ಕೊಚ್ಚಿ: ಕರ್ನಾಟಕದ ಕರಾವಳಿಯ ಪಾಲಿಗೆ ಹೆಮ್ಮೆಯ ಸುದ್ದಿಯೊಂದು ಹೊರಬಿದ್ದಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರದೇಶಗಳ ಹೆಸರನ್ನು ಒಳಗೊಂಡ ಎರಡು ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳು ಲೋಕಾರ್ಪಣೆಯಾಗಿದೆ. ಕೊಚ್ಚಿನ್ ಶಿಫ್ ಯಾರ್ಡ್ ನಲ್ಲಿ ನಿರ್ಮಾಣಗೊಂಡ ಎರಡು ಯುದ್ದ ನೌಕೆಗಳಿಗೆ ಕೇಂದ್ರ ಸರಕಾರ ಮಲ್ಪೆ ಹಾಗೂ ಮುಲ್ಕಿ ಹೆಸರನ್ನು ಇಟ್ಟಿದು, ಈ ಮೂಲಕ ಈ ಎರಡು ಊರುಗಳ ಹೆಸರು ಇನ್ನು ಮೂಂದೆ ನೌಕಾಸೇನೆಯಲ್ಲಿ ಮಹತ್ವದ ಸ್ಥಾನ ಪಡೆಯಲಿದೆ.
ಕೇರಳದ ಕೊಚ್ಚಿನ್ ಶಿಫ್ ಯಾರ್ಡ್ನಲ್ಲಿ ನಿರ್ಮಾಣಗೊಂಡ ಜಲಾಂತರ್ಗಾಮಿ ವಿರೋಧಿ ಯುದ್ದ ನೌಕೆ ಐಎನ್ಎಸ್ ಮಲ್ಪೆ ಮತ್ತು ಐಎನ್ಎಸ್ ಮುಲ್ಕಿ ಸೆಪ್ಟೆಂಬರ್ 9 ರಂದು ನೌಕಾಪಡೆಗೆ ಹಸ್ತಾಂತರಗೊಂಡಿದೆ. ಈ ಹಸ್ತಾಂತರ ಸಮಾರಂಭದಲ್ಲಿ ಕೊಚ್ಚಿಯ ದಕ್ಷಿಣ ನೌಕಾಪಡೆಯ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ವಿ. ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿದ್ದರು. ಅವರ ಪತ್ನಿ ವಿಜಯ ಶ್ರೀನಿವಾಸ್ ಹಡಗುಗಳ ಸಮಾರಂಭ ಸಮಾರಂಭ ನೆರವೇರಿಸಿದರು.
ಈ ಹಡಗುಗಳು ಜಲಾಂತರ್ಗಾಮಿ ನೌಕೆಗಳ ಉಪಸ್ಥಿತಿಯನ್ನು ಪತ್ತೆ ಮಾಡಬಲ್ಲ ಅತ್ಯಾಧುನಿಕ ಸೋನಾರ್ ವ್ಯವಸ್ಥೆಯನ್ನು ಹೊಂದಿವೆ, ಇದು 78 ಮೀಟರ್ ಉದ್ದ ಮತ್ತು 11.36 ಮೀಟರ್ ಅಗಲವಿದ್ದು, 25 ನಾಟಿಕಲ್ ಮೈಲು ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಶತ್ರುಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು ಸುಧಾರಿತ ರೇಡಾರ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಹೊಂದಿವೆ.
The 4th & 5th ships of the Anti-Submarine Warfare Shallow Water Craft #ASWSWC project – Malpe & Mulki, under construction at #CochinShipyard Ltd, were launched at #Kochi on #09Sep by Mrs Vijaya Srinivas in presence of VAdm V Srinivas, FOCinC, #SNC. @cslcochin @IN_HQSNC pic.twitter.com/oBBn7AxDVY
— SpokespersonNavy (@indiannavy) September 10, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.