ನವದೆಹಲಿ: ಸ್ವಾಯತ್ತ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ (CES) ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯವು ಅಮಾನತುಗೊಳಿಸಿದೆ. CES ಸಹ-ಸಂಸ್ಥಾಪಕ ಹಾಗೂ ಲೇಖಕ, ಅಂಕಣಕಾರ ಹರ್ಷ್ ಮಂದರ್ ಅವರು ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಎಫ್ಸಿಆರ್ಎ ಪರವಾನಗಿಯನ್ನು 180 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಹೀಗಾಗಿ CESಗೆ ಗೃಹ ಸಚಿವಾಲಯದ ಅನುಮತಿಯಿಲ್ಲದೆ ತಾಜಾ ವಿದೇಶಿ ಕೊಡುಗೆಗಳನ್ನು ಪಡೆಯಲು ಅಥವಾ ಅಸ್ತಿತ್ವದಲ್ಲಿರುವ ದೇಣಿಗೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
ನೋಂದಾಯಿತ ಪತ್ರಿಕೆಯ ಯಾವುದೇ ವರದಿಗಾರ, ಅಂಕಣಕಾರ, ವ್ಯಂಗ್ಯಚಿತ್ರಕಾರ, ಸಂಪಾದಕ, ಮಾಲೀಕರು, ಪ್ರಿಂಟರ್ ಅಥವಾ ಪ್ರಕಾಶಕರು ಯಾವುದೇ ವಿದೇಶಿ ಕೊಡುಗೆಯನ್ನು ಸ್ವೀಕರಿಸುವಂತಿಲ್ಲ ಎಂದು FCRA ಯ ವಿಭಾಗ 3(1)(b) ಹೇಳುತ್ತದೆ. 2011-’12 ರಿಂದ 2017-’18 ರ ಆರ್ಥಿಕ ವರ್ಷದಲ್ಲಿ 12,64,671 ರೂ ಮೊತ್ತದ ವಿದೇಶಿ ಕೊಡುಗೆಯನ್ನು ಸಿಇಎಸ್ ಟ್ರಸ್ಟಿ ಹರ್ಷ್ ಮಂದರ್ ಅವರು ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ವಿದೇಶದಿಂದ ಪಡೆದ ದೇಣಿಗೆಯನ್ನು ಹರ್ಷ್ ಮಂದರ್ ಅವರು ರಾಜಕೀಯ ಪಿತೂರಿ ನಡೆಸಲು ಬಳಸಿದ್ದಾರೆ ಎಂಬ ಆರೋಪವಿದೆ. ಸಿಎಎ ವಿರೋಧಿ ಹೋರಾಟದಲ್ಲಿ ಇವರು ಸಕ್ರಿಯವಾಗಿದ್ದರು.
Finally @harsh_mander NGO lost #FCRA licence for diverting funds for political propaganda!
It was 24th Sep 2020 complaint by LRO! @AmitShah https://t.co/iSorfa0bMS— Legal Rights Observatory- LRO (@LegalLro) June 21, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.