ನವದೆಹಲಿ: ಡೋಕ್ಲಾಮ್ನಲ್ಲಿ ತನ್ನ ನಿಲುವನ್ನು ಬದಲಾಯಿಸಲು ಭೂತಾನ್ಗೆ ಚೀನೀ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ಹೆಚ್ಚು ಒತ್ತಡ ಹೇರುತ್ತಿದೆ ಎಂದು ದೆಹಲಿ ಮೂಲದ ವಿದೇಶಾಂಗ ನೀತಿಯ ಚಿಂತಕರ ಚಾವಡಿ ರೆಡ್ ಲ್ಯಾಂಟರ್ನ್ ಅನಾಲಿಟಿಕಾ (ಆರ್ಎಲ್ಎ) ವರದಿ ಹೇಳಿದೆ.
“ಸ್ನೇಹ ಒಪ್ಪಂದದಂತಹ ಒಪ್ಪಂದಗಳ ಅಡಿಯಲ್ಲಿ ಭಾರತದೊಂದಿಗೆ ತನ್ನ ವಿದೇಶಾಂಗ ನೀತಿಯನ್ನು ಸಮನ್ವಯಗೊಳಿಸಲು ಒಪ್ಪಿಕೊಂಡ ಭೂತಾನ್, ಈಗ ತನ್ನ ನಿಲುವನ್ನು ಬದಲಾಯಿಸಲು ಚೀನೀ ಕಮ್ಯುನಿಸ್ಟ್ ಪಾರ್ಟಿಯಿಂದ ಭಾರೀ ಒತ್ತಡವನ್ನು ಎದುರಿಸುತ್ತಿದೆ. ಇದರಿಂದಾಗಿಯೇ ಇತ್ತೀಚಿಗೆ ಭೂತಾನ್ ಪ್ರಧಾನ ಮಂತ್ರಿ ಲೋಟೆ ಶೆರಿಂಗ್ ಅವರು, “ಚೀನಾ ಡೋಕ್ಲಾಮ್ ವಿವಾದದಲ್ಲಿ ಸಮಾನ ಪಾಲನ್ನು ಹೊಂದಿದೆ. ಡೋಕ್ಲಾಮ್ ವಿವಾದವನ್ನು ಪರಿಹರಿಸುವುದು ಕೇವಲ ಭೂತಾನ್ಗೆ ಮಾತ್ರ ಸಂಬಂಧಿಸಿದ್ದು ಅಲ್ಲ, ಎಲ್ಲಾ ಮೂರು ದೇಶಗಳು – ಭೂತಾನ್, ಭಾರತ ಮತ್ತು ಚೀನಾ ಸಮಾನ ಪಾಲುದಾರರು” ಎಂಬ ಹೇಳಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಡೋಕ್ಲಾಮ್ ಭಾರತ, ಭೂತಾನ್ ಮತ್ತು ಚೀನಾ ನಡುವಿನ ವಿವಾದಿತ ಪ್ರದೇಶವಾಗಿದೆ. ಚೀನೀ ಕಮ್ಯುನಿಸ್ಟ್ ಪಾರ್ಟಿ ನೇತೃತ್ವದಲ್ಲಿ ನಿರ್ಮಾಣ ವಾಹನಗಳು ಮತ್ತು ರಸ್ತೆ ನಿರ್ಮಾಣ ಸಾಧನಗಳೊಂದಿಗೆ ಚೀನಾದ ಪಡೆಗಳು ಡೋಕ್ಲಾಮ್ನಲ್ಲಿ ಅಸ್ತಿತ್ವದಲ್ಲಿರುವ ರಸ್ತೆಯನ್ನು ದಕ್ಷಿಣಕ್ಕೆ ವಿಸ್ತರಿಸಲು ಪ್ರಾರಂಭಿಸಿದ 2017 ರಲ್ಲಿ ಡೋಕ್ಲಾಮ್ ವಿವಾದ ಮುನ್ನಲೆಗೆ ಬಂದಿತು. ಸಂಪೂರ್ಣ ಡೋಕ್ಲಾಮ್ ಮೇಲೆ ಚೀನಾ ತನ್ನದೇ ಹಕ್ಕು ಎಂಬಂತೆ ವರ್ತಿಸುತ್ತಿದೆ. ಆದರೆ ಭಾರತ ಈ ವಿಷಯದಲ್ಲಿ ಐತಿಹಾಸಿಗಳ ಒಪ್ಪಂದಗಳನ್ನು ಗೌರವಿಸುತ್ತಿದೆ ಎಂದು ರೆಡ್ ಲ್ಯಾಂಟರ್ನ್ ಅನಾಲಿಟಿಕಾ ವರದಿ ಹೇಳಿದೆ.
ಅದರ ಪ್ರಕಾರ, ಚೀನಾವು ದಶಕಗಳಿಂದ ಭೂತಾನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯೊಂದಿಗೆ ಆಟವಾಡುತ್ತಿದೆ, ಕೆಲವೊಮ್ಮೆ ಚೀನಾದ ನಕ್ಷೆಗಳಲ್ಲಿ ಭೂತಾನ್ನ ದೊಡ್ಡ ಭಾಗಗಳನ್ನು ಚೀನಾದ ಭಾಗವಾಗಿ ತೋರಿಸಿರುವ ಘಟನೆಯೂ ನಡೆದಿದೆ. ಕೆಲವೊಮ್ಮೆ ಭೂತಾನ್ನ ಭೂಪ್ರದೇಶದಲ್ಲಿ ಭಾರೀ ಮೂಲಸೌಕರ್ಯಗಳನ್ನು ನಿರ್ಮಿಸಲು ಮುಂದಾಗಿದೆ, ಆದರೆ ಹೆಚ್ಚಾಗಿ ವಿವಾದಿತ ಜಾಗದಲ್ಲಿ ಅಕ್ರಮ ನಿವೇಶನಗಳನ್ನು ನಿರ್ಮಿಸಲು ಅದು ಯತ್ನಿಸುತ್ತಲೇ ಇದೆ.
ಭೂತಾನ್ ಪ್ರದೇಶದ ಮೇಲೆ ಚೀನಾದ ಹೆಚ್ಚುತ್ತಿರುವ ಅತಿಕ್ರಮಣವನ್ನು ತಡೆಯಲು ಭೂತಾನ್ ಸೀಮಿತ ಆಯ್ಕೆಗಳನ್ನು ಹೊಂದಿದೆ ಎಂದು ತೋರುತ್ತದೆಯಾದರೂ, ಚೀನಿ ಮಾತುಗಳಿಂದ ಆಮಿಷಕ್ಕೆ ಒಳಗಾಗದಿರುವುದು ಮತ್ತು ಶಾಂತಿವಾದಿ ನಿಲುವನ್ನು ತೆಗೆದುಕೊಳ್ಳುವುದು ಆ ದೇಶಕ್ಕೆ ಮುಖ್ಯವಾಗಿದೆ ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.