ಇಸ್ಲಾಮಾಬಾದ್: ಪಾಕಿಸ್ಥಾನ ಸೇನೆಯ ವಿರುದ್ಧದ ತನ್ನ ಹೋರಾಟಕ್ಕೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ʼದಿ ಕಾಶ್ಮೀರಿ ಫೈಲ್ಸ್ʼ ಸಿನಿಮಾದ ಹಾಡನ್ನು ಬಳಸುವ ಮೂಲಕ ಭಾರತೀಯರ ಟ್ರೋಲ್ಗೆ ಗುರಿಯಾಗಿದ್ದಾರೆ.
ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ನಂತರ ಅವರ ಬೆಂಬಲಿಗರು ಪಾಕ್ನಾದ್ಯಂತ ಎರಡು ದಿನಗಳ ಕಾಲ ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಪಾಕಿಸ್ತಾನದ ರಾಜಧಾನಿಯಲ್ಲಿ ಸೈನಿಕರನ್ನು ನಿಯೋಜಿಸಲಾಯಿತು. ಪೊಲೀಸರ ಪ್ರಕಾರ, ಪಿಟಿಐ ಪಕ್ಷದ 500 ಕ್ಕೂ ಹೆಚ್ಚು ದುಷ್ಕರ್ಮಿಗಳು ಬುಧವಾರ ಮುಂಜಾನೆ ಪ್ರಧಾನಿಯ ಮಾಡೆಲ್ ಟೌನ್ ಲಾಹೋರ್ ನಿವಾಸವನ್ನು ತಲುಪಿ ಅಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. ಇದರ ಮಧ್ಯೆ, ವ್ಯಂಗ್ಯಾತ್ಮಕ ಬೆಳವಣಿಗೆ ನಡೆದಿದೆ, ಇಮ್ರಾನ್ ಖಾನ್ ಅವರು ಪಾಕ್ ಸೇನೆ ವಿರುದ್ಧದ ತಮ್ಮ ಹೋರಾಟಕ್ಕೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ ಫೈಲ್ಸ್ ಸಿನಿಮಾದ “ಹಮ್ ದೇಖೇಂಗೆ” ಹಾಡನ್ನು ಬಳಸಿದ್ದಾರೆ. ಅವರ ಇನ್ಸ್ಟಾ ಗ್ರಾಂ ರೀಲ್ನಲ್ಲಿ ಈ ಹಾಡು ಬಳಕೆ ಮಾಡಲಾಗಿದೆ.
ಈ ಚಲನಚಿತ್ರವು ಪಾಕಿಸ್ತಾನದ ಪ್ರಾಯೋಜಕತ್ವದ ಮೂಲಭೂತ ಇಸ್ಲಾಮಿಸ್ಟ್ಗಳಿಂದ ನಡೆದ ಸಾವಿರಾರು ಕಾಶ್ಮೀರಿ ಪಂಡಿತರ ನರಮೇಧವನ್ನು ಆಧರಿಸಿದೆ. ಇಂತಹ ಸಿನಿಮಾದ ಹಾಡನ್ನು ಬಳಸಿರುವುದಕ್ಕೆ ಭಾರತಕ್ಕೆ ಫುಲ್ ಟ್ರೋಲ್ ಮಾಡಲಾಗುತ್ತಿದೆ. ಸದ್ಯ ಇಮ್ರಾನ್ ಬಿಡುಗಡೆಯಾಗಿದ್ದು, ಇಂದು ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ.
How ironic! Imran Khan’s PTI using song from @vivekagnihotri’s The Kashmir Files against their movement targeting Pakistan Army. The Kashmir Files was a historic film on Pakistan sponsored Islamist terrorism in Kashmir since 1989-90 forcing exodus of Kashmiri Hindus.
Today… pic.twitter.com/I5dRUmFczD
— Aditya Raj Kaul (@AdityaRajKaul) May 11, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.