ಮುಂಬಯಿ: ಹಿಂದೂಗಳು ಸದಾ ಸಹಿಷ್ಣುಗಳು ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವವು ಹಿಂದೂಗಳಿಂದ ಅಸ್ತಿತ್ವದಲ್ಲಿದೆ ಎಂದು ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಅವರು ಒತ್ತಿ ಹೇಳಿದ್ದಾರೆ.
ಮುಂಬೈನಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಅಖ್ತರ್ ಈ ಹೇಳಿಕೆ ನೀಡಿದ್ದಾರೆ. “ಕೆಲವರು ಯಾವಾಗಲೂ ಅಸಹಿಷ್ಣುತೆ ಹೊಂದಿರುತ್ತಾರೆ. ಹಿಂದೂಗಳು ಹಾಗಲ್ಲ. ಅವರು ಉದಾರ ಮತ್ತು ವಿಶಾಲ ಹೃದಯದ ಶ್ರೇಷ್ಠ ಗುಣವನ್ನು ಹೊಂದಿದ್ದಾರೆ. ಅದನ್ನು ಕಳೆದುಕೊಳ್ಳಬೇಡಿ, ಇಲ್ಲದಿದ್ದರೆ ನೀವು ಇತರರಂತೆ ಆಗುತ್ತೀರಿ” ಎಂದು ಅಖ್ತರ್ ಹಿಂದೂಗಳಿಗೆ ಹೇಳಿದ್ದಾರೆ.
“ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಏಕೆಂದರೆ ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯದ ಕಾರಣದಿಂದಾಗಿ. ಮೂರ್ತಿ ಪೂಜೆ ಮಾಡಿದರೂ ಹಿಂದೂ, ಮಾಡದಿದ್ದರೂ ಹಿಂದೂವೇ ಆಗಿರುತ್ತೀರಿ” ಎಂದಿದ್ದಾರೆ.
ಸ್ವಯಂ ಘೋಷಿತ ನಾಸ್ತಿಕನಾದ ಅಖ್ತರ್, ರಾಮ ಮತ್ತು ಸೀತೆಯ ಭೂಮಿಯಲ್ಲಿ ಜನಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ವಿಶಾಲ ಮನಸ್ಸಿನ ದೃಷ್ಟಿಕೋನವನ್ನು ಕಾಪಾಡಿಕೊಳ್ಳಲು ಪ್ರೇಕ್ಷಕರನ್ನು ಪ್ರೋತ್ಸಾಹಿಸಿದ ಅವರು, “ರಾಮಾಯಣ ನಮ್ಮ ಸಾಂಸ್ಕೃತಿಕ ಪರಂಪರೆಯಾಗಿದೆ” ಎಂದು ಹೇಳಿದರು. ಸಮಾರಂಭದಲ್ಲಿ ‘ಜೈ ಸಿಯಾ ರಾಮ್’ ಎಂದು ಘೋಷಣೆ ಕೂಗಿದರು.
“ನಾನು ನಾಸ್ತಿಕನಾಗಿದ್ದರೂ ಮರ್ಯಾದಾ ಪುರುಷೋತ್ತಮ ರಾಮನನ್ನು ತುಂಬಾ ಗೌರವಿಸುತ್ತೇನೆ. ಶ್ರೀರಾಮ ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಭಾಗವಾಗಿದೆ. ರಾಮಾಯಣ ನಮ್ಮ ಸಂಸ್ಕೃತಿಯ ಪರಂಪರೆಯೂ ಆಗಿದೆ. ಅದಕ್ಕಾಗಿಯೇ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇನೆ. ನಾವು ಮಾತನಾಡುವಾಗಲೆಲ್ಲಾ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ಮತ್ತು ಸೀತೆ ಮಾತ್ರ ನೆನಪಿಗೆ ಬರುತ್ತಾರೆ” ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದರು.
BIG NEWS – Javed Akhtar says he is proud to have been born in the land of Bhagwan Ram and Sita.
He said Bhagwan Rama and Maa Sita are not only Hindu gods and goddesses but also the cultural heritage of entire India🔥🔥Akhtar also asked people to chant 'Jai Siya Ram' slogans &… pic.twitter.com/3rUPeYadit
— Times Algebra (@TimesAlgebraIND) November 10, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.