ನವದೆಹಲಿ: ನಮ್ಮ ಪಕ್ಷದೊಳಗೆ ರಾಮ ಮತ್ತು ಹಿಂದೂಗಳನ್ನು ದ್ವೇಷಿಸುವ ನಾಯಕರು ಇದ್ದಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ರಾಮನನ್ನು ದ್ವೇಷಿಸುವ ಕೆಲವು ನಾಯಕರು ಇದ್ದಾರೆ.ಈ ನಾಯಕರು ಹಿಂದೂ ಪದವನ್ನು ದ್ವೇಷಿಸುತ್ತಾರೆ. ಅವರು ಹಿಂದೂ ಧಾರ್ಮಿಕ ಗುರುಗಳನ್ನು ಅವಮಾನಿಸಲು ಬಯಸುತ್ತಾರೆ. ಅವರು ಪಕ್ಷದಲ್ಲಿ ಹಿಂದೂ ಧಾರ್ಮಿಕ ಗುರುಗಳು ಇರುವುದನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸನಾತನ ಧರ್ಮದ ವಿರುದ್ಧ ಮಾತನಾಡುವವರು ಭಾರತದ ವಿರುದ್ಧವೂ ಇರುತ್ತಾರೆ. ಏಕೆಂದರೆ ಈ ರಾಷ್ಟ್ರವನ್ನು ಸನಾತನಿಗಳು ಇಲ್ಲದೇ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.ಸನಾತನದ ವಿರುದ್ಧ ಮಾತನಾಡುವವರು ರಾವಣನ ವಂಶಸ್ಥರು ಮತ್ತು ಅವರ ವಿನಾಶ ಖಚಿತ ಎಂದರು.
ಸನಾತನ ಸಂಸ್ಥೆಯ ವಿರುದ್ಧ ಮಾತನಾಡುವ ರಾಜಕೀಯ ಪಕ್ಷದ ನಾಯಕರನ್ನು ಇಂಡಿ ಒಕ್ಕೂಟದಿಂದ ಹೊರಹಾಕಬೇಕು ಎಂದು ನಾನು ಮೈತ್ರಿಕೂಟದ ಎಲ್ಲಾ ಹಿರಿಯ ನಾಯಕರಲ್ಲಿ ಮನವಿ ಮಾಡಲು ಬಯಸುತ್ತೇನೆ.ಸನಾತನ ಧರ್ಮವನ್ನು ವಿರೋಧಿಸುವುದನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.