ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಲೋಕಸಭೆಯಲ್ಲಿ ‘ಜೈ ಪ್ಯಾಲೆಸ್ತೀನ್’ ಘೋಷಣೆಯನ್ನು ಕೂಗಿದ ಘಟನೆ ಭಾರೀ ವಿವಾದವನ್ನು ಸೃಷ್ಟಿಸಿದೆ. ಲೋಕಸಭೆಯಿಂದ ಅವರನ್ನು ಅನರ್ಹಗೊಳಿಸುವ ಬೇಡಿಕೆಗಳೂ ಹೆಚ್ಚಾಗುತ್ತಿದೆ.
ಭಾರತದ ಸಂವಿಧಾನದ 102 ಮತ್ತು 103 ನೇ ವಿಧಿಗಳನ್ನು ಉಲ್ಲೇಖಿಸಿ ಅಸಾದುದ್ದೀನ್ ಓವೈಸಿಯನ್ನು ಅನರ್ಹಗೊಳಿಸುವಂತೆ ಕೋರಿ ವಕೀಲ ಹರಿಶಂಕರ್ ಜೈನ್ ರಾಷ್ಟ್ರಪತಿ ಮುರ್ಮು ಅವರಿಗೆ ದೂರು ಸಲ್ಲಿಸಿದ್ದಾರೆ.
ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಹರಿಶಂಕರ್, “ಶ್ರೀ ಅಸಾದುದ್ದೀನ್ ಓವೈಸಿ ಅವರು ಎತ್ತಿದ ಘೋಷಣೆಯು ರಾಷ್ಟ್ರದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಬೆದರಿಕೆಯಾಗಿದೆ. ಇದು ಅತ್ಯಂತ ಗಂಭೀರ ಮತ್ತು ನಿರ್ಣಾಯಕ ವಿಷಯವಾಗಿದ್ದು, ತಕ್ಷಣದ ಗಮನ ಮತ್ತು ಸರಿಯಾದ ಕ್ರಮದ ಅಗತ್ಯವಿದೆ” ಎಂದಿದ್ದಾರೆ.
“ಒಬ್ಬ ವ್ಯಕ್ತಿಯು ಭಾರತಕ್ಕಿಂತ ಬೇರೆ ದೇಶಕ್ಕೆ ಸಮರ್ಪಿತನಾಗಿದ್ದರೆ, ಅವರಿಗೆ ಯಾವುದೇ ಸಾಂವಿಧಾನಿಕ ಸ್ಥಾನವನ್ನು ಹೊಂದುವ ಹಕ್ಕಿಲ್ಲ” ಎಂದು ಹರಿಶಂಕರ್ ಜೈನ್ ಪ್ರತಿಪಾದಿಸಿದ್ದಾರೆ.
https://x.com/ANI/status/1805889177109827828?ref_src=twsrc%5Etfw%7Ctwcamp%5Etweetembed%7Ctwterm%5E1805889177109827828%7Ctwgr%5Ec4e0615be4c1d5bad898330cde12214d83fccaa5%7Ctwcon%5Es1_&ref_url=https%3A%2F%2Fwww.freepressjournal.in%2Findia%2Fadvocate-hari-shankar-jain-writes-to-president-murmu-seeking-asaduddin-owaisis-lok-sabha-disqualification-over-jai-palestine-slogan
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.