ಮಂಗಳೂರು : ನಂದಿಗುಡ್ಡೆಯ ಹಿಂದೂ ಸ್ಮಶಾನದ ಭಾಗವನ್ನು ಮುಸ್ಲಿಂರಿಗೆ ಸಂಸ್ಕಾರಕ್ಕಾಗಿ ನೀಡುವುದನ್ನು ವಿರೋಧಿಸಿ ಅ.11 ರಂದು ವಿಶ್ವ ಹಿಂದೂ ಪರಿಷದ್ ಪ್ರತಿಭಟನೆ ಕೈಗೊಂಡಿದೆ ಎಂದು ಪ್ರಾಂತ ಗೋ-ಸೇವಾ ಪ್ರಮುಖರಾದ ಕಟೀಲು ದಿನೇಶ್ ಪೈ ಹೇಳಿದ್ದಾರೆ.
ಅ.11ರ ಸಂಜೆ 4 ಗಂಟೆಗೆ ಪ್ರತಿಬಟನಾ ಮೆರವಣಿಗೆ ಅತ್ತಾವರ ಕಟ್ಟೆಯಿಂದ ನಂದಿಗೂಡ್ಡೆ ಸ್ಮಶಾನದವರೆಗೆ ನಡೆಯಲಿದ್ದು, 4-30 ಸ್ಮಶಾನದೆದರು ಪ್ರತಿಭಟನಾ ಸಭೆ ನಡೆಯಲಿದೆ
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಂದಿಗುಡ್ಡೆಯ ಜಮೀನು ಸರ್ವೇ ನಂಬ್ರ 250/2, 251/1 ಹಾಗೂ252/1 ರಂತೆ 2.58 ಎಕರೆ ಭೂಮಿ ಜಾಗವನ್ನು ಮುಹಿದ್ದೀನ ಜುಮ್ಮಾ ಮಸೀದಿ ಮತ್ತು ದಾರ್ಸ, ನೂರುಲ್ ಇಸ್ಲಾಂ ಮದರಸಾದವರು ಮುಂಜೂರು ಮಾಡವಂತೆ ಕೇಳಿಕೊಂಡಿದ್ದರು. ಇದನ್ನು ಪರಿಶೀಲಿಸಿ ಮಂಜೂರು ಮಾಡುವಂತೆ ಶಾಸಕ ಮೊಹಿಯುದ್ದೀನ್ ಬಾವಾರವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಲಿಖಿತವಾಗಿ ಪತ್ರ ಬರೆದಿದ್ದರು. ಆದರೆ ಈ ಭೂಮಿ ಸಾರ್ವಜನಿಕ ಪರಂಭೋಕು ಭೂಮಿಯಾಗಿದ್ದು ಅದನ್ನು ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿತ್ತು.
ಆದರೆ ಮಸೀದಿಯವರ ತಿರಸ್ಕೃತ ಅರ್ಜಿ ನಡುವೆ 26 ಸೆಂಟ್ಸ್ ಭೂಮಿಯನ್ನು ಮುಸ್ಲಿಂರಿಗೆ ದಫನ್ ಮಾಡಲು ಕಾಯ್ದಿರಿಸಿದೆ. ಆದರೆ ಈ ಜಾಗದಲ್ಲಿ ದೀನಬಂಧು, ದಲಿತೋದ್ಧಾರಕ ಕುದ್ಮುಲ್ ರಂಗ್ರಾವ್ ಅವರ ಸಮಾಧಿಯೂ ಇದೆ ಹಾಗೂ ಬ್ರಹ್ಮ ಸಮಾಜದ , ಹಿಂದುಗಳು ಸೇರಿದಂತೆ ಅನೆಕರ ಶವವನ್ನು ಇಲ್ಲೇ ದಫನ್ ಮಾಡಿದ್ದು, ಕೆಲವರ ಮೇಲೆ ಗೋರಿಯನ್ನು ಕಟ್ಟಿಲ್ಲ. ಅಲ್ಲದೇ ಈ ಪ್ರದೇಶದ ಸುತ್ತಮತ್ತ ದಲಿತ ಜನಾಂಗದವರು ಹೆಚ್ಚಾಗಿವಾಸವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಜಮೀನು ಮುಂಜೂರು ವಿಚಾರದಲ್ಲಿ ಯಾವುದೇ ಆಕ್ಷೇಪ ಕರೆದಿರುವುದಿಲ್ಲ ಯಾವುದೇ ಸೂಕ್ತರೀತ್ಯಾದ ಕ್ರಮ ಕೈಗೊಂಡಿಲ್ಲ ಕಳೆದ 500 ವರ್ಷಗಳಿಂದ ಇದು ಹಿಂದುಗಳ ರುದ್ರಭೂಮಿಯಾಗಿದೆ. ಈಗ ಇದನ್ನು ಇತರರಿಗೆ ನೀಡಬಾರದು ಎಂದು ಆ ಪ್ರದೇಶದ ನಿವಾಸಿ ಮತ್ತು ವಿಹಿಂಪ ಮುಖಂಡ ಶಿವಾನಂದ ಮೆಂಡನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ವಿಹಿಂಪ ಮುಖಂಡರಾದ ಗೋಪಾಲ್ ಕುತ್ತಾರ್, ಶರಣ ಪಂಪ್ ವೆಲ್, ಜಿತೇಂದ್ರಕೊಟ್ಟಾರಿ ಉಪಸ್ಥಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.