ನವದೆಹಲಿ: ಇಂದು ಮಹಿಳೆಯರ ಮದುವೆಯ ವಯಸ್ಸು ನಿಗದಿಪಡಿಸುವ ಬಗ್ಗೆ ಚರ್ಚೆ ನಡೆಸಿದರೆ ಕೆಲವರು ಜಾತ್ಯತೀತತೆ ಅಪಾಯದಲ್ಲಿದೆ ಮತ್ತು ಅದು ಧರ್ಮಕ್ಕೆ ವಿರುದ್ಧ ಎಂದು ಭಾವಿಸುತ್ತಾರೆ, ಆದರೆ ಅವರು ದೇಶದ ಹೆಣ್ಣುಮಕ್ಕಳ ಬಗ್ಗೆ ಆಳವಾಗಿ ಯೋಚಿಸಿದವರು ಮತ್ತು ಅವರ ಅಭಿವೃದ್ಧಿಗಾಗಿ ಶ್ರಮಿಸಿದವರು ಅಹಲ್ಯಾಬಾಯಿ ಹೋಳ್ಕರ್ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಹಲ್ಯಾಬಾಯಿ ಹೋಳ್ಕರ್ ಅವರ 300 ನೇ ಜನ್ಮ ದಿನಾಚರಣೆಯನ್ನು ಗುರುತಿಸಲು ಭೋಪಾಲ್ನಲ್ಲಿ ನಡೆದ ‘ಮಹಿಳಾ ಸಶಕ್ತಿಕರಣ್ ಮಹಾ ಸಮ್ಮೇಳನ’ ಕಾರ್ಯಕ್ರಮದಲ್ಲಿ ಭಾಗಿಯಾದ ಮೋದಿ, “ದೇವಿ ಅಹಲ್ಯಾಬಾಯಿ ಅನೇಕ ಮಹಾನ್ ಸಾಮಾಜಿಕ ಸುಧಾರಣೆಗಳಿಗಾಗಿ ನಿರಂತರ ಸ್ಮರಣೀಯರು. ಇಂದು, ನಾವು ಹೆಣ್ಣುಮಕ್ಕಳ ಮದುವೆಯ ವಯಸ್ಸಿನ ಬಗ್ಗೆ ಚರ್ಚಿಸಿದಾಗ, ಕೆಲವರು ಜಾತ್ಯತೀತತೆಯನ್ನು ಅಪಾಯದಲ್ಲಿದೆ ಎಂದು ನೋಡುತ್ತಾರೆ ಮತ್ತು ಅದು ನಮ್ಮ ಧರ್ಮಕ್ಕೆ ವಿರುದ್ಧವಾಗಿದೆ ಎನ್ನುತ್ತಾರೆ. ಆದರೆ ತಾಯಿಯ ಶಕ್ತಿಯ ನಿಜವಾದ ಸಂಕೇತವಾದ ದೇವಿ ಅಹಲ್ಯಾಬಾಯಿ ಆ ಕಾಲದಲ್ಲೇ ಹೆಣ್ಣುಮಕ್ಕಳ ಮದುವೆಗೆ ಸೂಕ್ತ ವಯಸ್ಸಿನ ಬಗ್ಗೆ ಆಳವಾಗಿ ಯೋಚಿಸಿದ್ದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗಿದ್ದರು, ಹೆಣ್ಣುಮಕ್ಕಳ ಬೆಳವಣಿಗೆಗೆ ಸರಿಯಾದ ಮಾರ್ಗ ಯಾವುದು ಎಂದು ಅವರಿಗೆ ನಿಖರವಾಗಿ ತಿಳಿದಿತ್ತು” ಎಂದಿದ್ದಾರೆ.
“ನೀವು ಇಂದು ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದರೆ, ಅಲ್ಲಿ ದೇವಿ ಅಹಲ್ಯಾಬಾಯಿಯ ಪ್ರತಿಮೆಯನ್ನು ನಾವು ಕಾಣಬಹುದು. ಬಡವರು ಮತ್ತು ದುರ್ಬಲರಿಗೆ ಆದ್ಯತೆ ನೀಡುವ ಅತ್ಯುತ್ತಮ ಆಡಳಿತ ಮಾದರಿಯನ್ನು ಅವರು ಅಳವಡಿಸಿಕೊಂಡರು. ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, ಅವರು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದರು. ಅವರು ಕೃಷಿ, ಅರಣ್ಯ ಆಧಾರಿತ ಗುಡಿ ಕೈಗಾರಿಕೆಗಳು ಮತ್ತು ಕರಕುಶಲ ವಸ್ತುಗಳನ್ನು ಪ್ರೋತ್ಸಾಹಿಸಿದರು. ಕೃಷಿಯನ್ನು ಉತ್ತೇಜಿಸಲು, ಅವರು ಸಣ್ಣ ಕಾಲುವೆಗಳ ಜಾಲವನ್ನು ಅಭಿವೃದ್ಧಿಪಡಿಸಿದರು, ಅದು ಮುನ್ನೂರು ವರ್ಷಗಳ ಹಿಂದೆ ” ಎಂದರು.
ಪ್ರಧಾನಿ ಮೋದಿ ಅವರು ಅಹಲ್ಯಾಬಾಯಿ ಹೋಳ್ಕರ್ ಅವರ 300 ನೇ ಜನ್ಮ ದಿನಾಚರಣೆಯನ್ನು ಗುರುತಿಸಲು ಸ್ಮರಣಾರ್ಥ ಅಂಚೆ ಚೀಟಿ ಮತ್ತು ರೂ 300 ನಾಣ್ಯವನ್ನು ಸಹ ಬಿಡುಗಡೆ ಮಾಡಿದರು.
Bhopal, Madhya Pradesh: Prime Minister Narendra Modi says, "Devi Ahilyabai will always be remembered for many great social reforms. Today, when we discuss the age of marriage for daughters, some people see secularism as being at risk and believe it goes against our religion. But… pic.twitter.com/5ce1R9ZCLK
— IANS (@ians_india) May 31, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.