ಅಮೃತಸರ: ಮುಖದಲ್ಲಿ ತಿರಂಗಾವನ್ನು ಬಿಡಿಸಿ ಪಂಜಾಬ್ನ ಅಮೃತಸರದ ಗೋಲ್ಡನ್ ಟೆಂಪಲ್ನೊಳಗೆ ಪ್ರವೇಶಿಸಿದ ಯುವತಿಯೊಬ್ಬಳನನ್ನು ಅಲ್ಲಿನ ಸಿಬ್ಬಂದಿ ತಡೆದು ನಿಲ್ಲಿಸಿದ ಘಟನೆ ನಡೆದಿದೆ. ಭಾರತೀಯ ಧ್ವಜದ ತಿರಂಗಾದ ಬಣ್ಣ ಮುಖದಲ್ಲಿ ಇದ್ದ ಕಾರಣ ತನಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆಕೆ ಆರೋಪಿಸಿದ್ದಾಳೆ.
ಘಟನೆಯ ಬಗೆಗಿ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪವಿತ್ರ ಸಿಖ್ ದೇಗುಲದ ಕಾವಲುಗಾರನೊಬ್ಬ ಆಕೆಗೆ “ಇದು ಪಂಜಾಬ್” ಎಂದು ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಆತನಿಗೆ ಆಕೆ “ಇದು ಭಾರತವಲ್ಲವೇ?” ಎಂದು ಮರು ಪ್ರಶ್ನೆ ಹಾಕಿರುವುದೂ ಸ್ಪಷ್ಟವಾಗಿ ಕೇಳಿದೆ. ಮಹಿಳೆಯು ಫೋನ್ನಲ್ಲಿ ವಿಡಿಯೋವನ್ನು ಚಿತ್ರೀಕರಿಸಿದ್ದಾಳೆ. ಈ ವೇಳೆ ಗಾರ್ಡ್ ಆಕ್ರಮಣಕಾರಿಯಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಮಹಿಳೆಯ ಫೋನ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಗೋಲ್ಡನ್ ಟೆಂಪಲ್ ನಿರ್ವಹಿಸುವ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು ಕ್ಷಮೆಯಾಚಿಸಿದೆ ಆದರೆ ಮಹಿಳೆಯು ಮುಖದ ಮೇಲೆ ಅಶೋಕ ಚಕ್ರವನ್ನು ಹೊಂದಿಲ್ಲದ ಕಾರಣ ಅದು ಭಾರತದ ಧ್ವಜವಲ್ಲವೆಂದು ಪ್ರತಿಪಾದಿಸಿದೆ.
1) A girl was stopped from entering Golden Temple because she had an Indian flag painted on her face.
The man who denied her entry into Golden Temple said, this is Punjab not India. pic.twitter.com/IfUi74poIk
— Anshul Saxena (@AskAnshul) April 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.