ಕುನೋ: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್ಪಿ)ಕ್ಕೆ ಇನ್ನೂ ಮೂರು ಚಿರತೆಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಬಿಡುಗಡೆಗೊಂಡ ಚೀತಾಗಳ ಸಂಖ್ಯೆ ಆರಕ್ಕೇರಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಅಗ್ನಿ ಮತ್ತು ವಾಯು ಎಂಬ ಎರಡು ಗಂಡು ಮತ್ತು ಒಂದು ಹೆಣ್ಣು ಗಾಮಿನಿ ಎಂಬ ಚೀತಾವನ್ನು ಶುಕ್ರ ವಾರ ಕುನೋ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಗಿದೆ. ಈ ಮೂರನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜೆಎಸ್ ಚೌಹಾಣ್ ತಿಳಿಸಿದ್ದಾರೆ.
ಇದರೊಂದಿಗೆ ಕೆಎನ್ಪಿಯಲ್ಲಿ ಇದುವರೆಗೆ ಬಿಡಲಾದ ಚೀತಾಗಳ ಸಂಖ್ಯೆ ಆರಕ್ಕೆ ಏರಿದೆ. ಪ್ರಸ್ತುತ 11 ಸ್ಥಳಾಂತರಗೊಂಡ ಚೀತಾಗಳು ಮತ್ತು ನಾಲ್ಕು ಮರಿಗಳನ್ನು ಆವರಣಗಳಲ್ಲಿ ಇಡಲಾಗಿದೆ, ಇವುಗಳನ್ನು ಉದ್ಯಾನವನಕ್ಕೆ ಇನ್ನಷ್ಟೇ ಬಿಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೆಎನ್ಪಿಗೆ ತರಲಾದ ಎಂಟು ಚೀತಾಗಳಲ್ಲಿ ಮೂರು ನಮೀಬಿಯಾದ ಹೆಣ್ಣು ಚೀತಾಗಳು ಮತ್ತು ಒಂದು ಗಂಡು ಚೀತಾ ಇನ್ನೂ ಆವರಣಗಳಲ್ಲಿ ಇರಿಸಲಾಗಿದೆ ಎಂದಿದ್ದಾರೆ
“ನಮೀಬಿಯಾದ ಹೆಣ್ಣು ಚಿರತೆಗಳಲ್ಲಿ ಒಂದನ್ನು ಇನ್ನೆರಡು ದಿನಗಳಲ್ಲಿ ಮುಕ್ತ ಪರಿಸರಕ್ಕೆ ಬಿಡುಗಡೆ ಮಾಡಲಾಗುವುದು. ನಮೀಬಿಯಾದ ಮತ್ತೊಂದು ಹೆಣ್ಣು ಚೀತಾ ಮರಿಗಳಿಗೆ ಜನ್ಮ ನೀಡಿದ್ದರಿಂದ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಮೂರನೇ ಹೆಣ್ಣು ಚೀತಾ ಬಿಡುಗಡೆಗೆ ಯೋಗ್ಯವಾಗಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.