ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ತೆರಿಗೆ ದರ ಏರಿಕೆ ಇಲ್ಲದೆ ತೆರಿಗೆ ಆದಾಯ ಹೆಚ್ಚಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಜುಲೈ 24ರಂದು ನವದೆಹಲಿಯಲ್ಲಿ 164 ನೇ ಆದಾಯ ತೆರಿಗೆ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮನ್, ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿನ ದಕ್ಷತೆಯು ದೃಢವಾದ ತೆರಿಗೆ ಮಾಪ್ ಅಪ್ಗೆ ನೆರವಾಯಿತು ಎಂದರು.
ಹೆಚ್ಚಿನ ಸಮಸ್ಯೆಗಳಿಗೆ ತಂತ್ರಜ್ಞಾನವೇ ಉತ್ತರ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ ಮತ್ತು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು. ಸಿಬಿಡಿಟಿಯನ್ನು ಶ್ಲಾಘಿಸಿದ ಅವರು, ವಂಚನೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು. ತಂತ್ರಜ್ಞಾನದಿಂದಾಗಿ ಆದಾಯ ತೆರಿಗೆ ಮೌಲ್ಯಮಾಪನದಲ್ಲಿ ವಿಭಿನ್ನ ಧನಾತ್ಮಕ ಬದಲಾವಣೆಗಳು ಬಂದಿವೆ. ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವ ತೆರಿಗೆದಾರರು, ಅವರ ವಾರ್ಷಿಕ ಆದಾಯ 7 ಲಕ್ಷ 27 ಸಾವಿರದವರೆಗೆ ಇದ್ದರೆ, ಅವರು ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದಿದ್ದಾರೆ.
ತೆರಿಗೆದಾರರಿಗೆ ಪಾರದರ್ಶಕ, ವಸ್ತುನಿಷ್ಠ ಮತ್ತು ಸ್ನೇಹಪರ ಆದಾಯ ತೆರಿಗೆ ಆಡಳಿತದ ಭರವಸೆ ನೀಡಿದ ಸಚಿವೆ, ಈ ವರ್ಷ ತೆರಿಗೆದಾರರಿಗೆ ನೀಡಲಾದ ಸುಮಾರು ಒಂದು ಲಕ್ಷ ನೋಟಿಸ್ಗಳ ಮೌಲ್ಯಮಾಪನಗಳನ್ನು ಮುಂದಿನ ವರ್ಷ ಮಾರ್ಚ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು. 50 ಲಕ್ಷ ರೂಪಾಯಿ ಮೀರಿದ ಆದಾಯ ಇರುವವರಿಗೆ ಮಾತ್ರ ನೋಟಿಸ್ ಕಳುಹಿಸಲಾಗಿದೆ ಎಂದು ಸಚಿವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.