ಪಾಟ್ನಾ: ಹಿಂದೂ ಹಬ್ಬಗಳ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ರಜೆಯ ಸಂಖ್ಯೆಯನ್ನು ಕಡಿತಗೊಳಿಸಿ ಮುಸ್ಲಿಂ ಹಬ್ಬಗಳಿಗೆ ರಜೆ ಹೆಚ್ಚಿಸಿದ ಆರೋಪದ ಮೇಲೆ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ನಿತೀಶ್ ಕುಮಾರ್ ಅವರನ್ನು ಓಲೈಕೆ ರಾಜಕೀಯದ ಮಾಸ್ಟರ್ ಎಂದು ಕರೆದಿರುವ ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೆ ಅವರು, ಮತ್ತೊಮ್ಮೆ ಜೆಡಿಯು-ಆರ್ಜೆಡಿ ಸರ್ಕಾರದ ಹಿಂದೂ ವಿರೋಧಿ ಮುಖ ಬಯಲಿಗೆ ಬಂದಿದೆ, ಬಿಹಾರ ಸರ್ಕಾರವು ಸನಾತನ ಧರ್ಮವನ್ನು ಮತ ಬ್ಯಾಂಕ್ಗಾಗಿ ದ್ವೇಷಿಸುತ್ತದೆ ಎಂದು ಆರೋಪಿಸಿದರು.
ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಮತ್ತೊಮ್ಮೆ, ಚಿಕ್ಕಪ್ಪ-ಸೋದರಳಿಯ ಸರ್ಕಾರದ ಹಿಂದೂ ವಿರೋಧಿ ಮುಖವು ಮುನ್ನೆಲೆಗೆ ಬಂದಿದೆ, ಒಂದು ಕಡೆ, ಮುಸ್ಲಿಂ ಹಬ್ಬಗಳಿಗೆ ಶಾಲೆಗಳಲ್ಲಿ ರಜೆಯನ್ನು ವಿಸ್ತರಿಸಲಾಗುತ್ತಿದೆ, ಆದರೆ ಹಿಂದೂ ಹಬ್ಬಗಳ ರಜಾದಿನಗಳನ್ನು ರದ್ದುಗೊಳಿಸಲಾಗುತ್ತಿದೆ. ವೋಟ್ ಬ್ಯಾಂಕ್ಗಾಗಿ ಸನಾತನ ಧರ್ಮವನ್ನು ದ್ವೇಷಿಸುವ ಸರಕಾರಕ್ಕೆ ನಾಚಿಕೆಯಾಗಬೇಕು” ಎಂದಿದ್ದಾರೆ.
ಬಿಜೆಪಿ ಸಂಸದ ಸುಶೀಲ್ ಮೋದಿ ಅವರು ಮಾತನಾಡಿ, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಹಿಂದೂ ವಿರೋಧಿ ಮುಖವನ್ನು ತೋರಿಸಿದೆ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ನಿರ್ಧಾರವನ್ನು ತೆಗೆದುಕೊಂಡಿದೆ. ಹಿಂದೂ ಹಬ್ಬಗಳಿಗೆ ರಜೆ ನೀಡಲಾಗಿದೆ. ಆದರೆ ಮುಸ್ಲಿಂ ಹಬ್ಬಗಳಿಗೆ ರಜಾದಿನಗಳನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ.
#WATCH | On CM Nitish Kumar-led Bihar government reportedly reducing the number of holidays for the state’s schools during Hindu festivals, Union Minister Ashwini Kumar Choubey says, "The leader of appeasement – Kursi Kumar of Bihar. Once again, the anti-Hindu face of the… pic.twitter.com/k9BFWEXfQN
— ANI (@ANI) November 28, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.