ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದೂ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ
ವೀರ್ ಸಾವರ್ಕರ್ ಅವರ ಸಹೋದರನ ಮಗನಾಗಿರುವ ಸತ್ಯಕಿ, ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ಇಂದು, ನನ್ನ ಅಜ್ಜ ದಿವಂಗತ ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ಈ ಭಾಷಣದಲ್ಲಿ ಮಾಡಿದ ಸುಳ್ಳು ಆರೋಪಗಳಿಗಾಗಿ ನಾನು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದೇನೆ” ಎಂದಿದ್ದಾರೆ.
ಅವರ ವಕೀಲರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ನಗರದ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, “ವೀರ ಸಾವರ್ಕರ್ ಅವರು ಪುಸ್ತವನ್ನು ಬರೆದಿದ್ದು, ಅದರಲ್ಲಿ ಜೈಲಿನಲ್ಲಿ ನಾನು ಮತ್ತು ಇತರು ಐದಾರು ಸ್ನೇಹಿತರು ಸೇರಿ ಮುಸ್ಲಿಂ ವ್ಯಕ್ತಿಗೆ ಹೊಡೆದವು, ಇದರಿಂದ ನಮಗೆ ಸಂತೋಷ ದೊರೆಯಿತು ಎಂದು ಬರೆದಿದ್ದಾರೆ” ಎಂದು ಹೇಳಿದ್ದಾರೆ. ಇದರ ವಿರುದ್ಧ ಸತ್ಯಕಿ ಪ್ರಕರಣ ದಾಖಲಿಸಿದ್ದಾರೆ.
Today, I have filed a complaint for criminal defamation against Rahul Gandhi for his false allegations made in this speech against my grand father late Shri. Vinayak Damodar Savarkar. @ABPNews @ZeeNews @News18India @aajtak @OpIndia_com pic.twitter.com/dUnzvWF9gP
— Satyaki Savarkar (@SatyakiSavarkar) April 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.