ಲಂಡನ್: ಡೌನಿಂಗ್ ಸ್ಟ್ರೀಟ್ನಲ್ಲಿ ನಿನ್ನೆ ದೀಪಾವಳಿ ಸಂಭ್ರಮಾಚರಣೆ ಜರುಗಿದ್ದು, ಹಿಂದೂ ಸಮುದಾಯದ ಅತಿಥಿಗಳನ್ನು ಯುಕೆ ಪ್ರಧಾನಿ ರಿಷಿ ಸುನಕ್ ಸ್ವಾಗತಿಸಿದರು.
“ಇಂದು ರಾತ್ರಿ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ದೀಪಾವಳಿಗೆ ಮುಂಚಿತವಾಗಿ ಡೌನಿಂಗ್ ಸ್ಟ್ರೀಟ್ಗೆ ಹಿಂದೂ ಸಮುದಾಯದ ಅತಿಥಿಗಳನ್ನು ಸ್ವಾಗತಿಸಿದರು. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯೋತ್ಸವದ ಆಚರಣೆಯಾಗಿದೆ” ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ಟ್ವಿಟ್ ಮಾಡಿದೆ.
ಡೌನಿಂಗ್ ಸ್ಟ್ರೀಟ್ ಹಂಚಿಕೊಂಡ ದೃಶ್ಯಗಳಲ್ಲಿ ಯುಕೆ ಪಿಎಂ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ದೀಪಗಳನ್ನು ಬೆಳಗಿಸುತ್ತಿರುವುದನ್ನು ಕಾಣಬಹುದು.
“ಯುಕೆ ಮತ್ತು ಪ್ರಪಂಚದಾದ್ಯಂತ ಎಲ್ಲರಿಗೂ ಶುಭ ದೀಪಾವಳಿ” ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿಯ ಪೋಸ್ಟ್ ಹೇಳಿದೆ.
ದೀಪಾವಳಿಯು ದೀಪಗಳ ಹಬ್ಬವಾಗಿದೆ, ಇದು ಕತ್ತಲೆಯ ಮೇಲೆ ಬೆಳಕಿನ ಆಧ್ಯಾತ್ಮಿಕ ವಿಜಯವನ್ನು ಸಂಕೇತಿಸುತ್ತದೆ, ಕೆಟ್ಟದ್ದರ ಮೇಲೆ ಒಳ್ಳೆಯದುರ ವಿಜವನ್ನು ಸಂಕೇತಿಸುತ್ತದೆ. ಈ ವರ್ಷ ದೀಪಾವಳಿಯನ್ನು ನವೆಂಬರ್ 11ರಿಂದ ಆಚರಿಸಲಾಗುತ್ತದೆ.
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಯುಕೆ ಸಹವರ್ತಿ ರಿಷಿ ಸುನಕ್ ಅವರು ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿಯನ್ನು ಚರ್ಚಿಸಿದ್ದರು ಮತ್ತು ಕ್ರಿಕೆಟ್ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಪ್ರಬಲ ಪ್ರದರ್ಶನಕ್ಕಾಗಿ ಸುನಕ್ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದರು.
Tonight Prime Minister @RishiSunak welcomed guests from the Hindu community to Downing Street ahead of #Diwali – a celebration of the triumph of light over darkness.
Shubh Diwali to everyone across the UK and around the world celebrating from this weekend! pic.twitter.com/JqSjX8f85F
— UK Prime Minister (@10DowningStreet) November 8, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.