ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅತ್ಯುದ್ಭುವಾದ ಪ್ರದರ್ಶನವನ್ನು ನೀಡಿ ಬಳಿಕ ಹಾಕಿ ಕ್ರೀಡೆಗೆ ನಿವೃತ್ತಿಯನ್ನು ಘೋಷಿಸಿರುವ ಭಾರತದ ದಿಗ್ಗಜ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಮುಖೇನ ಶ್ಲಾಘನೆಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತ ಕಿರಿಯರ ಹಾಕಿ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಆ.16ರಂದು ಶ್ರೀಜೇಶ್ ಅವರಿಗೆ ಪತ್ರ ಬರೆದಿರುವ ಮೋದಿ, “ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವಂತೆ ಮಾಡಿದ ನಿಮ್ಮ ಅಭೂತಪೂರ್ವ ಪ್ರದರ್ಶನಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಒಂದು ಕಡೆ ಗೆಲುವಿನ ಸಿಹಿ,, ಮತ್ತೊಂದು ಕಡೆ ನಿವೃತ್ತಿಯ ಕಹಿ ಇದೆರಡು ನಿಮ್ಮನ್ನ ಭಾವುಕರನ್ನಾಗಿ ಮಾಡಿರಬಹುದು. ಆದರೆ ಕೋಚ್ ಆಗಿ ನಿಮ್ಮ ಮುಂದಿನ ಜೀವನ ಸ್ಪೂರ್ತಿ ದಾಯಕ ಮತ್ತು ಫಲಪ್ರದವಾಗಿರಲಿದೆ ಎಂಬ ನಂಬಿಕೆ ನನಗಿದೆ” ಎಂದಿದ್ದಾರೆ.
ಮೋದಿ ಪತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಶ್ರೀಜೇಶ್ ಅವರು, “ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ಹೃದಯಸ್ಪರ್ಶಿ ಪತ್ರವನ್ನು ಸ್ವೀಕರಿಸಿದೆ. ಹಾಕಿ ನನ್ನ ಜೀವನ ಮತ್ತು ನಾನು ಅದರ ಸೇವೆಯನ್ನು ಮುಂದುವರಿಸುತ್ತೇನೆ ಮತ್ತು ಭಾರತವನ್ನು ಹಾಕಿಯಲ್ಲಿ ಶಕ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ, ಇದರ ಆರಂಭವನ್ನು 2020, 2024 ರ ಒಲಿಂಪಿಕ್ ಪದಕಗಳೊಂದಿಗೆ ಮಾಡಲಾಗಿದೆ. ನನ್ನ ಮೇಲಿನ ನಂಬಿಕೆಗೆ ಧನ್ಯವಾದಗಳು ಪಿಎಂ ಸರ್” ಎಂದಿದ್ದಾರೆ.
Received this heart-warming letter from @narendramodi Sir on my retirement.
Hockey is my life and I'll continue to serve the game and work towards making India a power in hockey, the start of which has been made with the 2020, 2024 Olympic medals.
Thank You PM Sir for your… pic.twitter.com/vWmljOJ203— sreejesh p r (@16Sreejesh) September 11, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.