ನವದೆಹಲಿ: ಮಣಿಪುರ ಹಿಂಸಾಚಾರದ ಚರ್ಚೆಯಿಂದ ಪ್ರತಿಪಕ್ಷಗಳು ಓಡಿಹೋಗುತ್ತಿವೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಆರೋಪಿಸಿದ್ದಾರೆ, ವಿಪಕ್ಷಗಳು ಈಶಾನ್ಯ ರಾಜ್ಯದ ಸತ್ಯವನ್ನು ಹೊರಬರಲು ಬಿಡುತ್ತಿಲ್ಲ. ಮಣಿಪುರದ ವಿಚಾರವಾಗಿ ಚರ್ಚೆಗೆ ಸರ್ಕಾರ ಸಿದ್ಧವಿದೆ. ಆದರೆ ವಿಪಕ್ಷಗಳು ಸಂಸದೀಯ ಕಾರ್ಯವೈಖರಿಯನ್ನು ಅಪಹಾಸ್ಯ ಮಾಡಲು ಯತ್ನಿಸುತ್ತಿದ್ದಾರೆ ಎಂದರು.
ಸದಸ್ಯರಿಗೆ ನೀಡಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರತಿಪಕ್ಷಗಳು ಸದನದ 9 ಪ್ರಮುಖ ದಿನಗಳನ್ನು ವ್ಯರ್ಥ ಮಾಡಿವೆ. ಮೊದಲ ದಿನವೇ ಈ ಚರ್ಚೆ ನಡೆಯಬಹುದಿತ್ತು ಎಂದು ಗೋಯಲ್ ಹೇಳಿದ್ದಾರೆ. ಮಣಿಪುರದ ಬಗ್ಗೆ ಪ್ರತಿಪಕ್ಷಗಳ ವರ್ತನೆ ತುಂಬಾ ಕಳವಳಕಾರಿಯಾಗಿದೆ ಎಂದರು.
ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಸರ್ಕಾರ ಒಪ್ಪಿದೆ, ನಾವು ಇಂದು ಕೂಡ ಚರ್ಚೆಗೆ ಒಪ್ಪಿದ್ದೇವೆ, ಮತ್ತು ನಾಳೆ ಅಥವಾ ನಾಳಿದ್ದು ಕೂಡ ಚರ್ಚೆ ನಡೆಸಲು ಒಪ್ಪುತ್ತೇವೆ. ಆದರೆ ಮಣಿಪುರದ ಬಗ್ಗೆ ಚರ್ಚೆ ನಡೆಸಲು ವಿರೋಧಪಕ್ಷಗಳು ಹೆದರುತ್ತಿವೆ. ಅವರು ಚರ್ಚೆಯಿಂದ ಓಡಿಹೋಗುತ್ತಿದ್ದಾರೆ ಎಂದು ಗೋಯಲ್ ಸದನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ರಾಷ್ಟ್ರಪತಿಗಳ ಮುಂದೆ ಅವಿಶ್ವಾಸ ನಿರ್ಣಯ ಬಾಕಿ ಇರುವಾಗ ಸರ್ಕಾರ ಮಸೂದೆಗಳನ್ನು ಮಂಡಿಸುವುದಕ್ಕೆ ಪ್ರತಿಪಕ್ಷಗಳ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಅಂತಹ ಯಾವುದೇ ನಿಯಮ ಅಥವಾ ಪೂರ್ವನಿದರ್ಶನವಿಲ್ಲ. ಸದನದಲ್ಲಿ ನಮಗೆ ಮೂರನೇ ಎರಡರಷ್ಟು ಬಹುಮತವಿದೆ ಎಂಬುದು ಎಲ್ಲರಿಗೂ ಗೊತ್ತು, ಈಗ ಅದನ್ನು ಯಾವಾಗ ಕೈಗೆತ್ತಿಕೊಳ್ಳಬೇಕು ಎಂಬುದನ್ನು ಸಭಾಧ್ಯಕ್ಷರೇ ನಿರ್ಧರಿಸಬೇಕು. ಅವಿಶ್ವಾಸ ನಿರ್ಣಯದ ಮಧ್ಯೆ ಸದನದಲ್ಲಿ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ ಎಂಬುದಕ್ಕೆ ಯಾವುದೇ ನಿದರ್ಶನವಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.