
ಲಕ್ನೋ: ಉತ್ತರ ಪ್ರದೇಶದ ಜೈಲಿನಲ್ಲಿರುವ ಖೈದಿಗಳು ಶೀಘ್ರದಲ್ಲೇ ಹನುಮಾನ್ ಚಾಲೀಸಾ, ಸುಂದರಕಾಂಡವನ್ನು ಪಠಿಸಲಿದ್ದಾರೆ ಮತ್ತು ವ್ಯಕ್ತಿತ್ವ ವಿಕಸನ ತಂತ್ರಗಳನ್ನು ಕಲಿಯಲಿದ್ದಾರೆ. ರಾಜ್ಯದ ಕಾರಾಗೃಹ ಸಚಿವ ಧರ್ಮವೀರ್ ಪ್ರಜಾಪತಿ ನೇತೃತ್ವದಲ್ಲಿ ಈ ಉಪಕ್ರಮವನ್ನು ಜಾರಿಗೆ ತರಲಾಗುತ್ತಿದೆ.
ಯಾವುದೇ ಧಾರ್ಮಿಕ ಪಕ್ಷಪಾತ, ಕಾರ್ಯಸೂಚಿ ಅಥವಾ ಒತ್ತಾಯಗಳಿಲ್ಲದೆ ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ವ್ಯಕ್ತಿತ್ವ ವಿಕಸನದ ಪಾಠಗಳನ್ನು ಮತ್ತು ಮಂತ್ರಗಳನ್ನು ಜನರಿಗೆ ತಿಳಿಸಲು “ಹನುಮಾನ್ ಚಾಲೀಸ” ಗಿಂತ ಉತ್ತಮವಾದದು ಯಾವುದೂ ಇಲ್ಲ ಎಂದು ಪ್ರಜಾಪತಿ ಹೇಳಿದ್ದಾರೆ.
ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸಲು ಎಲ್ಲಾ ಕೈದಿಗಳು ಅಮೂಲ್ಯವಾದ ಪಾಠಗಳನ್ನು ಕಲಿಯುವಂತೆ ಅವರು ಒತ್ತಾಯಿಸಿದರು. ಸಚಿವ ಪ್ರಜಾಪತಿ ಅವರು ಅಜಂಗಢ ಜೈಲಿನಲ್ಲಿ ಕೈದಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ, ಈ ಉಪಕ್ರಮವು ಕೈದಿಗಳ ವ್ಯಕ್ತಿತ್ವವನ್ನು ಹೆಚ್ಚಿಸುವುದರ ಮೇಲೆ ಮಾತ್ರ ಗಮನಹರಿಸುತ್ತದೆ. ಯೋಜನೆಯ ಭಾಗವಾಗಿ, ರಾಜ್ಯ ಸರ್ಕಾರವು ಹನುಮಾನ್ ಚಾಲೀಸಾವನ್ನು ಪಠಿಸಲು ಆಸಕ್ತಿ ತೋರುವ ಜೈಲು ಕೈದಿಗಳಿಗೆ ಧಾರ್ಮಿಕ ಗ್ರಂಥಗಳನ್ನು ವಿತರಿಸುತ್ತದೆ ಎಂದರು.
ಗಮನಾರ್ಹವಾಗಿ, ಇದೇ ರೀತಿಯ ಉಪಕ್ರಮಗಳನ್ನು ಮಥುರಾ ಮತ್ತು ಆಗ್ರಾ ಜೈಲುಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದೆ, ಹನುಮಾನ್ ಚಾಲೀಸಾದ ಸಾಮೂಹಿಕ ಪಠಣವು ಕೈದಿಗಳಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೆಳೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


