ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಮ್ಯೂಸಿಯಂ ಎಕ್ಸ್ಪೋ 2023 ಅನ್ನು ಉದ್ಘಾಟಿಸಲಿದ್ದಾರೆ. 47ನೇ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಇಂಟರ್ನ್ಯಾಷನಲ್ ಮ್ಯೂಸಿಯಂ ಎಕ್ಸ್ಪೋವನ್ನು ಆಯೋಜಿಸಲಾಗಿದೆ.
ಈ ವರ್ಷ ‘ವಸ್ತುಸಂಗ್ರಹಾಲಯಗಳು, ಸುಸ್ಥಿರತೆ ಮತ್ತು ಯೋಗಕ್ಷೇಮ’ ಎಂಬ ಥೀಮ್ ಅಡಿಯಲ್ಲಿ ಎಕ್ಸ್ಪೋ ಅನ್ನು ಆಯೋಜನೆ ಮಾಡಲಾಗುತ್ತಿದೆ.
ಮ್ಯೂಸಿಯಂ ಭಾರತದ ವರ್ತಮಾನವನ್ನು ರೂಪಿಸಲು ಕೊಡುಗೆ ನೀಡಿದ ಭಾರತದ ಗತಕಾಲಕ್ಕೆ ಸಂಬಂಧಿಸಿದ ಐತಿಹಾಸಿಕ ಘಟನೆಗಳು, ವ್ಯಕ್ತಿತ್ವಗಳು, ಕಲ್ಪನೆಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸಲು ಮತ್ತು ಪ್ರದರ್ಶಿಸಲು ಸಮಗ್ರ ಪ್ರಯತ್ನವಾಗಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಉತ್ತರ ಮತ್ತು ದಕ್ಷಿಣ ಬ್ಲಾಕ್ಗಳಲ್ಲಿ ಮುಂಬರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ವರ್ಚುವಲ್ ವಾಕ್ಥ್ರೂ ಅನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನಮಂತ್ರಿಯವರು ಇಂಟರ್ನ್ಯಾಶನಲ್ ಮ್ಯೂಸಿಯಂ ಎಕ್ಸ್ಪೋದ ಮ್ಯಾಸ್ಕಾಟ್, ಗ್ರಾಫಿಕ್ ನೋವಲ್- ಮ್ಯೂಸಿಯಂನಲ್ಲಿ ಒಂದು ದಿನ, ಭಾರತೀಯ ವಸ್ತುಸಂಗ್ರಹಾಲಯಗಳ ಡೈರೆಕ್ಟರಿ, ಕರ್ತವ್ಯ ಪಥದ ಪಾಕೆಟ್ ಮ್ಯಾಪ್ ಮತ್ತು ಮ್ಯೂಸಿಯಂ ಕಾರ್ಡ್ಗಳನ್ನು ಅನಾವರಣಗೊಳಿಸಲಿದ್ದಾರೆ. ಇಂಟರ್ನ್ಯಾಷನಲ್ ಮ್ಯೂಸಿಯಂ ಎಕ್ಸ್ಪೋದ ಮ್ಯಾಸ್ಕಾಟ್ ಚೆನ್ನಪಟ್ಟಣಂ ಕಲಾ ಶೈಲಿಯಲ್ಲಿ ಮರದಿಂದ ಮಾಡಿದ ಡ್ಯಾನ್ಸಿಂಗ್ ಗರ್ಲ್ನ ಸಮಕಾಲೀನ ಆವೃತ್ತಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.