ರಾಯ್ಪುರ: ಪಿಎಂ ಶ್ರೀ ಯೋಜನೆಯಡಿ ಛತ್ತೀಸ್ಗಢದಲ್ಲಿ 52 ಹೊಸ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಯೋಜನೆಯ ಮೂರನೇ ಹಂತವಾಗಿ ಇವುಗಳ ಆಯ್ಕೆ ನಡೆದಿದೆ. ಈ ಸೇರ್ಪಡೆಯೊಂದಿಗೆ, ಛತ್ತೀಸ್ಗಢ ರಾಜ್ಯದಾದ್ಯಂತ ಒಟ್ಟು 263 ಶಾಲೆಗಳನ್ನು ಈಗ ಉಪಕ್ರಮಕ್ಕೆ ಸೇರಿಸಲಾಗಿದೆ.
1 ರಿಂದ 12 ನೇ ತರಗತಿ 47 ಮತ್ತು 6 ರಿಂದ 12 ನೇ ತರಗತಿ 5 ಶಾಲೆಗಳನ್ನು ಸ್ಮಾರ್ಟ್ ಶಾಲೆಗಳಾಗಿ ರೂಪಾಂತರಗೊಳಿಸಲು ಸಮಗ್ರ ಅಭಿವೃದ್ಧಿಗೆ ಒಳಡಪಸಿಲಾಗುತ್ತದೆ. ಕಲಿಕೆಯ ವಾತಾವರಣವನ್ನು ಹೆಚ್ಚಿಸಲು ಸ್ಮಾರ್ಟ್ ತರಗತಿಗಳು, ಸುಧಾರಿತ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯಗಳು, ಕ್ರೀಡಾ ಮೂಲಸೌಕರ್ಯ ಮತ್ತು ಡಿಜಿಟಲ್ ಗ್ರಂಥಾಲಯಗಳಂತಹ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತದೆ.
ಫೆಬ್ರವರಿ 19, 2024 ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಾರಂಭಿಸಿದ ಪ್ರಧಾನಮಂತ್ರಿ ಶ್ರೀ ಯೋಜನೆಯು ಈಗಾಗಲೇ ಮೊದಲ ಹಂತದಲ್ಲಿ ಛತ್ತೀಸ್ಗಢದ 211 ಶಾಲೆಗಳಿಗೆ ಪ್ರಯೋಜನವನ್ನು ನೀಡಿದೆ. ಆಯ್ಕೆಯಾದ ಪ್ರತಿ ಶಾಲೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರದಿಂದ 2-2 ಕೋಟಿ ರೂ ಪಡೆದಿದೆ.
ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ, ಈ ಪಿಎಂ ಶ್ರೀ ಶಾಲೆಗಳು ಕಲಿಕಾ ಫಲಿತಾಂಶಗಳಿಗೆ ಆದ್ಯತೆ ನೀಡುತ್ತವೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ 75% ಮತ್ತು ರಾಜ್ಯದ ಮಾನದಂಡಗಳಿಗೆ 25% ಬದ್ಧವಾಗಿರುತ್ತವೆ. ಶಾಲೆಯಲ್ಲಿ ಡಿಜಿಟಲ್ ತರಗತಿಗಳನ್ನು ಸಂಯೋಜಿಸಲಾಗುತ್ತದೆ ವೃತ್ತಿಪರ ಶಿಕ್ಷಣವನ್ನು ಉತ್ತೇಜಿಸಲಾಗುತ್ತದೆ ಮತ್ತು ಇಂಟರ್ನ್ಶಿಪ್ ಮತ್ತು ಉದ್ಯಮಶೀಲತೆಯ ಅವಕಾಶಗಳಿಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.