ಭೋಪಾಲ್: ಮಧ್ಯಪ್ರದೇಶದಲ್ಲಿ, ನರ್ಮದಾ ನದಿಯ ದಡದಲ್ಲಿರುವ ನೇಮಾವರ್ನಲ್ಲಿ ಅಲೆಮಾರಿ ಮದರಿ ಸಮಾಜಕ್ಕೆ ಸೇರಿದ 35 ಮುಸ್ಲಿಂ ಕುಟುಂಬಗಳ ಸುಮಾರು 190 ಜನರು ಹಿಂದೂ ಧರ್ಮಕ್ಕೆ ಮರಳಿದ್ದಾರೆ.
ಸೋಮವಾರ ಬೆಳಗ್ಗೆ ನೇಮಾವರದ ರಾಮಸವ್ ದಾಸ್ ಶಾಸ್ತ್ರಿ ಮತ್ತು ಸಲಾನ, ರತ್ಲಂನಿಂದ ಆನಂದಗಿರಿ ಮಹಾರಾಜ್ ನೇತೃತ್ವದಲ್ಲಿ ಇಬರು ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಮೂಲತಃ ರತ್ಲಾಮ್ ಜಿಲ್ಲೆಯ ಅಂಬಾ ಗ್ರಾಮದವರಾದ ಈ ಜನರು ಸುಮಾರು ನಾಲ್ಕು ವರ್ಷಗಳ ಹಿಂದೆ ಸಂತ ಆನಂದಗಿರಿ ಮಹಾರಾಜರೊಂದಿಗೆ ಸಂಪರ್ಕಕ್ಕೆ ಬಂದ ನಂತರ ಹಿಂದೂ ಧರ್ಮಕ್ಕೆ ಮರಳುವ ಪ್ರಕ್ರಿಯೆಯು ಪ್ರಾರಂಭವಾಯಿತು.
ಆಗಸ್ಟ್ 1ರಂದು ಸುಮಾರು 55 ಪುರುಷರು, 50 ಮಹಿಳೆಯರು ಮತ್ತು ಮಕ್ಕಳು ಎಲ್ಲರೂ ಹಿಂದೂ ಧರ್ಮವನ್ನು ಔಪಚಾರಿಕವಾಗಿ ಸ್ವೀಕರಿಸಲು ಕ್ಷೌರ, ನರ್ಮದಾ ಸ್ನಾನ, ಹವನ ಮತ್ತು ಯಜ್ಞೋಪವೀತದಂತಹ ವಿವಿಧ ಪವಿತ್ರ ಆಚರಣೆಗಳನ್ನು ಮಾಡಿದರು. ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಕೊನೆಯ ತುದಿಯಲ್ಲಿರುವ ನೇಮಾವರ್ನಲ್ಲಿರುವ ಸಂತ ಸಮಾಜದಲ್ಲಿ ಆಚರಣೆಗಳನ್ನು ನಡೆಸಲಾಯಿತು. ನಾಲ್ಕು ತಲೆಮಾರು ಹಿಂದಿನ ಇವರು ಪೂರ್ವಜರು ಇಸ್ಲಾಂಗೆ ಮತಾಂತರಗೊಂಡಿದ್ದರು ಎಂದು ತಿಳಿದುಬಂದಿದೆ.
Madhya Pradesh News – 35 Muslim families in Dewas converted to Hinduism. pic.twitter.com/zatWsVvkWd
— News Arena India (@NewsArenaIndia) August 2, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.