ನವದೆಹಲಿ: ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಗಂಭೀರ ಸಮಸ್ಯೆಗಳನ್ನು ಎತ್ತಿ ಹಿಡಿದಿರುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯ ಬಗ್ಗೆ ಕೇರಳ ಸರ್ಕಾರ ಏನನ್ನೂ ಮಾಡದೆ ನಿಷ್ಕ್ರಿಯಯಾಗಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ತೀವ್ರವಾಗಿ ಟೀಕಿಸಿದ್ದಾರೆ.
ಪಾಲಕ್ಕಾಡ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಡ್ಡಾ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವರದಿಯ ಶಿಫಾರಸುಗಳ ಅನುಷ್ಠಾನವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದಾರೆ. ಇದಕ್ಕೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) (ಸಿಪಿಎಂ) ನಾಯಕರು ಹಗರಣದಲ್ಲಿ ಒಳಗೊಂಡಿರುವುದೇ ಕಾರಣ ಎಂದಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗಿನ ಸಂವಾದದ ಸಂದರ್ಭದಲ್ಲಿ ಮಾತನಾಡಿದ ನಡ್ಡಾ ಅವರು, “ಹೇಮಾ ಸಮಿತಿಯ ವರದಿಯು ಕಮ್ಯುನಿಸ್ಟ್ ಪಕ್ಷದ ಜನರು ಭಾಗಿಯಾಗಿದ್ದಾರೆ ಎಂದು ನಿರ್ದಿಷ್ಟವಾಗಿ ಹೇಳಿದೆ ಎಂದು ಹೇಳಲು ನನಗೆ ತುಂಬಾ ವಿಷಾದವಿದೆ. ಮುಖ್ಯಮಂತ್ರಿ ಈ ವಿಷಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು” ಎಂದು ನಡ್ಡಾ ಪ್ರತಿಪಾದಿಸಿದರು.
ವರದಿಯ ಬಗ್ಗೆ ಕ್ರಮ ಕೈಗೊಳ್ಳಲು ಕೇರಳ ಸರಕಾರ ಹಿಂದೇಟು ಹಾಕುತ್ತಿರುವುದು ಅದು ಏನನ್ನೂ ಮುಚ್ಚಿಡುವುದನ್ನು ಸೂಚಿಸುತ್ತದೆ ಎಂದು ನಡ್ಡಾ ಆರೋಪಿಸಿದ್ದಾರೆ. “ಹೇಮಾ ಸಮಿತಿ ವರದಿಗೆ ನ್ಯಾಯದಾನ ವಿಳಂಬ ಏಕೆ? ಅವರನ್ನು ತಡೆಯುತ್ತಿರುವಅಂಶವಾದರೂ ಏನು? ನಿಮ್ಮನ್ನು ಕಾಡುತ್ತಿರುವ ಭಯ ಯಾವುದು? ನೀವು ಅದರ ಭಾಗವಾಗಿರುವುದೇ ನಿಮಗೆ ಭಯ. ಏಕೆಂದರೆ ನಿಮ್ಮ ಜನರು ಭಾಗಿಯಾಗಿರುವುದರಿಂದ ನೀವು ಅದನ್ನು ಮರೆಮಾಡಲು ಬಯಸುತ್ತಿದ್ದೀರಿ” ಎಂದು ನಡ್ಡಾ ಅವರು ಪಿಣರಾಯಿ ವಿಜಯನ್ ಅವರಿಗೆ ನೇರವಾಗಿ ಸವಾಲು ಹಾಕಿದ್ದಾರೆ.
ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳನ್ನು ಪರಿಶೀಲಿಸಲು ಸ್ಥಾಪಿಸಲಾದ ನ್ಯಾಯಮೂರ್ತಿ ಹೇಮಾ ಸಮಿತಿಯು ಡಿಸೆಂಬರ್ 2019 ರಲ್ಲಿ ತನ್ನ ವರದಿಯನ್ನು ಸಲ್ಲಿಸಿದೆ. ಆಗಸ್ಟ್ 19, 2023 ರಂದು ಇದನ್ನು ಸಾರ್ವಜನಿಕಗೊಳಿಸಲಾಗಿದೆ. ಈ ವರದಿಯು ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ವ್ಯವಸ್ಥಿತ ಶೋಷಣೆ ಮತ್ತು ನಿಂದನೆಯ ಕಠೋರ ಚಿತ್ರಣವನ್ನು ಮುಂದಿಟ್ಟಿದೆ. ವರದಿಯ ಪ್ರಕಾರ, ಉದ್ಯಮವು ಶಕ್ತಿಯುತ, ಪುರುಷ ಪ್ರಧಾನ್ಯತೆಯ ‘ಮಾಫಿಯಾ’ದಿಂದ ನಿಯಂತ್ರಿಸಲ್ಪಡುತ್ತಿದೆ. ಮಹಿಳೆಯರು ಕಿರುಕುಳವನ್ನು ನಿರಂತರವಾಗಿ ಅನುಭವಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.