ಬೆಂಗಳೂರು: ಸಂಸತ್ ಚುನಾವಣೆ ಆಗುವವರೆಗೆ ಮಾತ್ರ ಸಿದ್ದರಾಮಯ್ಯರವರು ಸಿಎಂ ಆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಸುಳ್ಳು ಎಂದು ನಿರೂಪಿಸಲು 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ತಿಳಿಸಲು ಅವರು ಇತರರನ್ನು ಛೂ ಬಿಡುತ್ತಿದ್ದರು ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯ ಮೂಲಕ ಕಾಂಗ್ರೆಸ್ ಕಡೆಯಿಂದ ನಮಗೊಂದು ಸಂದೇಶ ಲಭಿಸಿದೆ. ಅವರ ಹೇಳಿಕೆಯಿಂದ ವಿಷಯ ನಮಗೂ ಅರ್ಥ ಆಗಿದೆ ಎಂದರು.
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನವರು ದಲಿತರಿಗೆ ತೊಂದರೆ ಕೊಡುತ್ತ ಬಂದಿದ್ದರೂ ದಲಿತಪರ ಎನ್ನುತ್ತಿದ್ದಾರೆ. ಇವರು ಸಂಪೂರ್ಣವಾಗಿ ದಲಿತವಿರೋಧಿಗಳು ಎಂದು ಟೀಕಿಸಿದರು.
ಈಗಲೂ ಕಾಲ ಮಿಂಚಿಲ್ಲ. ಸಿದ್ದರಾಮಯ್ಯನವರು ನಾಳೆ ರಾಜೀನಾಮೆ ಕೊಟ್ಟು ಪರಮೇಶ್ವರ್ ಅಥವಾ ಕೆ.ಎಚ್.ಮುನಿಯಪ್ಪನವರಿಗೆ ಸಿಎಂ ಸ್ಥಾನ ಕೊಡಬೇಕು. ಈ ಮೂಲಕ ಉತ್ತಮ ಹೆಸರು ಪಡೆಯಲಿ. ಇಲ್ಲವಾದರೆ, ಅವರಂಥ ಕಪಟ ರಾಜಕಾರಣಿ ಬೇರೊಬ್ಬರಿಲ್ಲ. ಸಿದ್ದರಾಮಯ್ಯರು ವಂಚನೆ, ಮೋಸಕ್ಕೆ ಇನ್ನೊಂದು ಹೆಸರು ಎಂದು ಜನ ಸಾರಿ ಸಾರಿ ಹೇಳುತ್ತಾರೆ ಎಂದು ನುಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.