ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸೋಮವಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಸ್ಪರ ವಶದಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ. ಭಾರತವು ತನ್ನ ವಶದಲ್ಲಿರುವ 366 ಪಾಕಿಸ್ಥಾನಿ ನಾಗರಿಕ ಕೈದಿಗಳು ಮತ್ತು 86 ಮೀನುಗಾರರ ಹೆಸರುಗಳನ್ನು ಹಂಚಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನವು ತನ್ನ ವಶದಲ್ಲಿರುವ 43 ಭಾರತೀಯ ನಾಗರಿಕ ಕೈದಿಗಳು ಮತ್ತು 211 ಮೀನುಗಾರರ ಹೆಸರನ್ನು ಹಂಚಿಕೊಂಡಿದೆ. ಪ್ರತಿ ವರ್ಷ ಜನವರಿ 1 ರಂದು ಮತ್ತು ಜುಲೈ 1 ರಂದು ಕಾನ್ಸುಲರ್ ಪ್ರವೇಶ 2008 ರ ದ್ವಿಪಕ್ಷೀಯ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ ಪರಸ್ಪರರ ದೇಶದಲ್ಲಿ ಇರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.
ಶಿಕ್ಷೆಯನ್ನು ಪೂರ್ಣಗೊಳಿಸಿದ 185 ಭಾರತೀಯ ಮೀನುಗಾರರು ಮತ್ತು ನಾಗರಿಕ ಕೈದಿಗಳ ಬಿಡುಗಡೆ ಮತ್ತು ವಾಪಸಾತಿಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನಕ್ಕೆ ಭಾರತ ಮನವಿ ಮಾಡಿದೆ. ಅಲ್ಲದೇ ಅದರ ವಶದಲ್ಲಿರುವ 47 ನಾಗರಿಕ ಕೈದಿಗಳು ಮತ್ತು ಮೀನುಗಾರರಿಗೆ ತಕ್ಷಣವೇ ಕಾನ್ಸುಲರ್ ಪ್ರವೇಶವನ್ನು ಒದಗಿಸುವಂತೆ ಕೇಳಲಾಗಿದೆ.
ಪರಸ್ಪರರ ದೇಶದಲ್ಲಿರುವ ಕೈದಿಗಳು ಮತ್ತು ಮೀನುಗಾರರಿಗೆ ಸಂಬಂಧಿಸಿದ ಎಲ್ಲಾ ಮಾನವೀಯ ವಿಷಯಗಳನ್ನು ಪರಿಹರಿಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಭಾರತದ ವಶದಲ್ಲಿರುವ 75 ಪಾಕಿಸ್ತಾನಿ ನಾಗರಿಕ ಕೈದಿಗಳು ಮತ್ತು ಮೀನುಗಾರರ ರಾಷ್ಟ್ರೀಯತೆ ಪರಿಶೀಲನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಭಾರತವು ಪಾಕಿಸ್ತಾನವನ್ನು ಒತ್ತಾಯಿಸಿದೆ. ಪಾಕಿಸ್ತಾನವು ಈ ಕೈದಿಗಳ ರಾಷ್ಟ್ರೀಯತೆ ದೃಢೀಕರಣವನ್ನು ನೀಡದ ಕಾರಣ ಪಾಕಿಸ್ತಾನಕ್ಕೆ ಅವರ ಮರಳುವಿಕೆ ವಿಳಂಬಗೊಂಡಿದೆ ಎಂದು ಹೇಳಲಾಗಿದೆ.
ಸರ್ಕಾರದ ನಿರಂತರ ಪ್ರಯತ್ನಗಳ ಪರಿಣಾಮವಾಗಿ, 2014 ರಿಂದ 2639 ಭಾರತೀಯ ಮೀನುಗಾರರು ಮತ್ತು 71 ಭಾರತೀಯ ನಾಗರಿಕ ಕೈದಿಗಳನ್ನು ಪಾಕಿಸ್ತಾನದಿಂದ ವಾಪಸ್ ಬರುವಂತೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.