕ್ಕೂಟದ ಜತೆಗೂಡಿ ದುಡಿಯಲಿದೆ ಎಂದಿದ್ದಾರೆ.
ರಿಯೋ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭೇಟಿ ತನ್ನ ಪಾಲಿಗೆ ಬಲು ಮಹತ್ವದ್ದು. ಹಸಿವು ಮತ್ತು ಬಡತನ ನಿರ್ಮೂಲನೆಯಲ್ಲಿ ಭಾರತದ ಯಶೋಗಾಥೆಯನ್ನು ಮೋದಿಯವರು ನನಗೆ ವಿವರಿಸಿದರು. ವಿನೂತನವಾದ ರಚನಾತ್ಮಕ ಉಪಕ್ರಮಗಳ ಬಗ್ಗೆ ಜಗತ್ತು ಭಾರತದಿಂದ ಕಲಿಯುವುದು ಬಹಳಷ್ಟಿದೆ ಎಂದು ಐಎಂಎಫ್ ಉಪ ಆಡಳಿತ ನಿರ್ದೇಶಕರಾದ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಜಾಗತಿಕ ನಾಯಕರೆದುರು ಮೋದಿ ಭಾರತ ಅಭಿವೃದ್ದಿ ಕುರಿತು ಮಾತನಾಡಿದ್ದು, ಭಾರತವು ಆಹಾರ ಭದ್ರತೆ ಹೆಚ್ಚಿಸಲು ಮತ್ತು ಬಡತನ ನಿರ್ಮೂಲನೆಗೆ ಕಟಿಬದ್ಧವಾಗಿದೆ. ನಮ್ಮ ಸಾಮೂಹಿಕ ಬಲವನ್ನು ಸಜ್ಜುಗೊಳಿಸಿಕೊಂಡು, ಸಂಪನ್ಮೂಲಗಳ ಬಳಸಿಕೊಂಡು ಜಗತ್ತಿನ ಸಮಸ್ತರಿಗೂ ಭವ್ಯ ಭವಿಷ್ಯ ಕಲ್ಪಿಸುವುದು ನಮ್ಮ ಧೈಯ ಮತ್ತು ಇದೇ ನಮ್ಮ ಯಶಸ್ಸಿನ ಸೋಪಾನ ಎಂದು ಪ್ರತಿ ಸಂದೇಶದಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಭಾರತದ ಪ್ರಧಾನಿಯೊಬ್ಬರಿಗೆ ಜಾಗತಿಕ ನಾಯರಿಂದ ಇಷ್ಟು ಉತ್ತಮ ಗೌರವ ಮತ್ತು ಬೆಂಬಲ ಸಿಗುತ್ತಿರುವುದು ನಿಜಕ್ಕು ಅಭಿನಂದನಾರ್ಹ, ಆ ನಿಟ್ಟಿನಲ್ಲಿ ಅವಲೋಕಿಸಿದಾಗ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಭಾರತ ಮತ್ತು ಹಲವು ಜಾಗತಿಕ ರಾಷ್ಟ್ರಗಳ ನಡುವೆ ಬಾಂಧವ್ಯಗಳು ವೃದ್ಧಿಸಿವೆ. ವಿಪಕ್ಷಗಳೂ ಬೆರಗಾಗುವಂತೆ ಹಲವು ರಾಷ್ಟ್ರಗಳೊಡನೆ ಮಹತ್ವದ ಒಪ್ಪಂದಗಳನ್ನೂ ಭಾರತ ಮಾಡಿಕೊಂಡಿದೆ. ಶತ್ರು ರಾಷ್ಟ್ರಗಳು ಕೂಡ ಈಗ ಭಾರತದೊಂದಿಗಿನ ವೈಮನಸ್ಸನ್ನು ಮುರಿದು ಸ್ನೇಹ ಸಂಬಂಧ ಬೆಳೆಸಲು ಮುಂದಾಗಿರುವುದು ಮೋದಿ ನಾಯಕತ್ವಕ್ಕೆ ಸಂದ ದೊಡ್ಡ ಜಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.