ನವದೆಹಲಿ: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ), ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ನೊಂದಿಗೆ ಪ್ರಸ್ತುತ ನಡೆಯುತ್ತಿರುವ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಕ್ಯಾಶುಯಲ್ ಪೇಯ್ಡ್ ಲೇಬರ್ (ಸಿಪಿಎಲ್) ಗಳಿಗಾಗಿ ವಿಮಾ ಯೋಜನೆಯನ್ನು ಪ್ರಾರಂಭಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಅನುಮೋದನೆ ನೀಡಿದ್ದಾರೆ.
ರಕ್ಷಣಾ ಸಚಿವಾಲಯದ ಪ್ರಕಾರ ಈ ಯೋಜನೆಯು 10 ಲಕ್ಷ ರೂಪಾಯಿಗಳ ವಿಮಾ ಮೌಲ್ಯವನ್ನು ಒದಗಿಸುತ್ತದೆ, ಯೋಜನೆಯ ಸಮಯದಲ್ಲಿ ಕಾರ್ಮಿಕರು ಸಾವನ್ನಪ್ಪಿದರೆ ಅವರ ಸಂಬಂಧಿಕರಿಗೆ ವಿಮಾ ಮೊತ್ತವನ್ನು ನೀಡಲಾಗುತ್ತದೆ.
“ಅಪಾಯಕಾರಿ ಕೆಲಸದ ಸ್ಥಳಗಳು, ಪ್ರತಿಕೂಲ ಹವಾಮಾನ, ನಿರಾಶ್ರಯ ಭೂಪ್ರದೇಶ ಮತ್ತು ಔದ್ಯೋಗಿಕ ಆರೋಗ್ಯದ ಅಪಾಯಗಳಲ್ಲಿ ನಿಯೋಜಿತರಾದ ಕ್ಯಾಶುವಲ್ ಪೇಯ್ಡ್ ಲೇಬರ್ಗಳ ಜೀವಕ್ಕೆ ಉಂಟಾಗುವ ತೀವ್ರ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವರ ಕೆಲದ ಸಮಯದಲ್ಲಿ ವರದಿಯಾದ ಸಾವುಗಳನ್ನು ಪರಿಗಣಿಸಿ ವಿಮಾ ಯೋಜನೆಯನ್ನು ತರಲಾಗಿದೆ” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಮಾನವೀಯ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಒದಗಿಸುವುದು ಕ್ಯಾಶುವಲ್ ಪೇಯ್ಡ್ ಲೇಬರ್ಗಳಿಗೆ ಉತ್ತಮ ನೈತಿಕ ಉತ್ತೇಜನ ಎಂದು ಪರಿಗಣಿಸಲಾಗಿದೆ. ಈ ಯೋಜನೆಯು ರಾಷ್ಟ್ರದ ದೂರದ ಮತ್ತು ಕುಗ್ರಾಮ ಪ್ರದೇಶಗಳಲ್ಲಿ ಕೆಲಸ ಮಾಡುವ ಸಿಪಿಎಲ್ಗಳಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕ್ರಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಅವರ ಕುಟುಂಬಗಳ ಜೀವನೋಪಾಯವನ್ನು ಭದ್ರಪಡಿಸುವಲ್ಲಿ ಬಹಳ ದೂರ ಹೋಗುತ್ತದೆ ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.