ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕವನ್ನು ಜಯಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಇದು ಒಲಿಂಪಿಕ್ಸ್ನಲ್ಲಿ ಹಾಕಿಯಲ್ಲಿ ಭಾರತಕ್ಕೆ ಒಲಿಯುತ್ತಿರುವ ಸತತ ಎರಡನೇ ಕಂಡು. ಸ್ಪೇನ್ ತಂಡವನ್ನು ಮಣಿಸಿದ ಭಾರತ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.
ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ತಂಡ ಸ್ಪೇನ್ ವಿರುದ್ಧ 2-1 ಅಂತರದ ಗೆಲುವಿನ ಮೂಲಕ ಒಲಿಂಪಿಕ್ಸ್ನ ಕಂಚಿನ ಪದಕ ಉಳಿಸಿಕೊಂಡಿದೆ. ಇದು ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡ ಗೆಲ್ಲುತ್ತಿರುವ ಸತತ ಎರಡನೇ ಕಂಚು.
ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಪೋಸ್ಟ್ನಲ್ಲಿ ಹಾಕಿ ತಂಡಕ್ಕೆ ಅಭಿನಂದನಾ ಪೋಸ್ಟ್ ಹಾಕಿದ್ದು, “ಮುಂದಿನ ಪೀಳಿಗೆಯೂ ಪಾಲಿಸಬೇಕಾದ ಸಾಧನೆ! ಭಾರತ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಮಿಂಚಿದ್ದು, ಕಂಚಿನ ಪದಕವನ್ನು ಮನೆಗೆ ತಂದಿದೆ! ಇದು ಒಲಿಂಪಿಕ್ಸ್ನಲ್ಲಿ ಸತತ ಎರಡನೇ ಪದಕವಾಗಿರುವುದರಿಂದ ಇನ್ನಷ್ಟು ವಿಶೇಷವಾಗಿದೆ” ಎಂದಿದ್ದಾರೆ.
ಅಲ್ಲದೇ ಇದು ಆಟಗಾರರ ಯಶಸ್ಸು ಕೌಶಲ್ಯ, ಪರಿಶ್ರಮ ಮತ್ತು ತಂಡದ ಮನೋಭಾವದ ವಿಜಯವಾಗಿದೆ. ಅವರು ಅಗಾಧವಾದ ದೃಢತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ತೋರಿಸಿದರು. ಆಟಗಾರರಿಗೆ ಅಭಿನಂದನೆಗಳು ಎಂದಿದ್ದಾರೆ.
ಪ್ರತಿಯೊಬ್ಬ ಭಾರತೀಯನು ಹಾಕಿಯೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾನೆ ಮತ್ತು ಈ ಸಾಧನೆಯು ನಮ್ಮ ರಾಷ್ಟ್ರದ ಯುವಕರಲ್ಲಿ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತದೆ ಎಂದಿದ್ದಾರೆ.
A feat that will be cherished for generations to come!
The Indian Hockey team shines bright at the Olympics, bringing home the Bronze Medal! This is even more special because it is their second consecutive Medal at the Olympics.
Their success is a triumph of skill,…
— Narendra Modi (@narendramodi) August 8, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.