ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವು ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಮತ್ತು RO-ARO ಪರೀಕ್ಷೆಯಲ್ಲಿ ಇತ್ತೀಚಿಗೆ ನಡೆದ ಪೇಪರ್ ಸೋರಿಕೆಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಉತ್ತರ ಪ್ರದೇಶ ಸಾರ್ವಜನಿಕ ಪರೀಕ್ಷೆಗಳ ಸುಗ್ರೀವಾಜ್ಞೆ 2024 ಅನ್ನು ಪರಿಚಯಿಸಲು ಸರ್ಕಾರ ಸಿದ್ಧವಾಗಿದೆ.
ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಮತ್ತು ರೂ 1 ಕೋಟಿ ವರೆಗೆ ದಂಡ ವಿಧಿಸುವ ನಿಬಂಧನೆಗಳನ್ನು ಒಳಗೊಂಡಿರುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಯುಪಿ ಪೊಲೀಸ್ನ 60,244 ಕಾನ್ಸ್ಟೆಬಲ್ಗಳ ಹುದ್ದೆಗಳ ಅತಿ ದೊಡ್ಡ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಫೆಬ್ರವರಿಯಲ್ಲಿ ಸೋರಿಕೆಯಾಗಿದ್ದವು. ನಂತರ, ಪರಿಶೀಲನಾ ಅಧಿಕಾರಿಗಳು ಮತ್ತು ಸಹಾಯಕ ಪರಿಶೀಲನಾ ಅಧಿಕಾರಿಗಳಿಗೆ (ROs/AROs) UPPSC ಪೂರ್ವಭಾವಿ ನೇಮಕಾತಿ ಪರೀಕ್ಷೆ ಸಹ ಮಾರ್ಚ್ನಲ್ಲಿ ಪೇಪರ್ ಸೋರಿಕೆಯ ವರದಿಗಳಿಂದಾಗಿ ರದ್ದುಗೊಂಡಿತು.
ಉತ್ತರ ಪ್ರದೇಶ ಸಾರ್ವಜನಿಕ ಪರೀಕ್ಷೆಗಳ ಸುಗ್ರೀವಾಜ್ಞೆ 2024 ಅಡಿ ನಕಲಿ ಪ್ರಶ್ನೆಪತ್ರಿಕೆಗಳನ್ನು ವಿತರಿಸುವುದು ಮತ್ತು ನಕಲಿ ಉದ್ಯೋಗ ವೆಬ್ಸೈಟ್ಗಳನ್ನು ರಚಿಸುವುದು ಮುಂತಾದ ಅಪರಾಧಗಳು ಶಿಕ್ಷಾರ್ಹವಾಗಿರುತ್ತವೆ. ಉಲ್ಲಂಘಿಸುವವರಿಗೆ ಎರಡು ವರ್ಷದಿಂದ ಜೀವಾವಧಿವರೆಗೆ ಜೈಲು ಶಿಕ್ಷೆ ಮತ್ತು ರೂ 1 ಕೋಟಿ ವರೆಗೆ ದಂಡ ವಿಧಿಸಬಹುದು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.