ನವದೆಹಲಿ: ನಾವು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ರಷ್ಯಾದ ಉಪಪ್ರಧಾನಿ ಮತ್ತು ವ್ಯಾಪಾರ ಸಚಿವ ಡೆನಿಸ್ ಮಾಂಟುರೊವ್ ಅವರು ಹೇಳಿದ್ದಾರೆ
ಉಭಯ ದೇಶಗಳಲ್ಲಿನ ಮಾರುಕಟ್ಟೆಗಳಿಗೆ ಉತ್ಪಾದನೆಯ ಪರಸ್ಪರ ಪ್ರವೇಶದ ವಿಷಯಗಳ ಬಗ್ಗೆ ಭಾರತ ಮತ್ತು ರಷ್ಯಾ ವಿಶೇಷ ಗಮನವನ್ನು ನೀಡುತ್ತವೆ ಎಂದಿದ್ದಾರೆ. ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ತೀವ್ರಗೊಳಿಸಲು ರಷ್ಯಾ ಮತ್ತು ಯುರೇಷಿಯನ್ ಆರ್ಥಿಕ ಆಯೋಗವು ಎದುರು ನೋಡುತ್ತಿದೆ ಎಂದಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್, ಎರಡೂ ದೇಶಗಳು ಈ ವಿಷಯವನ್ನು ಆದ್ಯತೆಯಾಗಿ ಪರಿಗಣಿಸುತ್ತವೆ, ಯಾಕೆಂದರೆ ಉಭಯ ದೇಶಗಳ ನಡುವಣ ವ್ಯಾಪಾರ ಸಂಬಂಧದಲ್ಲಿ ನಿಜವಾದ ವ್ಯತ್ಯಾಸವನ್ನು ಇಂದು ಉಂಟು ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ಭಾರತ-ರಷ್ಯಾ ವ್ಯವಹಾರ ಸಂವಾದ 2023 ಅನ್ನು ಉದ್ದೇಶಿಸಿ ಮಾತನಾಡಿದ ಡಾ ಎಸ್ ಜೈಶಂಕರ್, ಭಾರತ-ರಷ್ಯಾ ಪಾಲುದಾರಿಕೆಯು ಇಂದು ಗಮನಾರ್ಹ ವಿಷಯವಾಗಿದೆ ಏಕೆಂದರೆ ಅದು ಬದಲಾಗದೆ ಸ್ಥಿರವಾಗಿ ವೃದ್ಧಿಸುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.