ಟೋಕಿಯೊ: ಜಪಾನಿನ ವೈದ್ಯಕೀಯ ಸಾಧನಗಳ ಕಂಪನಿಗಳ ಪ್ರತಿನಿಧಿಗಳ ಜೊತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ಮಂಗಳವಾರ ಟೋಕಿಯೋದಲ್ಲಿ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವೈದ್ಯಕೀಯ ಸಾಧನಗಳ ವಲಯವು ಭಾರತದ ಆರೋಗ್ಯ ಕ್ಷೇತ್ರದ ಅತ್ಯಗತ್ಯ ಮತ್ತು ಅವಿಭಾಜ್ಯ ಅಂಗವಾಗಿದೆ. ವೈದ್ಯಕೀಯ ಸಾಧನಗಳು ಮತ್ತು ಡಯಾಗ್ನೋಸ್ಟಿಕ್ ಕಿಟ್ಗಳ ದೊಡ್ಡ ಪ್ರಮಾಣದ ಉತ್ಪಾದನೆಯ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ದೇಶೀಯ ಮತ್ತು ಜಾಗತಿಕ ಯುದ್ಧವನ್ನು ಭಾರತ ಬೆಂಬಲಿಸಿದ್ದರಿಂದ ಈ ವಲಯದ ಕೊಡುಗೆ ಇನ್ನಷ್ಟು ಪ್ರಮುಖವಾಯಿತು. ವೈದ್ಯಕೀಯ ಸಾಧನಗಳ ವಲಯವು ಅದರ ಪ್ರಸ್ತುತ ಗಾತ್ರದ US$ 11 ಶತಕೋಟಿಯಿಂದ 2030ರ ಹೊತ್ತಿಗೆ 4 ಪಟ್ಟು ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ” ಎಂದರು.
ಹೆಚ್ಚುತ್ತಿರುವ ಆರೋಗ್ಯ ಅಗತ್ಯತೆಗಳು ಮತ್ತು ಬೆಳವಣಿಗೆಯನ್ನು ಸುಗಮಗೊಳಿಸುವ ಸರ್ಕಾರದ ಬದ್ಧತೆಯ ಬೆಂಬಲದೊಂದಿಗೆ, ಭಾರತೀಯ ವೈದ್ಯಕೀಯ ಸಾಧನಗಳ ಉದ್ಯಮವು ಮುಂದಿನ 25 ವರ್ಷಗಳಲ್ಲಿ ಉತ್ಪಾದನೆ ಮತ್ತು ನಾವೀನ್ಯತೆಗಳಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುವ ಶಕ್ತಿಯನ್ನು ಹೊಂದಿದೆ ಮತ್ತು ಅದರ ಬೆಳವಣಿಗೆ ಮತ್ತು ಪ್ರಗತಿಗೆ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.