ನವದೆಹಲಿ: ಭೂಕುಸಿತ ಮತ್ತು ರಸ್ತೆ ತಡೆಗಳಿಂದಾಗಿ ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿ ಸಿಲುಕಿದ್ದ 300ಕ್ಕೂ ಹೆಚ್ಚು ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಉತ್ತರ ಸಿಕ್ಕಿಂನ ಚುಂಗ್ಥಾಂಗ್ನಲ್ಲಿ ಸಿಕ್ಕಿಬಿದ್ದ 300 ಪ್ರವಾಸಿಗರನ್ನು ರಾಜಧಾನಿ ಗ್ಯಾಂಗ್ಟಾಕ್ಗೆ ಕರೆತರುವ ನಿಟ್ಟಿನಲ್ಲಿ ತಾತ್ಕಾಲಿಕ ಸೇತುವೆಯನ್ನು ದಾಟಲು ಭಾನುವಾರ ಸ್ಟ್ರೈಕಿಂಗ್ ಲಯನ್ ಡಿವಿಷನ್, ತ್ರಿಶಕ್ತಿ ಕಾರ್ಪ್ಸ್ನ ಪಡೆಗಳು ಸಹಾಯ ಮಾಡಿದೆ ಎಂದು ಅದು ಹೇಳಿದೆ. ಸಿಕ್ಕಿಬಿದ್ದ ಪ್ರವಾಸಿಗರಿಗೆ ಸೇನೆಯಿಂದ ಆಹಾರ, ವಿಶ್ರಾಂತಿ ಮತ್ತು ವೈದ್ಯಕೀಯ ಸೌಕರ್ಯಗಳನ್ನು ಒದಗಿಸಲಾಗಿದೆ.
ಶನಿವಾರ, ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿ ಸಿಲುಕಿರುವ 3,500 ಪ್ರವಾಸಿಗರನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್ಸ್ನ ಪಡೆಗಳು ಸಿಕ್ಕಿಂ ಸರ್ಕಾರಕ್ಕೆ ಸಹಾಯ ಮಾಡಿದೆ ಎಂದು ಹೇಳಿಕೆ ತಿಳಿಸಿದೆ. ಭೂಕುಸಿತದಿಂದಾಗಿ ವ್ಯಾಪಕವಾಗಿ ಹಾನಿಗೀಡಾದ ರಸ್ತೆಗಳಿಗೆ ಹವಾಮಾನ ಸಂಬಂಧಿತ ಬದಲಾವಣೆಗಳು ಮತ್ತು ಪುನಃಸ್ಥಾಪನೆ ಕಾರ್ಯಗಳ ದೃಷ್ಟಿಯಿಂದ ಜಿಲ್ಲೆಗೆ ಭೇಟಿ ನೀಡಲು ಪ್ರವಾಸಿಗರಿಗೆ ಸದ್ಯಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಉತ್ತರ ಸಿಕ್ಕಿಂ ಜಿಲ್ಲಾಧಿಕಾರಿ (ಡಿಸಿ) ಹೇಮ್ ಕುಮಾರ್ ಚೆಟ್ರಿ ಭಾನುವಾರ ಹೇಳಿದ್ದಾರೆ.
ಪ್ರವಾಸಿಗರನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ್ದಕ್ಕಾಗಿ ಬಿಆರ್ಒ, ಜಿಆರ್ಇಎಫ್, ಐಟಿಬಿಪಿ, ಸೇನೆ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಧನ್ಯವಾದ ಅರ್ಪಿಸಿದರು “ಮಂಗನ್ ನಡುವೆ ನಡೆಯುತ್ತಿರುವ ರಸ್ತೆಗಳ ಪುನಃಸ್ಥಾಪನೆಯಿಂದಾಗಿ ಉತ್ತರ ಸಿಕ್ಕಿಂಗೆ ಭೇಟಿ ನೀಡಲು ಪ್ರವಾಸಿಗರಿಗೆ ಹೊಸ ಅನುಮತಿ ನೀಡದಿರಲು ನಾವು ನಿರ್ಧರಿಸಿದ್ದೇವೆ” ಎಂದಿದ್ದಾರೆ.
“ನಮ್ಮ ತಕ್ಷಣದ ಆದ್ಯತೆಯು ಭೂಕುಸಿತ ಮತ್ತು ಭಾರೀ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆಗಳನ್ನು ಪುನಃಸ್ಥಾಪಿಸುವುದು ಮತ್ತು ರಸ್ತೆ ಸಂಪರ್ಕವನ್ನು ಪುನಃಸ್ಥಾಪಿಸಿದ ನಂತರ ನಾವು ಪ್ರವಾಸಿಗರಿಗೆ ಬರಲು ಅವಕಾಶ ನೀಡುತ್ತೇವೆ” ಎಂದು ಚೆಟ್ರಿ ಹೇಳಿದ್ದಾರೆ.
Troops of #TrishaktiCorps continued assistance to stranded tourists at Chungthang, North #Sikkim. On second day of the rescue effort, assistance provided to 300 stranded tourists who came down from Lachung & Lachen. Assistance to cross over the temporary bridge, food, place to… pic.twitter.com/jfXVmOmmkB
— Trishakticorps_IA (@trishakticorps) June 18, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.