ನವದೆಹಲಿ: ಜನ್ ಧನ್ ಯೋಜನೆ ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿದೆ. ಯೋಜೆ ಯಶಸ್ವಿಯಾಗಲು ಶ್ರಮಿಸಿದವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಮತ್ತು ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸುವಲ್ಲಿ ಯೋಜನೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
“ಇಂದು, ನಾವು ಒಂದು ಮಹತ್ವದ ಸಂದರ್ಭವನ್ನು ಗುರುತಿಸುತ್ತಿದ್ದೇವೆ. ಜನಧನ ಯೋಜನೆಗೆ 10ವರ್ಷ. ಎಲ್ಲಾ ಫಲಾನುಭವಿಗಳಿಗೆ ಅಭಿನಂದನೆಗಳು ಮತ್ತು ಈ ಯೋಜನೆಯನ್ನು ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಜನ್ ಧನ್ ಯೋಜನೆಯು ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವಲ್ಲಿ ಮತ್ತು ಕೋಟಿಗಟ್ಟಲೆ ಜನರಿಗೆ, ವಿಶೇಷವಾಗಿ ಮಹಿಳೆಯರು, ಯುವಕರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಘನತೆಯನ್ನು ನೀಡುವಲ್ಲಿ ಪ್ರಮುಖವಾಗಿದೆ ಎಂದು ಅವರು ಹೇಳಿದರು.
2014 ರಲ್ಲಿ ಈ ದಿನದಂದು ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ದೇಶದ ಎಲ್ಲಾ ಕುಟುಂಬಗಳ ಸಮಗ್ರ ಆರ್ಥಿಕ ಸೇರ್ಪಡೆಯನ್ನು ತರಲು ಸಮಗ್ರ ವಿಧಾನವನ್ನು ಒಳಗೊಂಡಿರುವ ಆರ್ಥಿಕ ಸೇರ್ಪಡೆಯ ರಾಷ್ಟ್ರೀಯ ಮಿಷನ್ ಆಗಿದೆ.
Today, we mark a momentous occasion— #10YearsOfJanDhan. Congratulations to all the beneficiaries and compliments to all those who worked to make this scheme a success. Jan Dhan Yojana has been paramount in boosting financial inclusion and giving dignity to crores of people,… pic.twitter.com/VgC7wMcZE8
— Narendra Modi (@narendramodi) August 28, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.