ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಅವರನ್ನು ಹೈ-ಪ್ರೊಫೈಲ್ ವಯನಾಡ್ ಕ್ಷೇತ್ರದಲ್ಲಿ ಎದುರಿಸಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ವಯನಾಡ್ 2009 ರಿಂದ ಪಕ್ಷದ ತೆಕ್ಕೆಲ್ಲಿದೆ. 2019 ರಲ್ಲಿ ಇಲ್ಲಿ ರಾಹುಲ್ ಗಾಂಧಿ ಗೆದ್ದರು. ತಮ್ಮ ಅಮೇಥಿ ಸ್ಥಾನವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಂದ ಕಳೆದುಕೊಂಡು ಬಳಿಕ ಅವರಿಗೆ ತಮ್ಮ ಲೋಕಸಭಾ ಸದಸ್ಯತ್ವವನ್ನು ಉಳಿಸಿಕೊಟ್ಟ ಕ್ಷೇತ್ರ ವಯನಾಡ್.
ಈ ಬಾರಿ ರಾಹುಲ್ ಅವರಿಗೆ ಸುರೇಂದ್ರನ್ ಅವರು ಎದುರಾಳಿಯಾಗಿ ನಿಂತಿರುವುದು ಮಹತ್ವ ಪಡೆದುಕೊಂಡಿದೆ. ವಯನಾಡ್ ಕ್ಷೇತ್ರವನ್ನು ಗೆಲ್ಲುವುದು ರಾಹುಲ್ ಅವರಿಗೆ ಅನಿವಾರ್ಯವಾದರೆ, ಬಿಜೆಪಿಯನ್ನು ಅಖಾಡದಲ್ಲಿ ಇರಿಸುವುದು ಸುರೇಂದ್ರನ್ ಅವರಿಗೆ ಮುಖ್ಯವಾಗಿದೆ. ಕೇರಳದ ರಾಜಕೀಯ ಭೂದೃಶ್ಯದಲ್ಲಿ ಕಾಂಗ್ರೆಸ್-ಎಡ ಪಕ್ಷಗಳು ಪರಸ್ಪರ ವಿರೋಧಿಗಳಾಗಿವೆ. ರಾಷ್ಟ್ರ ಮಟ್ಟದಲ್ಲಿ ಮೈತ್ರಿ ಇದ್ದರೂ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳೆರಡೂ ಪ್ರತಿಸ್ಪರ್ಧಿಗಳಾಗಿ ಉಳಿದಿವೆ.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ಸುರೇಂದ್ರನ್ ಪತ್ತನಂತಿಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬಳಿಕ ಮೂರನೇ ಸ್ಥಾನ ಪಡೆದರು. ಅವರು 2016 ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರಂನಿಂದ ಕೇವಲ 89 ಮತಗಳಿಂದ ಸೋತಿದ್ದರು. ಅವರು 2019 ರಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.
ಅವರು 2020 ರಲ್ಲಿ ಬಿಜೆಪಿ ಕೇರಳ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡರು ಮತ್ತು ವರ್ಷಗಳ ಹಿಂದೆ ಶಬರಿಮಲೆಗೆ ಯುವತಿಯರ ಪ್ರವೇಶದ ವಿರುದ್ಧದ ಪ್ರತಿಭಟನೆಯ ಪರಮುಖ ಮುಖವಾಗಿದ್ದರು.
ಕೋಝಿಕೋಡ್ನಿಂದ ಬಂದಿರುವ ಸುರೇಂದ್ರನ್, ಬಿಜೆಪಿಯ ಐದನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ, ಇದರಲ್ಲಿ ನಟಿ ಕಂಗನಾ ರನೌತ್ ಮತ್ತು ಕಲ್ಕತ್ತಾ ಹೈಕೋರ್ಟ್ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರ ಹೆಸರೂ ಇದೆ.
ಬಿಜೆಪಿಯು ಎರ್ನಾಕುಲಂನಿಂದ ಶ್ರೀ ಶಂಕರ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಕೆ ಎಸ್ ರಾಧಾಕೃಷ್ಣನ್ ಮತ್ತು ಕೊಲ್ಲಂನಿಂದ ನಟ-ರಾಜಕಾರಣಿ ಜಿ ಕೃಷ್ಣಕುಮಾರ್ ಅವರನ್ನು ಕಣಕ್ಕಿಳಿಸಿದೆ. ಪಾಲಕ್ಕಾಡ್ನ ಆಲತ್ತೂರ್ನಿಂದ ಮಾಜಿ ಶಿಕ್ಷಣತಜ್ಞ ಟಿಎನ್ ಸರಸು ಸ್ಪರ್ಧಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.