ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಅವರನ್ನು ರಾಜ್ಯಸಭೆಯ ಸಭಾನಾಯಕನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಪಿಯೂಶ್ ಗೋಯಲ್ ಈ ಜವಾಬ್ದಾರಿಯನ್ನು ನಿಭಾಯಿಸಿದ್ದರು.
ಲೋಕಸಭೆ ಚುನಾವಣೆ ಫಲಿತಾಂಶಗಳು ಹೊರಬಂದಾಗಿನಿಂದ 63 ವರ್ಷದ ನಡ್ಡಾ ಅವರನ್ನು ಸಭಾನಾಯಕರನ್ನಾಗಿ ನೇಮಿಸುವ ನಿರ್ಧಾರವನ್ನು ನಿರೀಕ್ಷಿಸಲಾಗಿತ್ತು. ಗೋಯಲ್ ಅವರು ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ಬಳಿಕ ಮೇಲ್ಮನೆಯ ಸದಸ್ಯತ್ವವನ್ನು ಜೂನ್ 10 ರಂದು ತ್ಯಜಿಸಿದರು. ಸದನದಲ್ಲಿರುವ ಬಿಜೆಪಿ ಸದಸ್ಯರಲ್ಲಿ ಈಗ ನಡ್ಡಾ ಅವರ ಅನುಭವ ಮತ್ತು ಹಿರಿತನ ಹೆಚ್ಚಾಗಿರುವುದರಿಂದ ಅವರನ್ನೇ ನೇಮಿಸಲಾಗಿದೆ.
ನಡ್ಡಾ ಅವರು ಮೂರನೇ ಅವಧಿಗೆ ರಾಜ್ಯಸಭೆಯಲ್ಲಿದ್ದಾರೆ. ಅವರು ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶದಿಂದ ಏಪ್ರಿಲ್ 3, 2012 ರಂದು ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಿದರು ಮತ್ತು 2018 ರಲ್ಲಿ ಮತ್ತೆ ಹಿಮಾಚಲದಿಂದ ಎರಡನೇ ಅವಧಿಗೆ ರಾಜ್ಯಸಭೆಗೆ ಬಂದರು. ಅವರ ಪ್ರಸ್ತುತ ಅವಧಿಯು ಏಪ್ರಿಲ್, 2024 ರಿಂದ ಆರಂಭಗೊಂಡಿತು, ಅವರು ಗುಜರಾತ್ನಿಂದ ಚುನಾಯಿತರಾಗಿ ರಾಜ್ಯಸಭೆಗೆ ಆಗಮಿಸಿದ್ದಾರೆ.
ನಡ್ಡಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ. ಅಲ್ಲದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರಾಗಿ ಜವಾಬ್ದಾರಿ ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.