ನವದೆಹಲಿ: ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡುವ ಮೂಲಕ ದೇಶಿ ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರವು ಸಾಕಷ್ಟು ಪ್ರಯತ್ನಗಳನ್ನ ನಡೆಸುತ್ತಾ ಬಂದಿದೆ. ಅದರಲ್ಲಿ ವೋಕಲ್ ಫಾರ್ ಲೋಕಲ್ ಕರೆಯೂ ಒಂದು. ಪ್ರಧಾನಿ ಮೋದಿ ಪದೇ ಪದೇ ಜನರಿಗೆ ಸ್ಥಳೀಯ ವಸ್ತುಗಳಿಗೆ ಧ್ವನಿಯಾಗುವ ಕರೆಯನ್ನು ನೀಡುತ್ತಲೇ ಬಂದಿದ್ದಾರೆ.
ಇದೀಗ ಮೋದಿ ಎಕ್ಸ್ನಲ್ಲೂ ವೋಕಲ್ ಫಾರ್ ಲೋಕಲ್ಗೆ ಕರೆ ನೀಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ ಮತ್ತು ದೇಶಾದ್ಯಂತ ವೋಕಲ್ ಫಾರ್ ಲೋಕಲ್ ಆಂದೋಲನಕ್ಕೆ ಚಾಲನೆ ದೊರೆಯುತ್ತಿದೆ ಎಂದಿದ್ದಾರೆ.
‘ಅನುಪಮʼ ಧಾರವಾಹಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಪ್ರಚಾರ ಮಾಡುವ ವೀಡಿಯೊವನ್ನು ಹಂಚಿಕೊಂಡಿರುವ ಮೋದಿ, ನಮೋ ಆಪ್ನಲ್ಲಿ ಸ್ವದೇಶಿ ಉತ್ಪನ್ನಗಳೊಂದಿಗೆ ಸೆಲ್ಫಿಗಳನ್ನು ಹಂಚಿಕೊಳ್ಳಲು ಮತ್ತು ಯುಪಿಐ ಮೂಲಕ ಪಾವತಿಗಳನ್ನು ಮಾಡಲು ನಾಗರಿಕರನ್ನು ಒತ್ತಾಯಿಸಿದ್ದಾರೆ.
ಹಬ್ಬಗಳ ಋತು ಆಗಮಿಸುತ್ತಿರುವ ಹಿನ್ನಲೆಯೆಲ್ಲಿ ಸ್ಥಳೀಯ ಕಲಾವಿದರು, ಕುಂಬಾರರು, ನೇಕಾರರು ತಯಾರಿಸಿದ ವಸ್ತಗಳನ್ನೇ ಖರೀದಿ ಮಾಡಿ ಎಂದು ಮೋದಿ ಹಲವು ಬಾರಿ ಮನವಿಗಳನ್ನು ಮಾಡಿದ್ದಾರೆ.
The #VocalForLocal movement is getting great momentum across the country. pic.twitter.com/9lcoGbAvoi
— Narendra Modi (@narendramodi) November 6, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.