ನವದೆಹಲಿ: ಉಕ್ರೇನ್ನ ಮೇಲೆ ರಷ್ಯಾ ಯುದ್ಧ ಪ್ರಾರಂಭವಾದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ರಷ್ಯಾಕ್ಕೆ ಭೇಟಿ ನೀಡುತತಿದ್ದಾರೆ. ಮುಂದಿನ ಜುಲೈ 8-9ರಂದು ಅವರು ರಷ್ಯಾ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ಖಚಿತ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಈ ಪ್ರವಾಸವು ಮೂರನೇ ಅವಧಿಗೆ ಅಧಿಕಾರಕ್ಕೆ ಹಿಂದಿರುಗಿದ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲೂ ಮಹತ್ವದ್ದಾಗಿದೆ.
ರಷ್ಯಾ ವಿದೇಶಾಂಗ ನೀತಿ ಸಹಾಯಕ ಯೂರಿ ಉಶಕೋವ್ ಅವರು ಮಂಗಳವಾರ ಮೋದಿ ಅವರ ರಷ್ಯಾ ಪ್ರವಾಸವನ್ನು ಖಚಿತಪಡಿಸಿದ್ದು, ಭೇಟಿಯ ನಿಖರವಾದ ದಿನಾಂಕಗಳನ್ನು ನಂತರ ಖಚಿತಪಡಿಸಲಾಗುವುದು ಎಂದು ಹೇಳಿದರು. ಭಾರತೀಯ ನಾಯಕ ಜುಲೈ ಆರಂಭದಲ್ಲಿ ದೇಶದಲ್ಲಿ ಎರಡು ದಿನಗಳನ್ನು ಕಳೆಯಲಿದ್ದಾರೆ ಎಂದು ಟಾಸ್ ಸುದ್ದಿ ಸೇವೆ ಈ ಹಿಂದೆ ವರದಿ ಮಾಡಿದೆ.
ಮೋದಿಯವರ ಮಾಸ್ಕೋ ಪ್ರವಾಸವು ಒಂದು ಸಣ್ಣ, ಅಧಿಕೃತ ಭೇಟಿಯಾಗಿದೆ ಎಂದು ಭಾರತೀಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು, ಚರ್ಚೆಗಳು ಖಾಸಗಿಯಾಗಿರುವುದರಿಂದ ಹೆಚ್ಚಿನ ಮಾಹಿತಿ ಇಲ್ಲ ಎಂದಿದ್ದಾರೆ.
ಇದು 2015 ರ ನಂತರ ರಷ್ಯಾದ ರಾಜಧಾನಿಗೆ ಮೋದಿಯ ಮೊದಲ ಪ್ರವಾಸವಾಗಿದೆ. ಮೋದಿ ಅವರು 2019 ರಲ್ಲಿ ವ್ಲಾಡಿವೋಸ್ಟಾಕ್ಗೆ ಭೇಟಿ ನೀಡಿದರು ಮತ್ತು ಎರಡು ವರ್ಷಗಳ ಹಿಂದೆ ಉಜ್ಬೇಕಿಸ್ತಾನ್ನ ಸಮರ್ಕಂಡ್ನಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಬದಿಯಲ್ಲಿ ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.