ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದ್ದು, ASI ವರದಿಯು ಮಸೀದಿಯಲ್ಲಿ ದೇಗುಲದ ಕುರುಹುಗಳು ಇರುವುದನ್ನು ಸ್ಪಷ್ಟಪಡಿಸಿದೆ.
“ಅಸ್ತಿತ್ವದಲ್ಲಿರುವ ರಚನೆಯ ನಿರ್ಮಾಣಕ್ಕೂ ಮೊದಲು ದೊಡ್ಡ ಹಿಂದೂ ದೇವಾಲಯವಿತ್ತು ಎಂದು ಎಎಸ್ಐ ಹೇಳಿದೆ. ಇದು ಎಎಸ್ಐನ ನಿರ್ಣಾಯಕ ತೀರ್ಮಾನವಾಗಿದೆ “ಎಂದು ಹಿಂದೂ ಒರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಕಟ್ಟಡದ ಸಮೀಕ್ಷೆ ನಡೆಸಿದ ವೇಳೆ ಆವರಣದಲ್ಲಿ ಪತ್ತೆಯಾದ ರಚನೆಯು ಚರ್ಚೆ ಹುಟ್ಟು ಹಾಕಿತ್ತು. ಹಿಂದೂ ಕಡೆಯವರು ಇದನ್ನು ಶಿವಲಿಂಗ ಎಂದು ಹೇಳಿದರೆ, ಮುಸ್ಲಿಂ ಕಡೆಯವರು ಇದನ್ನು ಕಾರಂಜಿ ಎಂದು ಕರೆದಿದ್ದಾರೆ. ಶಿವಲಿಂಗವನ್ನು ಪತ್ತೆ ಹಚ್ಚಿದ ನಂತರ ಸುಪ್ರೀಂಕೋರ್ಟ್ ಆದೇಶದಂತೆ 2022 ರಲ್ಲಿ ‘ವಾಝು’ ಪ್ರದೇಶವನ್ನು ಮುಚ್ಚಲಾಯಿತು.
ಜುಲೈ 2023 ರಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶದ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜ್ಞಾನವಾಪಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿತು. ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ASI ಪ್ರಯತ್ನಿಸಿತ್ತು.
ಈ ವರ್ಷದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಜ್ಞಾನವಾಪಿ ಮಸೀದಿಯ ಸಂಪೂರ್ಣ ‘ವಝುಖಾನಾ’ ಪ್ರದೇಶವನ್ನು ಸ್ವಚ್ಛಗೊಳಿಸಲು ನಿರ್ದೇಶನವನ್ನು ಕೋರಿ ಮಹಿಳಾ ಹಿಂದೂ ಅರ್ಜಿದಾರರ ಅರ್ಜಿಯನ್ನು ಅಂಗೀಕರಿಸಿತು.
“ಈಗಿನಂತೆ, ‘ವಾಝು’ ಪ್ರದೇಶವನ್ನು ಮುಚ್ಚಲಾಗಿದೆ. ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಇದರ ಕಸ್ಟಡಿ ಇದೀಗ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಇದೆ. ಎಎಸ್ಐ ಸಮೀಕ್ಷೆಯ ವರದಿ ಬಂದ ನಂತರ ನಾವು ಗೆಲುವಿನ ಹೊಸ್ತಿಲಲ್ಲಿದ್ದೇವೆ ಎಂದು ನಾನು ಹೇಳಬಲ್ಲೆ. ಜ್ಞಾನವಾಪಿ ಈ ಅಕ್ರಮ ಅತಿಕ್ರಮಣದಿಂದ ಮುಕ್ತವಾಗುವ ದಿನವನ್ನು ನಾವು ನೋಡಲು ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಜೈನ್ ಗುರುವಾರ ಎಎನ್ಐಗೆ ತಿಳಿಸಿದ್ದಾರೆ.
#WATCH | Varanasi, Uttar Pradesh | Advocate Vishnu Shankar Jain, representing the Hindu side, gives details on the Gyanvapi case.
He says, "The ASI has said that there existed a large Hindu Temple prior to the construction of the existing structure. This is the conclusive… pic.twitter.com/rwAV0Vi4wj
— ANI (@ANI) January 25, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.