ಆಲಂಕಾರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಆಲಂಕಾರು ಇದರ ಸಹಯೋಗದಲ್ಲಿ ಆಲಂಕಾರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಇದರಲ್ಲಿ ಭಾಗವಹಿಸಿದ ಆಲಂಕಾರು ಭಾರತಿ ಶಾಲಾ ವಿದ್ಯಾರ್ಥಿಗಳು ಕಿರಿಯರ ವಿಭಾಗ ಮತ್ತು ಹಿರಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಿರಿಯರ 1ರಿಂದ 4ನೇ ತರಗತಿ ವಿಭಾಗದ ಧಾರ್ಮಿಕ ಪಠಣದಲ್ಲಿ ರವೀಶ (ಪ್ರಥಮ), ಲಘು ಸಂಗೀತದಲ್ಲಿ ಅನುಜ್ಞಾ. ಕೆ.(ಪ್ರಥಮ),ಇಂಗ್ಲಿಷ್ ಕಂಠಪಾoದಲ್ಲಿ ಮೋಕ್ಷಿತ್ (ದ್ವಿತೀಯ), ಛದ್ಮವೇಷದಲ್ಲಿ ಹರ್ಷಿತ್ (ದ್ವೀತಿಯ), ತಳು ಕಂಠಪಾಠದಲ್ಲಿ ಅನುಜ್ಞಾ. ಕೆ. (ತೃತೀಯ), ಚಿತ್ರಕಲೆಯಲ್ಲಿ ಬೆನಕೇಶ (ಪ್ರಥಮ), ಅಭಿನಯ ಗೀತೆಯಲ್ಲಿ ಮಧುಶ್ರೀ (ಪ್ರಥಮ), ಕ್ಲೇ ಮಾಡಲಿಂಗ್ನಲ್ಲಿ ನಿಖಿಲ್ (ದ್ವೀತಿಯ), ಯಕ್ಷಗಾನದಲ್ಲಿ (ವೈಯಕ್ತಿಕ) ಯಶಸ್ ಪ್ರಥಮ ಸ್ಥಾನ ಪಡೆದಿದ್ದಾರೆ. ರಸಪ್ರಶ್ನೆಯಲ್ಲಿ ಅನುಜ್ಞಾ .ಕೆ, ಹಿತೇಶ್, ಶ್ರೀನಿಧಿ, ನಿಖಿಲ್ ತಂಡ (ಪ್ರಥಮ), ಜನಪದ ನೃತ್ಯದಲ್ಲಿ ಮಧುಶ್ರೀ .ಎ, ಸ್ಪರ್ಧಾ.ಐ, ವರ್ಷ, ವಾಣಿ, ಕೃತಿ, ಪ್ರತೀಕ್ಷಾ ಅವರ ತಂಡ (ತೃತೀಯ) ಸ್ಥಾನ ಪಡೆದಿದ್ದಾರೆ.
ಹಿರಿಯ 5 ರಿಂದ 7ನೇ ತರಗತಿ ವಿಭಾಗದ ಕನ್ನಡ ಮತ್ತು ಹಿಂದಿ ಕಂಠಪಾಠ, ಧಾರ್ಮಿಕ ಪಠಣ (ಸಂಸ್ಕೃತ)ದಲ್ಲಿ ಧನ್ಯಶ್ರೀ (ಪ್ರಥಮ), ಕೊಂಕಣಿ ಕಂಠಪಾಠದಲ್ಲಿ ನಾಗಲಕ್ಮೀ (ತೃತೀಯ), ಲಘು ಸಂಗೀತ, ಅಭಿನಯ ಗೀತೆಯಲ್ಲಿ ಶ್ರೇಯಾ ಆಲಂಕಾರು (ಪ್ರಥಮ), ಛದ್ಮವೇಷದಲ್ಲಿ ಶ್ರೇಯಾ ಆಲಂಕಾರು (ತೃತೀಯ), ಕಥೆ ಹೇಳುವುದು ಕಿರಣ್ (ತೃತೀಯ), ಕ್ಲೇ ಮಾಡಲಿಂಗ್ನಲ್ಲಿ ಶಿವಪ್ರಸಾದ್ (ಪ್ರಥಮ), ಯಕ್ಷಗಾನ (ವೈಯಕ್ತಿಕ)ದಲ್ಲಿ ಶ್ರೇಯಾ ಆಲಂಕಾರು (ಪ್ರಥಮ), ದೇಶಭಕ್ತಿ ಗೀತೆಯಲ್ಲಿ ಯಶಸ್ವಿ, ಸಿಂಚಾನ ಎಲ್. ಶೆಟ್ಟಿ, ರಚನ, ದೀಪ್ತಾ ಎನ್.ಎಸ್, ಶ್ರೇಯಾ ಅನುಜ್ಞಾ ವೈ.ಟಿ. ಅವರ ತಂಡ (ಪ್ರಥಮ), ಯೋಗಾಸನದಲ್ಲಿ ರವೀತೇಜ (ಪ್ರಥಮ), ಸಂಸ್ಕೃತ ಕಂಠಪಾಠದಲ್ಲಿ ಶ್ರೇಯಾ (ಪ್ರಥಮ) ಸ್ಥಾನಗಳನ್ನು ಪಡೆದಿದ್ದಾರೆ.
ಸುಮಾರು 16 ವಿಭಾಗಗಳ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಭಾರತಿ ಶಾಲೆ, ಆಲಂಕಾರು ಇಲ್ಲಿನ ವಿದ್ಯಾರ್ಥಿಗಳು ನವಂಬರ್ 6 ಮತ್ತು 7 ರಂದು ಪ್ರಗತಿ ಶಾಲೆ ಕಾಣಿಯೂರಿನಲ್ಲಿ ನಡೆಯಲಿರುವ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.