ನವದೆಹಲಿ: ಅಂತಾರಾಷ್ಟ್ರೀಯ ವಾಯುಯಾನ ಸುರಕ್ಷತಾ ಮಾನದಂಡದಲ್ಲಿ ಭಾರತ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ವಾಯುಯಾನ ಸುರಕ್ಷತೆಯ ಮೇಲ್ವಿಚಾರಣೆಯಲ್ಲಿ ದೇಶವು ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿರುವುದರಿಂದ ಭಾರತದ ಅಂತರರಾಷ್ಟ್ರೀಯ ವಾಯುಯಾನ ಸುರಕ್ಷತೆ ಮಾನದಂಡ ವರ್ಗ ಒಂದರಲ್ಲಿ ಉಳಿದುಕೊಂಡಿದೆ.
ಯುನೈಟೆಡ್ ಸ್ಟೇಟ್ಸ್ನ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ವಿಮಾನ ಕಾರ್ಯಾಚರಣೆಗಳು, ವಾಯು ಯೋಗ್ಯತೆ ಮತ್ತು ಸಿಬ್ಬಂದಿ ಪರವಾನಗಿಯನ್ನು ಒಳಗೊಂಡಿರುವ ಕ್ಷೇತ್ರಗಳಲ್ಲಿ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ)ನ ಆಡಿಟ್ ನಡೆಸಿದ ನಂತರ ಭಾರತವು ವರ್ಗ ಒಂದು ಸ್ಥಾನಮಾನವನ್ನು ಪಡೆದುಕೊಂಡಿದೆ.
FAA ತನ್ನ ಇಂಟರ್ನ್ಯಾಷನಲ್ ಏವಿಯೇಷನ್ ಸೇಫ್ಟಿ ಅಸೆಸ್ಮೆಂಟ್ (IASA) ಕಾರ್ಯಕ್ರಮದ ಅಡಿಯಲ್ಲಿ ಒಂದು ದೇಶವು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಸ್ಥಾಪಿಸಿದ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ. ವರ್ಗ 1ರಲ್ಲಿನ ದೇಶಗಳು ಯುಎಸ್ಎನಲ್ಲಿನ ಸ್ಥಳಗಳಿಗೆ ತಮ್ಮ ಸೇವೆಗಳನ್ನು ನಿರ್ವಹಿಸಲು ಮತ್ತು ವಿಸ್ತರಿಸಲು ಮತ್ತು ಯುಎಸ್ ಏರ್ ಕ್ಯಾರಿಯರ್ಗಳೊಂದಿಗೆ ಕೋಡ್ಶೇರ್ ಮಾಡಲು ಅನುಮತಿ ಪಡೆಯುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.